Connect with us

ಎಬಿವಿಪಿ ರಾಜ್ಯ ಕಾರ್ಯಕಾರಿಣಿ | ಜಾಗತಿಕ ವಿದ್ಯಮಾನಗಳನ್ನು ಭಾರತೀಯ ದೃಷ್ಟಿಕೋನದಲ್ಲಿ ನೋಡಿ | ಚಿಂತಕ ಜಿ.ಬಿ.ಹರೀಶ್

ಚಿಂತಕ ಜಿ.ಬಿ.ಹರೀಶ್

ಮುಖ್ಯ ಸುದ್ದಿ

ಎಬಿವಿಪಿ ರಾಜ್ಯ ಕಾರ್ಯಕಾರಿಣಿ | ಜಾಗತಿಕ ವಿದ್ಯಮಾನಗಳನ್ನು ಭಾರತೀಯ ದೃಷ್ಟಿಕೋನದಲ್ಲಿ ನೋಡಿ | ಚಿಂತಕ ಜಿ.ಬಿ.ಹರೀಶ್

ಚಿತ್ರದುರ್ಗ ನ್ಯೂಸ್.ಕಾಂ: ಭಾರತ ತನ್ನ ಬೇರನ್ನು ಮರೆಯದೆ ವಿಜ್ಞಾನದ ಕಡೆಗೆ ಮುಖ ಮಾಡಿದ್ದರ ಪರಿಣಾಮ ಅಗಾಧವಾದ ಬೆಳವಣಿಗೆ ಸಾಧ್ಯವಾಗಿದೆ ಎಂದು ಚಿಂತಕ ಹಾಗೂ ಲೇಖಕ ಡಾ.ಜಿ.ಬಿ.ಹರೀಶ್ ಅಭಿಪ್ರಾಯಪಟ್ಟರು.

ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಚಲಿತ ಜಾಗತಿಕ ವಿದ್ಯುನ್ಮಾನ-ನಮ್ಮ ದೃಷ್ಟಿ ವಿಚಾರವಾಗಿ ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಇವರಿಗೆ ಗುಂಡುಪಿನ್ ತಯಾರು ಮಾಡಲು ಬರುವುದಿಲ್ಲ ಇನ್ನೂ ಸ್ವಾತಂತ್ರ್ಯವನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎನ್ನುವ ಹಂತದ ಚರ್ಚೆ ನಡೆದಿತ್ತು. ಆದರೆ, ಭಾರತ ಇಡೀ ಜಗತ್ತು ತನ್ನ ಕಡೆ ನೋಡುವಂತೆ ಬೆಳೆಯುತ್ತಿದೆ ಎಂದು ಹೇಳಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆ

ನಮ್ಮ ಸಂಸ್ಕøತಿ, ಪರಂಪರೆಯನ್ನು ಮರೆಯದೇ, ವಿಜ್ಞಾನ ತಂತ್ರಜ್ಞಾನಕ್ಕೆ ಬೆನ್ನು ಹಾಕದೇ ಭಾರತ ಮುಂದುವರೆದ ಪರಿಣಾಮ ವಿಶ್ವದ ವಿದ್ಯಮಾನದಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ಲಭಿಸಿದೆ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆ

ದೇಶದಲ್ಲಿ ಟೆಲಿಕಾಂ ಕ್ರಾಂತಿಯೇ ನಡೆದಿದೆ. ಹಿಂದೆ ಎಸ್‍ಟಿಡಿ ಬೂತ್ ಮುಂದೆ ಜನರ ಸರತಿ ಸಾಲಿರುತ್ತಿತ್ತು. ನಿರುದ್ಯೋಗಿಗಳಿಗೆ ಎಸ್‍ಟಿಡಿ ಬೂತ್, ಜೆರಾಕ್ಸ್ ಅಂಗಡಿಯೇ ಪರ್ಯಾಯಾವಾಗಿತ್ತು, ಭಾರತದ ಆರ್ಥಿಕತೆಯನ್ನು ಇಷ್ಟಕ್ಕೆ ಸೀಮಿತ ಮಾಡಲಾಗಿತ್ತು. ಆದರೆ, ಈಗ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಬಂದಿವೆ. ಆಪ್‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಮನೆಯಲ್ಲಿ ಕುಳಿತೇ ವಿದ್ಯುತ್ ಸೇರಿದಂತೆ ಎಲ್ಲ ಬಿಲ್ ಕಟ್ಟುತ್ತಿದ್ದೇವೆ ಎಂದರು.

ಜಿಡಿಪಿಯಲ್ಲಿ ಭಾರತ ಮೊದಲ 5ನೇ ಸ್ಥಾನಕ್ಕೆ ಬಂದು ಕುಳಿತಿದೆ. ಸೈಕಲ್‍ನಲ್ಲಿ ಉಪಗ್ರಹ ತೆಗೆದುಕೊಂಡು ಹೋಗುತ್ತಿದ್ದ, ಇಂಗ್ಲೀಷ್ ಬಾರದ, ತೃತೀಯ ಜಗತ್ತಿನ ದೇಶವೊಂದು ಇಂದು ಜಗದ್ಗುರುವಿನ ಸ್ಥಾನದಲ್ಲಿ ಕಾಣಿಸುತ್ತಿದೆ. ಭಾರತದ ಯೋಗ ಇಂದು ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. 21ನೇ ಶತಮಾನ ಭಾರತದ್ದು ಎನ್ನುವಂತಹ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ ಎಂದು ವಿವರಿಸಿದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ

ವಿದ್ಯಾರ್ಥಿಗಳು, ವಿದ್ಯಾರ್ಥಿ ನಾಯಕರು ಜಾಗತಿಕ ವಿದ್ಯಮಾನಗಳನ್ನು ಭಾರತೀಯ ದೃಷ್ಠಿಕೋನದಲ್ಲಿ ತಿಳಿದುಕೊಳ್ಳಬೇಕು. ಭಾರತದಲ್ಲಿ ಏನೇ ಬೆಳವಣಿಗೆಯಾದರೂ ಬೇರೆ ಬೇರೆ ದೇಶಗಳ ದೊಡ್ಡ ಮಾಧ್ಯಮಗಳಲ್ಲಿ ಸುದ್ದಿ ಬರುತ್ತದೆ. ಅದು ಅವರ ದೃಷ್ಟಿಕೋನವಾಗಿರುತ್ತದೆ. ಇಂದು ನಮ್ಮೆದುರು ಮಾಹಿತಿಗಳ ಮಹಾಪೂರವೇ ಇದೆ. ಆದರೆ, ಅದರಲ್ಲಿ ಯಾವುದನ್ನು ಹೇಗೆ ನೋಡಬೇಕು ಎನ್ನುವ ವಿವೇಕ ನಮ್ಮಲ್ಲಿರಬೇಕು ಎಂದರು.

ಸುದ್ದಿಗಳ ಸಂತೆಯಲ್ಲಿ ಯಾವುದು ಸತ್ಯ, ಯಾವುದು ಅಸತ್ಯ ಎನ್ನುವುದು ಗೊಂದಲವಾಗಿದೆ. ಅದರ ಅಸಲಿಯತ್ತು ತಿಳಿಯಲು ಫ್ಯಾಕ್ಟ್‍ಚೆಕ್ ಇದೆ. ಜಗತ್ತು ವಾಣಿಜ್ಯೀಕರಣಕ್ಕೆ ಒಳಗಾಗುತ್ತಿದೆ. ಮಾಹಿತಿಗಳ ರಾಜಕೀಯ ನಡೆಯುತ್ತಿದೆ. ಹಿಂದೆಲ್ಲಾ ಭಾರತೀಯ ಪ್ರವಾಸೋದ್ಯಮದ ಬಗ್ಗೆ ನಕಾರಾತ್ಮ ಸುದ್ದಿಗಳು ಬರುತ್ತಿದ್ದವು. ಭಾರತ ಪ್ರವಾಸಕ್ಕೆ ಸುರಕ್ಷಿತವಲ್ಲ ಎನ್ನುವಂತೆ ಬಿಂಬಿಸಲಾಗುತ್ತಿತ್ತು. ಆದರೆ, ಇಂದು ಎಲ್ಲವೂ ಬದಲಾಗಿದೆ ಎಂದರು.

ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆ

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲೂ ಚಿತ್ರದುರ್ಗದಿಂದಲೇ ಸ್ಪರ್ಧೆ

ನಮಗೆ ಇತಿಹಾಸ, ಸಂಸ್ಕøತಿ ಅರ್ಥವಾಗಬೇಕಾದರೆ, ಇಲ್ಲಿನ ಇತಿಹಾಸ, ಭೂಗೋಳ ಹಾಗೂ ಅರ್ಥಶಾಸ್ತ್ರ ಅಂದರೆ ಜಿಯೋ ಪಾಲಿಟಿಕ್ಸ್ ಓದಬೇಕು. 1876ರವರೆಗೆ ಆಫ್ಘಾನಿಸ್ಥಾನ ಭಾರತದ ಭಾಗವಾಗಿತ್ತು. ಬ್ರಿಟೀಷರು ವಿಭಜಿಸಿದರು. ಇದನ್ನು ಗಾಂಧಾರ ಎನ್ನುತ್ತಿದ್ದೆವು. 1907ರವರೆಗೆ ಟಿಬೇಟ್ ಭಾರತದ ಭಾಗವಾಗಿತ್ತು. ಅದಕ್ಕೆ ಸಮಸ್ಯೆ ಆದಾಗ ದಲೈಲಾಮಾ ಭಾರತಕ್ಕೆ ಬರುತ್ತೇವೆ ಎನ್ನುವುದು. ಇದು ತವರು. ಬರ್ಮಾ 1937 ರಲ್ಲಿ ಭಾರತದಿಂದ ಪ್ರತ್ಯೇಕವಾಗಿದೆ. 1947ರಲ್ಲಿ ನಡೆದ ಪಾಕಿಸ್ಥಾನ ವಿಭಜನೆ ಕೊನೆಯದಾಗಿತ್ತು. ಬ್ರಿಟಿಷರು ಭಾರತವನ್ನು ಹೀಗೆ ಹೊಡೆದು ಹೊಡೆದು ಛಿದ್ರ ಮಾಡಿದ್ದಾರೆ.ಇದನ್ನು ಯಾವ ಪುಸ್ತಕ, ಮಾಧ್ಯಮಗಳು ಹೇಳುವುದಿಲ್ಲ ಎಂದು ಜಿ.ಬಿ.ಹರೀಶ್ ವಿವರಿಸಿದರು.

ಎಬಿವಿಪಿ ರಾಜ್ಯ ಉಪಾಧ್ಯಕ್ಷ ಡಾ.ಎಂ.ಎನ್.ರವಿ ಮಂಡ್ಯ, ರಾಜ್ಯ ಕಾರ್ಯದರ್ಶಿ ಪ್ರೇಮಶ್ರೀ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಯುವ ಮುಖಂಡ ಎಂ.ಸಿ.ರಘುಚಂದನ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಹಿರಿಯ ಎಬಿವಿಪಿ ಕಾರ್ಯಕರ್ತ ಡಾ.ಕೆ.ರಾಜೀವಲೋಚನ, ಎಬಿವಿಪಿ ಪ್ರಮುಖರಾದ ಡಾ.ಎಸ್.ಆರ್.ಲೇಪಾಕ್ಷ, ಡಾ.ರವಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪಾಲಯ್ಯ, ಹನುಮಂತೇಗೌಡ, ಪವನ್, ಸಂದೀಪ್, ನಿವೃತ್ತ ಪ್ರಾಧ್ಯಾಪಕ ಲಿಂಗಪ್ಪ, ಭಾರ್ಗವಿ ದ್ರಾವಿಡ್ ಮತ್ತಿತರರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version