ಮುಖ್ಯ ಸುದ್ದಿ
ರೈತರ ಜೊತೆ ಕುಳಿತು ಕಷ್ಟ ಸುಖ ಆಲಿಸಿ, ಹೆಲ್ಮೆಟ್ ಜಾಗೃತಿ ಮೂಡಿಸಿದ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ
CHITRADURGA NEWS | 15 FEBRUARY 2024
ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಎದುರು ಕಳೆದ ಹತ್ತು ದಿನಗಳಿಂದ ಜಿಲ್ಲೆಯ ರೈತರು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಗೆ ಒತ್ತಾಯಿಸಿ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿದ್ದಾರೆ.
ಕೇಂದ್ರದಿಂದ ಒಂದಿಷ್ಟು ಅನುದಾನ ಬಿಡುಗಡೆ ಆಗುವವರೆಗೆ ನಾವಿಲ್ಲಿಂದ ಕದಲುವುದಿಲ್ಲ ಎಂದು ರೈತ ಸಂಘದ ಮುಖಂಡರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಪ್ರಕರಣ
ಹೀಗೆ ರೈತರು ಅರ್ನಿರ್ಧಿಷ್ಟಾವಧಿ ಧರಣಿಯ ಸ್ಥಳಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡಾ ಭೇಟಿ ನೀಡಿ ಅನುದಾನ ಬಿಡುಗಡೆಗೆ ಅವಿರತ ಪರಿಶ್ರಮಿಸುತ್ತಿದ್ದೇನೆ ಎಂದು ವಿವರಿಸಿದ್ದರು.
ಆದರೆ, ಎರಡು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ರೈತ ಮುಖಂಡರ ಜೊತೆ ಸರಳವಾಗಿ ಮಾತುಕತೆ ನಡೆಸುತ್ತಿರುವ ಪೋಟೋವೊಂದು ಸಾಕಷ್ಟು ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ತಾಮ್ರದ ಕೇಬಲ್ ಕಳ್ಳರ ಬಂಧನ | 11 ಲಕ್ಷ ಮೌಲ್ಯದ ತಂತಿ ವಶ
ಜಿಲ್ಲಾ ಪಂಚಾಯಿತಿ ಕಚೇರಿಯ ಮುಂಭಾಗದ ಮೆಟ್ಟಿಲುಗಳ ಮೇಲೆ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಅವರ ಜೊತೆಗೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಕುಳಿತು, ಜಿಲ್ಲೆಯ ರೈತರ ಸ್ಥಿತಿಗತಿ, ಹೋರಾಟದ ರೂಪುರೇಷೆಗಳ ಕುರಿತಂತೆ ಮಾತನಾಡಿದ್ದಾರೆ.
ಇದರೊಟ್ಟಿಗೆ ಜಿಲ್ಲೆಯಲ್ಲಿ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಎಲ್ಲರಿಗೂ ಅಭ್ಯಾಸ ಮಾಡಿಸಬೇಕು ಎಂದು ರೈತರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ಉತ್ಪಾಧನೆಯಲ್ಲಿ ಕರ್ನಾಟಕ ದೇಶಕ್ಕೆ ಮೊದಲು
ಈ ವೇಳೆ ರೈತ ಮುಖಂಡ ಸಿದ್ದವೀರಪ್ಪ, ಆಗಾಗ ಹೆಲ್ಮೆಟ್ ಹಾಕದವರನ್ನು ಹಿಡಿದು ದಂಡ ಹಾಕುವುದು, ಮತ್ತೆ ಸುಮ್ಮನಿರುವುದರಿಂದ ಎಲ್ಲರೂ ನಿರಂತರವಾಘಿ ಹೆಲ್ಮೆಟ್ ಹಾಕುವುದಿಲ್ಲ. ಇದರ ಬದಲಾಗಿ ಒಂದು ದಿನ ನಿಗಧಿ ಮಾಡಿ, ಅಂದಿನಿಂದ ಎಲ್ಲರೂ ಹೆಲ್ಮೆಟ್ ಕಡ್ಡಾಯವಾಗಿ ಧಾರಣೆ ಮಾಡಿರಬೇಕು. ಒಂದು ವೇಳೆ ಹಾಕದಿದ್ದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿ. ಅಂದಿನಿಂದ ಹೆಲ್ಮೆಟ್ ತಪಾಸಣೆ ನಿರಂತರವಾಗಿರಲಿ. ನಾವು ಸಹಕಾರ ನೀಡುತ್ತೇಬೆ ಎಂದು ತಿಳಿಸಿದ್ದಾರೆ. ಈ ಸಲಹೆಯನ್ನು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಸ್ವೀಕರಿಸಿದ್ದಾರೆ.
ಇನ್ನೂ ರಾತ್ರಿ ವೇಳೆಯಲ್ಲಿ ದೊಡ್ಡ ವಾಹನಗಳು ಸಂಚಾರ ಮಾಡುವಾಗ ಎದುರಿನಿಂದ ಬರುವ ಸಣ್ಣ ಪುಟ್ಟ ವಾಹನ ಸವಾರರಿಗೆ ಲೈಟ್ ಅನ್ನು ಹೈ ಬೀಮ್, ಲೋ ಬೀಮ್ ಮಾಡುವುದಿಲ್ಲ. ಇದರಿಂದ ಕ್ಷಣ ಕಾಲ ಕಣ್ಣೆ ಕಾಣಿಸದಂತಾಗುತ್ತದೆ. ಆಗ ಅಪಘಾತಗಳು ಸಂಭವಿಸುತ್ತವೆ. ರಾತ್ರಿ ವೇಳೆ ವಾಹನ ಚಾಲನೆ ಮಾಡುವವರಿಗೆ ಎದುರಿನಿಂದ ವಾಹನಗಳು ಬಂದಾಗ ಲೈಟ್ ಡಿಮ್ ಅಂಡ್ ಡಿಪ್ ಮಾಡುವಂತೆ ಸೂಚನೆ ಕೊಡಬೇಕು. ಅಥವಾ ಲೈಟ್‍ಗಳಿಗೆ ಅರ್ಧ ಭಾಗದವರೆಗೆ ಈ ಹಿಂದೆ ಹಾಕುತ್ತಿದ್ದಂತೆ ಮೇಲಾರ್ಧಕ್ಕೆ ಕಪ್ಪು ಪಟ್ಟಿ ಹಾಕಬೇಕು ಎಂದು ರೈತರು ಸಲಹೆ ನೀಡಿದ್ದಾರೆ. ಇದಕ್ಕೂ ಎಸ್ಪಿ ಸಮ್ಮತಿ ಸೂಚಿಸಿ ಅನುಷ್ಠಾನ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: 106 ಜನರಿಗೆ 4.80 ಕೋಟಿ ರೂ. ವಂಚನೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಕೂಡಾ ರೈತ ಕುಟುಂಬದಿಂದಲೇ ಬಂದಿರುವುದರಿಂದ ಜಿಲ್ಲೆಯ ರೈತರು ನಡೆಸುತ್ತಿರುವ ಧರಣಿ ಸ್ಥಳದಲ್ಲಿ ಅವರ ಜೊತೆಗೆ ಕುಳಿತಿರುವ ಈ ಪೋಟೋ ಮಾತ್ರ ವಿಶೇಷ ಗಮನ ಸೆಳೆಯುತ್ತಿದ್ದು, ಅಧಿಕಾರಿಗಳು ರೈತರ ಮಕ್ಕಳೇ ಆಗಿದ್ದರೆ ಎಷ್ಟು ಡೌನ್ ಟು ಅರ್ಥ್ ಇರುತ್ತಾರೆ ಎನ್ನುವ ಮಾತಿಗೆ ಅನ್ವರ್ಥವಾಗಿದೆ.