ಮುಖ್ಯ ಸುದ್ದಿ
ಜೆಇಇ ಮೈನ್ಸ್‌ನಲ್ಲಿ ಎಸ್‌ಆರ್‌ಎಸ್ ಸಾಧನೆ | ದಾಖಲೆ ನಿರ್ಮಿಸಿದ ವಿದ್ಯಾರ್ಥಿಗಳು

CHITRADURGA NEWS | 13 FEBRUARY 2024
ಚಿತ್ರದುರ್ಗ: ಜೆಇಇ ಮೈನ್ಸ್‌ನ ಮೊದಲ ಸ್ಲಾಟ್ ಪರೀಕ್ಷೆಯಲ್ಲಿ ನಗರದ ಎಸ್‌ಆರ್‌ಎಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಒಟ್ಟು 34 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚಿನ ಅಂಕಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಎಸ್.ಎಂ.ಮನೋಜ್ ಶೇ.98.23 ಅಂಕಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎನ್.ಮದನ್ (97.93), ಇ.ಜೀವಿಕ (95.37) ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದ್ದಾರೆ.
ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ರಘುಮೂರ್ತಿ, ಗೋವಿಂದಪ್ಪ | ಅಭಿವೃದ್ಧಿಗೆ ಶ್ರಮಿಸುವ ಭರವಸೆ
ಒಂದೇ ಕಾಲೇಜಿನ 34 ವಿದ್ಯಾರ್ಥಿಗಳು 90ಕ್ಕಿಂತ ಹೆಚ್ಚಿನ ಅಂಕಗಳಿಸಿರುವುದು ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಒಟ್ಟು 70 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಹಂತಕ್ಕೆ ಅರ್ಹತೆಗಳಿಸಿದ್ದಾರೆ.
ಎಸ್‌ಆರ್‌ಎಸ್ ಪಿಯು ಕಾಲೇಜು ಜೆಇಇ ಮೈನ್ಸ್ ಮತ್ತು ಅಡ್ವಾನ್ಸ್ಡ್ ವಿದ್ಯಾರ್ಥಿಗಳಿಗೆ ವಿಶೇಷ ಸ್ಟಾರ್ ಬ್ಯಾಚ್‌ಗಳನ್ನು ಹೊಂದಿದ್ದು, ಜೆಇಇ ಪರಿಣಿತ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಸಮಯೋಚಿತ ತರಬೇತಿ ನೀಡಲಾಗಿದೆ.
ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಂಶುಪಾಲ ಈ.ಗಂಗಾಧರ್ ಅಭಿನಂದಿಸಿದ್ದಾರೆ.
