Connect with us

    Murugha math; ಶರಣ ಸಂಸ್ಕೃತಿ ಉತ್ಸವ | 10 ದಿನ ಯೋಗ, ಆರೋಗ್ಯ, ಆಧ್ಯಾತ್ಮ ಶಿಬಿರ 

    ಮುರುಘಾ ಮಠ

    ಮುಖ್ಯ ಸುದ್ದಿ

    Murugha math; ಶರಣ ಸಂಸ್ಕೃತಿ ಉತ್ಸವ | 10 ದಿನ ಯೋಗ, ಆರೋಗ್ಯ, ಆಧ್ಯಾತ್ಮ ಶಿಬಿರ 

    CHITRADURGA NEWS | 22 SEPTEMBER 2024

    ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ(murugha math)ದ ವತಿಯಿಂದ ಅಕ್ಟೋಬರ್ 5ರಿಂದ 13ರವರೆಗೆ ಶರಣ ಸಂಸ್ಕೃತಿ ಉತ್ಸವ, ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತೋತ್ಸವದ ಅಂಗವಾಗಿ 10 ದಿನ ಯೋಗ, ಆರೋಗ್ಯ, ಆಧ್ಯಾತ್ಮ ಶಿಬಿರ ಆಯೋಜಿಸಲಾಗಿದೆ.

    ಕ್ಲಿಕ್ ಮಾಡಿ ಓದಿ: VHP ಮುಖಂಡ ಶರಣ್ ಪಂಪ್‍ವೆಲ್ ಚಿತ್ರದುರ್ಗ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ | ಜಿಲ್ಲಾಧಿಕಾರಿ ಆದೇಶ

    ಉತ್ಸವದ ಪೂರ್ವಭಾವಿಯಾಗಿ ಪ್ರತಿ ವರ್ಷ ವಿಶೇಷ ಪ್ರವಚನ ಮಾಲೆಯನ್ನು ಅನುಭಾವಿಗಳಿಂದ ಏರ್ಪಡಿಸಲಾಗುತ್ತಿತ್ತು.

    ಈ ಬಾರಿಯೂ ಪ್ರವಚನದ ಜೊತೆಗೆ ಯೋಗ ಗುರು ವೈದ್ಯಶ್ರೀ ಚನ್ನಬಸವಣ್ಣನವರ ಮಾರ್ಗದರ್ಶನದಲ್ಲಿ 10 ದಿನಗಳ ಯೋಗ, ಆರೋಗ್ಯ, ಆಧ್ಯಾತ್ಮ ಶಿಬಿರ ಏರ್ಪಡಿಸಿರುವುದು ವಿಶೇಷ.

    ದಿನಾಂಕ 25-9-2024ರ ಬುಧವಾರದಿಂದ 4-10-2024ರ ಶುಕ್ರವಾರದವರೆಗೆ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ಬೆಳಿಗ್ಗೆ 5.30 ರಿಂದ 7 ಗಂಟೆಯವರೆಗೆ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರ ನಡೆಯಲಿದೆ.

    ಕ್ಲಿಕ್ ಮಾಡಿ ಓದಿ: Scientists; ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕೋಟೆನಾಡಿನ ಡಾ.ಗಣೇಶ್ ಕುಮಾರ್ ಗೆ ಸ್ಥಾನ 

    ಯೋಗದಿಂದ ಔಷಧ ರಹಿತವಾಗಿ, ಅಡ್ಡಪರಿಣಾಮವಿಲ್ಲದೆ ಸರ್ವ ರೋಗಗಳಿಗೆ ಪರಿಹಾರ ಮಾರ್ಗ ಪ್ರಾತ್ಯಕ್ಷಿಕೆಯ ಮೂಲಕ ಯೋಗಾಸನ, ಪ್ರಾಣಾಯಾಮ, ಬಂಧ, ಮುದ್ರೆಗಳಿಂದ ಅಜೀರ್ಣ, ಮಲಬದ್ಧತೆ, ನಿದ್ರಾಹೀನತೆ ಹೀಗೆ ಹತ್ತಾರು ಕಾಯಿಲೆಗಳಿಗೆ ಮಾರ್ಗದರ್ಶನ ನೀಡಲಾಗುವುದು. ಒಟ್ಟಿನಲ್ಲಿ ಯೋಗದಿಂದ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ಚನ್ನಬಸವಣ್ಣ ತಿಳಿಸುತ್ತಾರೆ.

    ಹಾಗೆಯೇ ಮೇಲಿನ ದಿನಾಂಕದಿಂದಲೇ ಸಂಜೆ 6:30 ರಿಂದ 7:30ರ ವರೆಗೆ ಅನುಭವ ಮಂಟಪದಲ್ಲಿ ಶ್ರೀ ಚನ್ನಬಸವಣ್ಣನವರು ಆರೋಗ್ಯ ಆಧ್ಯಾತ್ಮ ಪ್ರವಚನ ನೀಡಲಿದ್ದಾರೆ. 10 ದಿನಗಳು 10 ವಿಷಯ ಕುರಿತಾಗಿ ಆರೋಗ್ಯ ಮತ್ತು ಆಧ್ಯಾತ್ಮ ಸಾಮ್ಯತೆ ಕುರಿತಂತೆ ಪ್ರವಚನವಿರುತ್ತದೆ.

    ಈ ಎರಡೂ ವಿಶೇಷ ಕಾರ್ಯಕ್ರಮಗಳಿಗೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬರುವವರಿಗಾಗಿ ವಾಹನ ಸೌಕರ್ಯ ಕಲ್ಪಿಸಲಾಗುತ್ತದೆ.

    ಕ್ಲಿಕ್ ಮಾಡಿ ಓದಿ: Tribute Ceremony: ಕ್ರಾಂತಿಕಾರಕ ಹೆಜ್ಜೆ ಇಟ್ಟು ಮುಂದೆ ಸಾಗಿದ ಶಿವಕುಮಾರ ಶ್ರೀ | ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌

    ಸಾರ್ವಜನಿಕರು ಈ ಅಪೂರ್ವ ಅವಕಾಶವನ್ನು ತಪ್ಪಿಸಿಕೊಳ್ಳದೆ ಪಾಲ್ಗೊಳ್ಳಬೇಕೆಂದು ಶರಣ ಸಂಸ್ಕೃತಿ ಉತ್ಸವ ಸಮಿತಿ ಹಾಗೂ ಮುರುಘಾಮಠದ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top