ಮುಖ್ಯ ಸುದ್ದಿ
Renukaswamy; ಟೆಕ್ನಾಲಜಿಯಿಂದಾಗಿ ಅಪರಾಧ ಹೆಚ್ಚಳ | ಬಿ.ಸಿ.ಪಾಟೀಲ್
CHITRADURGA NEWS | 05 JUNE 2024
ಚಿತ್ರದುರ್ಗ: ಮೃತ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರು ಭೇಟಿ ನೀಡಿ ಕುಟುಂಬಕ್ಕೆ ಸ್ವಾ0ತನ ಹೇಳಿದರು.
ಇದನ್ನೂ ಓದಿ: ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು. ನಿಷ್ಪಕ್ಷಪಾತವಾದ ತನಿಖೆ ಆಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ, ಇದು ಒಂದು ಆಕಸ್ಮಿಕ ಘಟನೆ ಆಗಿದ್ದು ರೇಣುಕಾ ಸ್ವಾಮಿ ಪತ್ನಿಗೆ ಉದ್ಯೋಗ ನೀಡಬೇಕು, ಇದರಲ್ಲಿ ಯಾರಾದರೂ ಭಾಗಿ ಆಗಿದಾದರೂ ತಪ್ಪಿತಸ್ಥರು ತಪ್ಪಿತಸ್ಥರೇ ಆಗಿರುತ್ತಾರೆ ಎಂದರು.
ಇಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ, ಮಾಡ್ರನ್ ಜಗತ್ತಲ್ಲಿ ಟೆಕ್ನಾಲಜಿ ಹೆಚ್ಚಾದ ಮೇಲೆ ಸೈಬರ್ ಕ್ರೈಮ್ ಹೆಚ್ಚಾಗಿದೆ.
ರೇಣುಕಾಸ್ವಾಮಿ ಮೇಲೆ ದೂರು ಕೊಟ್ಟಿದ್ರೆ ವಿಚಾರಣೆ ನಡೆಸಬಹುದಿತ್ತು, ಆದ್ರೆ ಅದಕ್ಕೆ ಮರಣ ದಂಡನೆ ಕೊಡುವಂತ ಅಪರಾಧ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕೋಟೆನಾಡಿನಲ್ಲಿ ಕಸ ವಿಂಗಡಣೆಗೆ ವಿನೂತನ ಪ್ರಯೋಗ | ಚಿತ್ರದುರ್ಗ ನಗರಸಭೆಯಿಂದ ಕಾರ್ಡ್ ವಿತರಣೆ
ದರ್ಶನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ರೆ ಪೊಲೀಸ್ ರು ತನಿಖೆ ಮಾಡುತಿದ್ರು. ದರ್ಶನ್ ಒಳ್ಳೆ ವ್ಯಕ್ತಿ, ಒಳ್ಳೆಯ ನಟ ಆಗಿದ್ದ, ಈಗ ಅವರ ಮೇಲೆ ಕೊಲೆ ಆರೋಪ ಬಂದಿದೆ, ಕೋರ್ಟ್ ನಲ್ಲಿ ಕೇಸ್ ಎದುರಿಸುತ್ತಿದ್ದಾರೆ ತನಿಖೆ ಆದ್ಮೇಲೆ ಗೊತ್ತಾಗುತ್ತೆ ಎಂದರು.
ದರ್ಶನ್ ಅವರನ್ನು ಬ್ಯಾನ್ ಮಾಡುವ ವಿಚಾರ ಚೆಂಬರ್ ಗೆ ಬಿಟ್ಟ ವಿಚಾರ, ಫಿಲ್ಮ್ ಚೇಂಬರ್ ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.