By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ತೋಟಗಾರಿಕೆ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ| ಅಣಬೆ ಬೇಸಾಯ, ಮಾರುಕಟ್ಟೆ ಮಾಗೋಪಾಯಗಳ ತರಬೇತಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ತೋಟಗಾರಿಕೆ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ| ಅಣಬೆ ಬೇಸಾಯ, ಮಾರುಕಟ್ಟೆ ಮಾಗೋಪಾಯಗಳ ತರಬೇತಿ

ತಾಲೂಕುಹಿರಿಯೂರು

ತೋಟಗಾರಿಕೆ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ| ಅಣಬೆ ಬೇಸಾಯ, ಮಾರುಕಟ್ಟೆ ಮಾಗೋಪಾಯಗಳ ತರಬೇತಿ

News Desk Chitradurga News
Last updated: 22 February 2024 11:07
News Desk Chitradurga News
1 year ago
Share
ಅಣಬೆ ಬೇಸಾಯ
ತೋಟಗಾರಿಕೆ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 22 FEBRUARY 2024
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಗೊಡಬನಹಾಳ್ ಗ್ರಾಮದಲ್ಲಿ ಮಂಗಳವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಹಿರಿಯೂರಿನ ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದದ ಅಡಿಯಲ್ಲಿ ಅಣಬೆ ಬೇಸಾಯ ಹಾಗೂ ಮಾರುಕಟ್ಟೆ ಮಾಗೋಪಾಯಗಳ ಕುರಿತು ತರಬೇತಿ ನಡೆಯಿತು.

ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಹುಣ್ಣೀಮೆ ಮಹೋತ್ಸವ| ಮೂರು ದಿನ ಸರಳ ಆಚರಣೆ

ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಡಿ ಶಶಿಕಲಾ ಬಾಯಿ ಅವರು ಅಣಬೆ ಬೇಸಾಯದ ಕ್ರಮಗಳು ಹಾಗೂ ಬೆಳೆದ ಅಣಬೆಗೆ ಮಾರುಕಟ್ಟೆಯ ಮಾರ್ಗೋಪಾಯಗಳ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಂತರ ಬೆಳೆದ ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಕಟಾವು ಮಾಡಿದ ಅಣಬೆ ಬಗ್ಗೆ ಸಂಸ್ಕರಣೆ, ಶೇಖರಣೆ ಹಾಗೂ ಮೌಲ್ಯವರ್ಧನೆ ಹೀಗೆ ವಿವಿಧ ಹಂತಗಳಲ್ಲಿ ಮನೆಯಲ್ಲಿಯೇ ಶೇಖರಣೆ ಮಾಡುವ ವಿಧಾನ ತಿಳಿಸಿಕೊಟ್ಟರು.

ಇದನ್ನೂ ಓದಿ: ರಾಜವೀರ ಮದಕರಿ ಸಿನಿಮಾ| ನಟ ದರ್ಶನ್ ಹೇಳಿದೇನು

ಹಲವು ವರ್ಷಗಳಿಂದ ಅಣಬೆ ಬೇಸಾಯ ಮಾಡುತ್ತಿರುವ ರೈತರು ಹಾಗೂ ರೈತ ಮಹಿಳೆಯರು ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿ ಇದರ ಸದುಪಯೋಗ ಪಡೆದುಕೊಂಡರು. ಅಣಬೆ ಬೆಳೆಗಾರರಿಗೆ ಹಾಗೂ ಅಣಬೆ ಉದ್ಯಮಿದಾರರೊಂದಿಗೆ ಬೈ ಬ್ಯಾಕ್ ಅಥವಾ ಕಾಂಟ್ರಾಕ್ಟ್ ಫಾಮಿರ್ಂಗ್ ಮೂಲಕ ಅಣಬೆ ಖರೀದಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: ಚುನಾವಣೆಗೆ ಮುನ್ನಾ ಹೇಳಿದ್ದ 6ನೇ ಗ್ಯಾರೆಂಟಿ ಕೊಡಿ| ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆ

ಅಣಬೆ ಉದ್ದಿಮೆದಾರ ಪ್ರಜ್ವಲ್ ಕೃಷ್ಣ ಅವರು ಮದರ್ ಎಂಟರ್‍ಪ್ರೈಸಸ್ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಅಣಬೆ ಹಾಗೂ ಅಣಬೆ ಪುಡಿಯನ್ನು ಕಾಂಟ್ರಾಕ್ಟ್ ಫಾರ್ಮಿಂಗ್ ಮೂಲಕ ಖರೀದಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಅಡಿಕೆ ಧಾರಣೆ| ಫೆಬ್ರವರಿ 21| ರಾಜ್ಯದ ಯಾವ ಮಾರುಕಟ್ಟೆಯ ರೇಟು ಏನಿದೆ ಗೊತ್ತಾ

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ಕೃಷಿ ತಾಂತ್ರಿಕತೆ ಸಹಾಯಕ ಪ್ರಾಧ್ಯಾಪಕ ರಾಜಶೇಖರ ಡಿ ಬಾರ್ಕೆರ ತರಬೇತಿ ನೀಡಿದರು. ಅಣಬೆ ಬೆಳೆಗಾರರಾದ ರೇಣುಕಾ ತುಮಕೂರು ಅವರು ಅಣಬೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶೃತಿ ಪಿ.ಗೋಂಡಿ, ಗೊಡಬನಹಾಳ್ ಗ್ರಾಮದ ಮುಂಂಡರಾದ ಅಶೋಕ್, ಮಲ್ಲೇಶ್, ಪ್ರಸನ್ನಕುಮಾರ್ ಸೇರಿದಂತೆ ಗ್ರಾಮದ ರೈತರು, ರೈತ ಮಹಿಳೆಯರು ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:AgricultureChitradurgaHorticulturalMarketMushroom Farmingಅಣಬೆ ಬೇಸಾಯಕೃಷಿಚಿತ್ರದುರ್ಗತೋಟಗಾರಿಕಾಮಾರುಕಟ್ಟೆ
Share This Article
Facebook Email Print
Previous Article ಲೋಕಸಭೆ ಚುನಾವಣೆಗೆ ದಿನಗಣನೆ | ಚಿತ್ರದುರ್ಗದಲ್ಲಿ ಶುರುವಾಯ್ತು ಟಿಕೇಟ್ ಅಂದರ್-ಬಾಹರ್ ಆಟ
Next Article ಪ್ರಭಾವಿ ಮಠಮಾನ್ಯಗಳಿಗೆ ಮಾತ್ರ ಅನುದಾನ | ಸರ್ಕಾರದ ನಡೆಗೆ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಅಸಮಾಧಾನ
Leave a Comment

Leave a Reply Cancel reply

Your email address will not be published. Required fields are marked *

Gavayi smaranothsava
ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಗಾನಯೋಗಿಗಳ ಪುಣ್ಯ ಸ್ಮರಣೆ | ಸಾಧಕರಿಗೆ ಸನ್ಮಾನ
ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲನೇ ಕಾರ್ಯಕಾರಿ ಸಭೆ | ಮಠಾಧೀಶರು ಸೇರಿದಂತೆ ಗಣ್ಯರು ಭಾಗೀ
ಮುಖ್ಯ ಸುದ್ದಿ
ಉಸಿರಾಟದ ಕಾಯಿಲೆಗಳಿಗೆ ಈ ಎಲೆಯನ್ನು ಬಳಸಿ
Life Style
ಹೃದಯಾಘಾತದ ನಂತರ ಈ ತಪ್ಪುಗಳನ್ನು ಮಾಡಬೇಡಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up