ಮುಖ್ಯ ಸುದ್ದಿ
UpperBhadraProject: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಕಡಿತ ! ಇಲ್ಲಿವೆ ಸುಲಭವಾಗಿ ಅರ್ಥವಾಗುವ 8 ಅಂಶಗಳು
Published on
CHITRADURGA NEWS | 07 NOVEMBER 2024
- ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ನೀರೊದಗಿಸುವ ಭದ್ರಾ ಮೇಲ್ದಂಡೆ (UpperBhadraProject)ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 5300 ಕೋಟಿ ರೂ.ಗಳಲ್ಲಿ 1754 ಕೋಟಿ ರೂ. ಖೋತಾ ಆಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆತಂಕ ವ್ಯಕ್ತಪಡಿಸಿದೆ.
- ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸಮಿತಿಯ ಜೆ.ಯಾದವರೆಡ್ಡಿ ಹಾಗೂ ಸಂಚಾಲಕ, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟಿದ್ದಾರೆ.
- 2023-24ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಚಿತ್ರದುರ್ಗ ಸೇರಿದಂತೆ 4 ಜಿಲ್ಲೆಗಳಿಗೆ ಅನುಕೂಲವಾಗುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ ಮಾಡಿತ್ತು.
- ಈ ಅನುದಾನ ಬಿಡುಗಡೆಗೆ ಕಳೆದೆರಡು ವರ್ಷಗಳಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಈ ನಡುವೆ ಕಳೆದ ಸೆಪ್ಟಂಬರ್ 5 ರಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಅನುದಾನ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಕೆಲ ತಾಂತ್ರಿಕ ಮಾಹಿತಿ ಕೋರಿದ್ದರು.
- ಅಕ್ಟೋಬರ್ 28 ರಂದು ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹರ್ಷಗುಪ್ತ ಪ್ರತಿಕ್ರಿಯೆ ನೀಡಿದ್ದು, ಮಾರ್ಚ್ 2022 ರವರೆಗೆ ಮಾಡಿದ ವೆಚ್ಚ ಆಧರಿಸಿ 5300 ಕೋಟಿ ರೂ. ಕೇಂದ್ರದಿಂದ ಲಭ್ಯವಾಗಬೇಕಿತ್ತು.
- ಅಂದರೆ 14,697 ಕೋಟಿ ರೂ. ಒಟ್ಟಾರೆ ಯೋಜನಾ ವೆಚ್ಚದಲ್ಲಿ 5528 ಕೋಟಿ ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಉಳಿದ 9168 ಕೋಟಿ ರೂ.ಗಳಲ್ಲಿ ಕೇಂದ್ರ ಸರ್ಕಾರದಿಂದ ಶೇ.60 ರಷ್ಟು ಅಂದರೆ 5501 ಕೋಟಿ ಅನುದಾನ ಕೊಡಬೇಕಾಗಿತ್ತು. ಇದನ್ನು 5300 ಕೋಟಿ ರೂ.ಗೆ ಸೀಮಿತ ಮಾಡಲಾಗಿತ್ತು.
- ಮಾರ್ಚ್ ಅಂತ್ಯಕ್ಕೆ ಭದ್ರಾ ಮೇಲ್ದಂಡೆಗೆ 8785 ಕೋಟಿ ಖರ್ಚಾಗಿದ್ದು, 5910 ಕೋಟಿ ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಶೇ.60 ರಷ್ಟು ಅನುದಾನ ಕೇಂದ್ರದಿಂದ ಎಂದು ಲೆಕ್ಕ ಹಾಕಿದರೆ ಅದು 3546 ಕೋಟಿ ರೂ.ಗಳಾಗುತ್ತದೆ.
- ಕೇಂದ್ರಕ್ಕೆ ರಾಜ್ಯ ಸಲ್ಲಿಸಿರುವ ಮರು ಪ್ರಸ್ತಾವನೆಯಲ್ಲಿ 3546.22 ಕೋಟಿ ರುಪಾಯಿ ಅನುದಾನದ ನೆರವು ಕೋರಲಾಗಿದೆ. ಹಾಗಾಗಿ ಕೇಂದ್ರದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ 5300 ಕೋಟಿ ರೂ.ಗಳಲ್ಲಿ 1754 ಕೋಟಿ ಕಡಿತವಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರು ಪ್ರಧಾನಿ ಎದುರು ಮಾತೇ ಆಡುತ್ತಿಲ್ಲ. ಪ್ರಧಾನಿ ಭೇಟಿಗೂ ಕಾಲಾವಕಾಶ ದೊರೆಯುತ್ತಿಲ್ಲ. ಕೇಂದ್ರ ಜಲಶಕ್ತಿಯ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಚಿತ್ರದುರ್ಗಕ್ಕೆ ಬಂದಾಗ ಕೆಲವೇ ದಿನಗಳಲ್ಲಿ ಮೊದಲನೇ ಕಂತು ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದರು. ಅದರ ಗಡುವು ಮುಗಿಯುತ್ತಾ ಬಂದಿದೆ.
| ಜೆ.ಯಾದವರೆಡ್ಡಿ, ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸದಸ್ಯ.
Continue Reading
Related Topics:Central Government, Central Karnataka, Chitradurga, Chitradurga news, Grants, Irrigation Implementation Committee, Kannada News, State Government, Tug of War, UpperBhadraProject, ಅನುದಾನ, ಕನ್ನಡ ಸುದ್ದಿ, ಕೇಂದ್ರ ಸರ್ಕಾರ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ನೀರಾವರಿ ಅನುಷ್ಠಾನ ಹೋರಾಟ ಸಮಿತಿ, ಭದ್ರಾ ಮೇಲ್ದಂಡೆ ಯೋಜನೆ, ಮಧ್ಯ ಕರ್ನಾಟಕ, ರಾಜ್ಯ ಸರ್ಕಾರ, ಹಗ್ಗ ಜಗ್ಗಾಟ
Click to comment