ಹಿರಿಯೂರು
ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ನಿಗಧಿ ಮಾಡುವ ಮುನ್ನ ಯೋಚಿಸಬೇಕಿತ್ತು | ಎಂ.ಜಿ.ರಂಗಸ್ವಾಮಿ
CHITRADURGA NEWS | 19 MARCH 2025
ಹಿರಿಯೂರು: ಮಾರ್ಚ್ 27 ಮತ್ತು 28ರಂದು ಹೊಳಲ್ಕೆರೆಯಲ್ಲಿ ನಡೆಯಲಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕಾಲೇಜು ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಅನ್ಯಕಾರ್ಯ (ಒಒಡಿ) ನಿಮಿತ್ತ ಸೌಲಭ್ಯ ಒದಗಿಸಿರುವುದಾಗಿ ಜಿಲ್ಲಾ ಕಸಾಪ ಪ್ರಕಟಣೆಯಲ್ಲಿ ತಿಳಿಸಿದೆ.
Also Read: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ | ಶಿಕ್ಷಕರು, ಉಪನ್ಯಾಸಕರಿಗೆ ಓಓಡಿ ಸೌಲಭ್ಯ
ಆದರೆ ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಉಪನ್ಯಾಸಕರಿಗೆ ಪಿಯು ಕಾಲೇಜುಗಳ ಪರೀಕ್ಷೆ ಮುಗಿದು ಮಾ.22ರಿಂದ ಮೌಲ್ಯ ಮಾಪನ ಕಾರ್ಯ ಆರಂಭವಾಗಲಿದೆ.
ಜೊತೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4ರ ವೇಳೆಗೆ ನಡೆಯಲಿವೆ. ಈ ಮಧ್ಯೆ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಮಾರ್ಚ್ 30 ಮತ್ತು 31ರಂದು ನಡೆಯಲಿವೆ.
ಇನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಕೂಡ ಶಾಲಾ ವಾರ್ಷಿಕ ಪರೀಕ್ಷೆ ಹಾಗೂ ಬಿಸಿಯೂಟದಲ್ಲಿ ನಿರತರಾಗಿರುತ್ತಾರೆ.
Also Read: ಸುನಿತಾ ವಿಲಿಯಮ್ಸ್ ತಾಳ್ಮೆ ಯುವ ಪೀಳಿಗೆಗೆ ಮಾದರಿ | ಡಾ.ಸೌಮ್ಯ
ಬಹುತೇಕ ಸಾಹಿತ್ಯಾಸಕ್ತರು ಕೂಡ ಮಕ್ಕಳ ಪರೀಕ್ಷೆ ಮತ್ತು ಹಬ್ಬಗಳ ಆಚರಣೆಯತ್ತ ಗಮಗ ಹರಿಸಿರುತ್ತಾರೆ. ಇಷ್ಟೇ ಅಲ್ಲದೆ ಈ ಬಾರಿ ಅವಧಿಗೂ ಮುನ್ನವೇ ರಣ ಬಿಸಿಲು ಜನರನ್ನು ಕಾಡಲಾರಂಭಿಸಿದೆ.
ಪರಿಸ್ಥಿತಿ ಹೀಗಿರುವಾಗ ಜಿಲ್ಲಾ ಕಸಾಪ ಒಒಡಿ ಸೌಲಭ್ಯ ನೀಡುವುದಾದರೂ ಯಾರಿಗೆ? ದಿನಾಂಕ ನಿಗದಿ ಮಾಡುವ ಮುನ್ನ ಸಂಘಟಕರು ವಿದ್ಯಮಾನಗಳತ್ತ ಒಮ್ಮೆ ಯೋಚಿಸಬೇಕಿತ್ತಲ್ಲವೆ?
-ಎಂ.ಜಿ. ರಂಗಸ್ವಾಮಿ ಹಿರಿಯೂರು, ನಿವೃತ್ತ ಪ್ರಾಂಶುಪಾಲರು