CHITRADURGA NEWS | 02 MAY 2025
ಚಿತ್ರದುರ್ಗ: ಹಿರಿಯೂರಿನ ರಾಷ್ಟ್ರೀಯ ಅಕಾಡೆಮಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಮಟ್ಟದ ಟಾಪರ್ಸ್‌ಗಳಾಗಿ ಹೊರ ಹೊಮ್ಮಿದ್ದಾರೆ.
ಹಿರಿಯೂರಿನ ನಂದನ್ ಎಚ್.ಡಿ ಹಾಗೂ ಮೌಲ್ಯ ಡಿ. ರಾಜ್ 625ಕ್ಕೆ 625 ಅಂಕ ಪಡೆದಿದ್ದಾರೆ.
ಇದನ್ನೂ ಓದಿ: SSLC RESULT | ಚಿತ್ರದುರ್ಗ ಜಿಲ್ಲೆ 23ನೇ ಸ್ಥಾನಕ್ಕೆ ತೃಪ್ತಿ | ಇಬ್ಬರು ವಿದ್ಯಾರ್ಥಿಗಳು ಸ್ಟೇಟ್ ಟಾಪರ್ಸ್
ಹಿರಿಯೂರಿನಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುವ ಎಚ್.ಪಿ.ಓಂಕಾರೇಶ್ವರ ಅವರ ಪುತ್ರ ಎಚ್.ಡಿ.ನಂದನ್ ಸತತ ಪರಿಶ್ರಮದ ಕಾರಣಕ್ಕೆ 625 ಅಂಕ ಗಳಿಸಿ ಇಡೀ ಜಿಲ್ಲೆಗೆ ಹೆಸರು ತಂದಿದ್ದಾರೆ.
ನಂದನ್ ತಾಯಿ ಕೆಂಚಮ್ಮ ಗೃಹಿಣಿ. ಆದರೆ, ನಂದನ್ ಅವರ ಇಬ್ಬರು ಅಕ್ಕಂದಿರು ಕೂಡಾ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: SSLC ICSE | SRS ಹೆರಿಟೇಜ್ ಶಾಲೆಗೆ ಶೇ.100 ಫಲಿತಾಂಶ
ಈಗ ಅವರ ಸಹೋಧರ ನಂದನ್ ಕೂಡಾ ಅದೇ ಹಾದಿಯಲ್ಲಿ ಸಾಗಿದ್ದು, ಶೇ.100 ರಷ್ಟು ಅಂಕ ಗಳಿಸಿದ್ದು, ಮುಂದೆ ಏರೊನಾಟಿಕಲ್ ಇಂಜಿನಿಯರ್ ಆಗುವ ಸಂಕಲ್ಪ ಮಾಡಿದ್ದಾರೆ.
ಸರ್ಕಾರಿ ಶಾಲೆ ಶಿಕ್ಷಕರ ಮಗಳು ಸ್ಟೇಟ್ ಟಾಪರ್:
ಇನ್ನೂ ಇದೇ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿ ಮೌಲ್ಯ ಡಿ. ರಾಜ್ ಕೂಡಾ ೬೨೫ ಅಂಕ ಗಳಿಸಿ ಸ್ಟೇಟ್ ಟಾಪರ್ ಆಗಿದ್ದಾರೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ ರಿಸಲ್ಟ್ | ಇವರೇ ನೋಡಿ ಜಿಲ್ಲೆಯ ಟಾಪರ್ಸ್ | ಜಿಲ್ಲೆಗೆ ಶೇ.59.87 ಫಲಿತಾಂಶ
ಮೌಲ್ಯ ಅವರ ತಂದೆ ದೇವರಾಜ್ ಹಾಗೂ ತಾಯಿ ಶೋಭಾ ಇಬ್ಬರೂ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೌಲ್ಯ ಡಿ.ರಾಜ್ ಹಾಗೂ ನಂದನ್ ಇಬ್ಬರೂ ಕಾಲಮಿತಿ ಇಟ್ಟುಕೊಂಡು ಓದಿದವರಲ್ಲ. ಆದರೆ, ಇಂದು ಇಷ್ಟು ಚಾಪ್ಟರ್ ಓದಬೇಕು ಅಂದರೆ ಓದಿ ಮುಗಿಸಿಯೇ ಮುಂದಿನ ಕೆಲಸ ಎಂಬ ಗಟ್ಟಿ ನಿಲುವಿನವರು ಎನ್ನುವುದು ಅವರ ಜೊತೆ ಮಾತನಾಡಿದಾಗ ಗೊತ್ತಾಗುತ್ತದೆ.
ಇದನ್ನೂ ಓದಿ: ಕಲ್ಲಂಗಡಿ ತಿನ್ನುವಾಗ ಈ 7 ತಪ್ಪುಗಳನ್ನು ಮಾಡಬೇಡಿ
ಇಬ್ಬರೂ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದು, ಚಿತ್ರದುರ್ಗ ನ್ಯೂಸ್ ತಂಡದಿಂದ ಶುಭ ಕೋರುತ್ತದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number