ಮುಖ್ಯ ಸುದ್ದಿ
ಸಂತೋಷ್ ಲಾಡ್ BIRTH DAY | ಆಪತ್ ರಕ್ಷಕ ದಿನಾಚರಣೆ
CHITRADURGA NEWS | 28 FEBRUARY 2025
ಚಿತ್ರದುರ್ಗ: ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ನಗರದ ಐಎಂಎ ಹಾಲ್ ನಲ್ಲಿ ಗುರುವಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹುಟ್ಟುಹಬ್ಬದ ಪ್ರಯುಕ್ತ ಆಪತ್ ರಕ್ಷಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
Also Read: ಚಿತ್ರದುರ್ಗದ MAX ಫ್ಯಾಷನ್ ಗೆ ರೂ.10 ಸಾವಿರ ದಂಡ | ಯಾಕೆ ಗೊತ್ತಾ?
ಕಾರ್ಯಕ್ರಮವನ್ನು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಸೌಮ್ಯ ಮಂಜುನಾಥ್‌ಸ್ವಾಮಿ ಉದ್ಘಾಟಿಸಿ ಮಾತನಾಡಿ, ಯಾರೇ ತುರ್ತು ಸಂದರ್ಭಗಳಲ್ಲಿ, ಜನರ ಕಷ್ಟಗಳಲ್ಲಿ ಸ್ಪಂದಿಸುತ್ತಾರೋ ಅಂತಹ ವ್ಯಕ್ತಿಗಳಿಗೆ ಗೌರವ ಸೂಚಿಸುವುದು ನಮ್ಮ ಟ್ರಸ್ಟಿನ ಜವಾಬ್ದಾರಿ ಆಗಿರುತ್ತದೆ.
ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾಗಿದರು ಸಹ ಸಮಾಜದ ಏಳಿಗೆಗಾಗಿ ಕ್ಷಮಿಸುವ ವ್ಯಕ್ತಿ ಎಂದು ತಿಳಿಸಿದರು.
ಪ್ರಾಧ್ಯಾಪಕರಾದ ಲಕ್ಷ್ಮಿಕಾಂತ್ ಮಾತನಾಡಿ, ನಾವು ಸಹ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನೊಂದಿಗೆ ನಿಲ್ಲುವುದು ಅನಿವಾರ್ಯ, ಪ್ರತಿಯೊಬ್ಬರು ಸಂತೋಷ್ ಲಾಡ್ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ರಸ್ತೆ ಸುರಕ್ಷತೆಯೊಂದಿಗೆ ಜೀವಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
Also Read: ನೂತನ AC ಯಾಗಿ ಮೆಹಬೂಬ್ ಜಿಲಾನ್ ಅಧಿಕಾರ ಸ್ವೀಕಾರ
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ಸಮಿತಿಯ ಮಹಾಂತೇಶ್ ಮಾತನಾಡಿದರು.
ಈ ವೇಳೆ ವರುಣ್, ಗೌತಮ್, ಮೋಹನ್ ಸೇರಿದಂತೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.