ತಾಲೂಕು
ಸೃಷ್ಠಿ-ಸಿಂಧು ಭರತನಾಟ್ಯ ರಂಗಪ್ರವೇಶ | ಕಣ್ಮನ ಸೆಳೆದ ನೃತ್ಯ ವೈಭವ
ಚಿತ್ರದುರ್ಗ ನ್ಯೂಸ್.ಕಾಂ: ನಗರದ ವಿದ್ಯಾವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರು, ಜಿ.ಓ.ಬಸವರಾಜಪ್ಪ ಹಾಗೂ ಶೀಲಾ ದಂಪತಿಗಳ ಇಬ್ಬರೂ ಪುತ್ರಿಯರಾದ ಬಿ.ಎಂ.ಸೃಷ್ಟಿ ಮತ್ತು ಬಿ.ಎಂ.ಸಿಂಧು ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು.
ಚಿತ್ರದುರ್ಗ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರೂ ವಿದ್ಯಾರ್ಥಿನಿಯರು 5ನೇ ವಯಸ್ಸಿನಿಂದಲೇ ಲಾಸಿಕಾ ಫೌಂಡೇಶನ್‍ನ ವಿದುಷಿ ಶ್ವೇತಾ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.
ಭಾನುವಾರ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಭರತನಾಟ್ಯ ನೃತ್ಯ ವೈಭವದ ಮೂಲಕ ರಂಗಪ್ರವೇಶ ಮಾಡಿದರು.
ಭರತನಾಟ್ಯ ರಂಗಪ್ರವೇಶದ ಮೂಲಕ ಭಾರತೀಯ ನೃತ್ಯ ಪರಂಪರೆಯಲ್ಲಿ ಉತ್ಕøಷ್ಟ ಸ್ಥಾನದಲ್ಲಿರುವ ನೃತ್ಯ ಪ್ರಕಾರಕ್ಕೆ ಮತ್ತೆರಡು ಕಲಾ ಕುಸುಮಗಳು ಸೇರ್ಪಡೆಯಾದವು ಎಂದು ನೃತ್ಯಗುರು ಶ್ವೇತ ಮಂಜುನಾಥ್ ತಿಳಿಸಿದರು.
ಇದನ್ನೂ ಓದಿ: ಜಾಗತಿಕ ವಿದ್ಯಮಾನಗಳನ್ನು ಭಾರತೀಯ ದೃಷ್ಟಿಕೋನದಲ್ಲಿ ನೋಡಿ
ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ರಂಗಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ, ಜಿಲ್ಲಾ ಶರಣ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಮಾರಿ ಸೃಷ್ಠಿ ಮತ್ತು ಸಿಂಧು ಸಾಂಪ್ರದಾಯಿಕವಾಗಿ ಪುμÁ್ಪಂಜಲಿ ಮತ್ತು ಗಣೇಶ ಸ್ತುತಿಯೊಂದಿಗೆ ವೇದಿಕೆಗೆಯಲ್ಲಿ ಹೆಜ್ಜೆ ಹಾಕಿದರು. ರಂಗಪ್ರವೇಶದ ಪಠ್ಯ ಕ್ರಮಗಳಿಗೆ ಅನುಸಾರವಾಗಿ ಅಲರಿಪು, ಜತಿಶ್ವರ ಮತ್ತು ವರ್ಣ ನೃತ್ಯ ಬಂಧಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಪ್ರಯುಕ್ತ ವರ್ಣ ನೃತ್ಯವನ್ನು ಕನ್ನಡದಲ್ಲಿ ಸಂಯೋಜನೆ ಮಾಡಲಾಗಿತ್ತು. ರಾಮಾಯಣದ ಕಥಾ ಭಾಗವನ್ನು ಎಳೆ ಎಳೆಯಾಗಿ ನೃತ್ಯದ ಮೂಲಕ ಪ್ರಸುತ ಪಡಿಸಿದ ರೀತಿಗೆ ಪ್ರೇಕ್ಷಕರು ತಲೆದೂಗಿದರು.
ಹಾಡುಗರಿಕೆಯಲ್ಲಿ ವಿದ್ವಾನ್ ರೋಹಿತ್ ಭಟ್, ಮೃದಂಗದಲ್ಲಿ ನಾಗೇಂದ್ರ ಪ್ರಸಾದ್, ಕೊಳಲುವಾದನದಲ್ಲಿ ಶಶಾಂಕ್ ಜೋಡಿದಾರ್, ರಿಧಮ್ ಪ್ಯಾಡ್ ನಲ್ಲಿ ಸಾಯಿ ವಂಶಿ, ಪಿಟೀಲು ವಾದನದಲ್ಲಿ ವಿಭೂದೇಂದ್ರ ಸಿಂಹ ಹಾಗು ನಟುವಾಂಗದಲ್ಲಿ ನೃತ್ಯ ಕಲಾವಿದೆ ಶ್ವೇತ, ದ್ವಿತೀಯಾರ್ಧದಲ್ಲಿ ಶಿವಸ್ತುತಿ, ದೇವರನಾಮ, ತಿಲ್ಲಾನ ಮತ್ತು ಮಂಗಳದೊಂದಿಗೆ ಸುಮಾರು 3 ಗಂಟೆಗಳ ಕಾಲ ನಡೆದ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಸಂಪನ್ನಗೊಂಡಿತು.