ಮುಖ್ಯ ಸುದ್ದಿ
ಚಿತ್ರದುರ್ಗ ಜಿಲ್ಲೆಯ SSLC ಟಾಪರ್ಸ್ ಇವರೇ ನೋಡಿ
CHITRADURGA NEWS | 09 MAY 2024
ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಯ ಕೆಲ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ 16 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 620 ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕಗಳಾಗಿದ್ದು, 4 ವಿದ್ಯಾರ್ಥಿಗಳು 620 ಅಂಕಗಳನ್ನು ತೆಗೆದಿದ್ದಾರೆ. 4 ವಿದ್ಯಾರ್ಥಿಗಳು 618 ಅಂಕಗಳನ್ನು ಗಳಿಸಿದ್ದಾರೆ. 6 ವಿದ್ಯಾರ್ಥಿಗಳು 616 ಅಂಕ ಗಳಿಸಿದ್ದಾರೆ.
ಇದನ್ನೂ ಓದಿ: SSLC RESULT: ಪಾತಾಳಕ್ಕೆ ಕುಸಿದ ಚಿತ್ರದುರ್ಗ ಫಲಿತಾಂಶ
ಚಿತ್ರದುರ್ಗ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಸಿ.ಐ.ಅಭಯ್, ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಶಾಲೆಯ ಎಂ.ಎಸ್.ಹಿರಣ್ಯಮಯಿ ಹಾಗೂ ಟಿ.ತನುಶ್ರೀ, ಮೊಳಕಾಲ್ಮೂರಿನ ಸರ್,ಎಂ.ವಿ.ಇಂಗ್ಲೀಷ್ ಮೀಡಿಯಂ ಶಾಲೆಯ ಎಂ.ಅಸರ್‍ಮಹೀನ್ 620 ಅಂಕ ಗಳಿಸಿದ್ದಾರೆ.
ಚಿತ್ರದುರ್ಗದ ಡಾನ್‍ಬಾಸ್ಕೋ ಶಾಲೆಯ ಜಿ.ಎಸ್.ಭುವನೇಶ್ವರಿ, ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಶಾಲೆಯ ಎಸ್.ಪೂಜಿತಾ, ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹೈಸ್ಕೂಲ್‍ನೆ ಎಸ್.ಪ್ರೀತಿ, ಹೊಳಲ್ಕೆರೆಯ ಎಸ್‍ಜೆಎಂ ಇಂಗ್ಲೀಷ್ ಮೀಡಿಯಂ ಶಾಲೆಯ ಸಿ.ಕೆ.ನಂದನ್ 625ಕ್ಕೆ 618 ಅಂಕ ಗಳಿಸಿದ್ದಾರೆ.
ಇದನ್ನೂ ಓದಿ: ಮಹಾದೇವಪುರ ಬಳಿ ಭರ್ಜರಿ ಮಳೆ | ನೀರು ಹರಿಯುವ ವೀಡಿಯೋ ವೈರಲ್
ಚಿತ್ರದುರ್ಗದ ಡಿವಿಎಸ್ ಇಂಗ್ಲೀಷ್ ಮಾಧ್ಯಕ ಶಾಲೆಯ ಎಚ್.ಎಂ.ಭಾವನಾ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕೆ.ಆರ್.ಅಭಿನವ, ಹಿರಿಯೂರು ರಾಷ್ಟ್ರೀಯ ಅಕಾಡೆಮಿ ಶಾಲೆಯ ಆರ್.ಕೆ.ಸೃಜನ್ ಸಾಗರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಆರ್.ನವ್ಯಶ್ರೀ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಸಂಜಯ್ ಹಾಗೂ ಪ್ರೆಸಿಡೆನ್ಸಿ ಇಂಗ್ಲೀಷ್ ಮಾಧ್ಯಮ ಶಾಲೆಯ ಜಿ.ಪಿ.ಮನೋಜ್ಞ ತಲಾ 616 ಅಂಕ ಗಳಿಸಿದ್ದಾರೆ.