Connect with us

ಶ್ರೀ ಸದ್ಗುರು ಕಬೀರಾನಂದಾಶ್ರಮ | ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ, ಜನಪದ ಉತ್ಸವ ಮೆರವಣಿಗೆ

ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ,ಜನಪದ ಉತ್ಸವ ಮೆರವಣಿಗೆ

ಮುಖ್ಯ ಸುದ್ದಿ

ಶ್ರೀ ಸದ್ಗುರು ಕಬೀರಾನಂದಾಶ್ರಮ | ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ, ಜನಪದ ಉತ್ಸವ ಮೆರವಣಿಗೆ

CHITRADURGA NEWS | 09 MARCH 2024

ಚಿತ್ರದುರ್ಗ: ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಶಿವನಾಮ ಸಪ್ತಾಹದ 94 ನೇ ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವಲಿಂಗಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ ಮೆರವಣಿಗೆ ನಡೆಯಿತು.

ಇದನ್ನೂ ಓದಿ: ಮೊದಲ ಪಟ್ಟಿಯಲ್ಲಿ ಚಿತ್ರದುರ್ಗದ ಅಭ್ಯರ್ಥಿ ಹೆಸರಿಲ್ಲ | ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಲಿರುವ ಕಾಂಗ್ರೆಸ್

ಶ್ರೀ ಕಬೀರಾನಂದಸ್ವಾಮಿ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶ್ರೀಗಳ ಪಲ್ಲಕ್ಕಿ ಹಾಗೂ ಜಾನಪದ ಉತ್ಸವಕ್ಕೆ 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು ಚಾಲನೆ ನೀಡಿದರು.

ಉತ್ಸವದಲ್ಲಿ ಚಂಡೆ, ಕೀಲು ಕುದುರೆ, ತಮಟೆ, ಜಾಂಜ್ ನೃತ್ಯ, ಲಂಬಾಣಿ ನೃತ್ಯ, ಖಾಸಬೇಡರ ಪಡೆ, ಡೊಳ್ಳು ಕುಣಿತ, ಕೋಲಾಟ, ಭಜನೆ, ತಟ್ಟೆರಾಯ, ಶಾರದಾ ಬ್ರಾಸ್ ಬ್ಯಾಂಡ್, ಕಹಳೆ, ಉರಿಮೆ, ಗೊರವಪ್ಪ, ಛತ್ರಿ ಚಾಮರ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು.

ಇದನ್ನೂ ಓದಿ: ಸಂಗೇನಹಳ್ಳಿ ಕನ್ನಡ ಮೇಷ್ಟ್ರುಸಾಹಿತ್ಯ ತೋಟದ ಉತ್ಕøಷ್ಟ ಫಸಲು “ಜಗಳೂರು ಸೀಮೆಯ ಜಾತ್ರೆಗಳು”

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಜ್ಞಾನ ವಿಕಾಸ ಪಾಲಿಟೆಕ್ನಿಕ್ ಕಾಲೇಜಿನ ಸಿಬ್ಬಂದಿ, ಶ್ರೀ ಸದ್ಗುರು ಕಬೀರಾನಂದಸ್ವಾಮಿ ನರ್ಸಿಂಗ್ ಕಾಲೇಜು, ಪ್ರಥಮ ದರ್ಜೆ ಕಾಲೇಜು ಬಿ.ಇಡಿ. ಪಿಯು ಕಾಲೇಜಿನ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀ ಕಬೀರಾನಂದ ಸ್ವಾಮಿ ಆಂಗ್ಲ ಮತ್ತು ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯದ ಉಡುಗೆಯನ್ನು ತೊಡುವುದರ ಮೂಲಕ ಭಾವೈಕ್ಯತೆಯನ್ನು ಮೆರೆದಿದ್ದಾರೆ, ಇದೇ ರೀತಿ ಶಾಲೆಯ ಮಕ್ಕಳು ರಾಜ್ಯದ ವಿವಿಧ ಜಿಲ್ಲೆಯ ಸಾಂಸ್ಕøತಿಕ ಉಡುಗೆಯನ್ನು ಧರಿಸುವುದರ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಎಸ್‍ಓಪಿ ರಸಗೊಬ್ಬರ ಜಪ್ತಿ | ಕೃಷಿ ಇಲಾಖೆ ಜಾರಿ ದಳ ದಾಳಿ

ದಾರಿಯುದ್ದಕ್ಕೂ ಶ್ರೀಗಳ ಭಕ್ತಾಧಿಗಳು ಸ್ವಾಮಿಗಳ ದರ್ಶನವನ್ನು ಪಡೆಯುವ ಸಲುವಾಗಿ ಸಾಲುಗಟ್ಟಿ ನಿಂತಿದ್ದು, ಶ್ರೀಗಳಿಗೆ ಫಲ, ಹಾರ, ಕಾಣಿಕೆಯನ್ನು ನೀಡುವುದರ ಮೂಲಕ ದರ್ಶನವನ್ನು ಪಡೆದರು.

ಉತ್ಸವದಲ್ಲಿ ಮುಖಂಡರಾದ ನಂದಿ ನಾಗರಾಜ್, ಪ್ರಶಾಂತ್, ನಾಗರಾಜ್ ಸಗಂ, ಸತೀಶ್, ಓಂಕಾರ್, ರುದ್ರೇಶ್ ಪ್ರಭಂಜನ್, ಪೈಲ್ವಾನ್ ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ಶಾಸ್ತ್ರಿ, ತಿಪ್ಪೇಸ್ವಾಮಿ, ಯೋಗಿಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ: ಹಿರಿಯ ನ್ಯಾಯವಾದಿ ಎಂ.ಮಹೇಶ್ವರಪ್ಪ ಇನ್ನಿಲ್ಲ

ಉತ್ಸವವೂ ನಗರದ ಕಬೀರಾನಂದಾಶ್ರಮದಿಂದ ಪ್ರಾರಂಭವಾಗಿ ದೊಡ್ಡಪೇಟೆ, ಮೈಸೂರ್ ಕೆಫೆ, ಉಚ್ಚಂಗಿ ಯಲ್ಲಮ್ಮ ದೇವಾಲಯ, ಚಿಕ್ಕಪೇಟೆ, ಆನೆಬಾಗಿಲು, ಸಂತೇಪೇಟೆ, ಬಿ.ಡಿ.ರಸ್ತೆ, ಎಸ್.ಬಿ.ಎಂ.ವೃತ್ತ, ಕೋಮಲ ನರ್ಸಿಂಗ್ ಹೋಂ, ಧರ್ಮಶಾಲಾರಸ್ತೆ, ಪಾಶ್ರ್ವನಾಥ್ ಸ್ಕೂಲ್ ಮುಂಬಾಗ, ಇ.ಪಿ.ಬ್ರದರ್ಸ್, ಶಾರದ ಬ್ರಾಸ್ ಬ್ಯಾಂಡ್ ಮನೆ ಮುಂಭಾಗ, ರಂಗಯ್ಯನ ಬಾಗಿಲು, ಉಜ್ಜಯಿನಿ ಮಠ, ಕರುವಿನಕಟ್ಟೆ ವೃತ್ತಯಿಂದ ಶ್ರೀ ಕಬೀರಾನಂದ ಮಠ ತಲುಪಿತು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version