Connect with us

    ಮಳೆ, ಗಾಳಿಗೆ ನೆಲಕಚ್ಚಿದ ಬಾಳೆ | ಲಕ್ಷಾಂತರ ರೂ. ನಷ್ಟ

    ಮಳೆ, ಗಾಳಿಗೆ ನೆಲಕಚ್ಚಿದ ಬಾಳೆ

    ಚಳ್ಳಕೆರೆ

    ಮಳೆ, ಗಾಳಿಗೆ ನೆಲಕಚ್ಚಿದ ಬಾಳೆ | ಲಕ್ಷಾಂತರ ರೂ. ನಷ್ಟ

    CHITRADURGA NEWS | 13 MAY 2024

    ಚಳ್ಳಕೆರೆ: ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಚಳ್ಳಕೆರೆ ತಾಲ್ಲೂಕಿನ ಭಾಗದಲ್ಲಿ ರೈತರು ಬೆಳೆದ ಬಾಳೆ, ಮಳೆ, ಗಾಳಿಗೆ ನೆಲಕಚ್ಚಿದ್ದು ಲಕ್ಷಾಂತರ ರೂ ನಷ್ಟವಾಗಿದೆ.

    ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ಸುರಿದ ಮಳೆ ವಿವರ | ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ನೋಡಿ

    ದೇವರಮರುಕುಂಟೆ ಗ್ರಾಮದಲ್ಲಿ ಪ್ರಭಾಕರ್ ಎನ್ನುವ ರೈತ 5 ಎಕರೆ ಬಾಳೆ ಬೆಳೆದಿದ್ದು ರಾತ್ರಿ ಸುರಿದ ಗಾಳಿ ಮಳೆಗೆ ಫಸಲಿಗೆ ಬಂದಿದ್ದ ಬಾಳೆ ಸಂಪೂರ್ಣ ನೆಲಕಚ್ಚಿದೆ‌.

    ಬರಗಾಲದಿಂದ ಕಂಗೆಟ್ಟಿದ್ದ ಜನರಿಗೆ ಸುಮಾರು ಮೂರು ದಿನಗಳಿಂದ ಕೆಲವು ಕಡೆ ಮಳೆಯಾಗುತ್ತಿದ್ದು ಇದರಿಂದ ರೈತನಿಗೆ ಜೀವಬಂದಂತಾಗಿದೆ. ಆದರೆ ಗಾಳಿ ಮಳೆಗೆ ಕೆಲವು ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ.

    ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ | ಸಾರ್ವಜನಿಕರಿಗೆ ಜೀವ ಭಯ

    ಬೆಳೆ ಹಾನಿ ತೋಟಗಳಿಗೆ ಇಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಈಗಾಗಲೇ ಬಿರುಗಾಳಿ ಮಳೆಗೆ ತಾಲ್ಲೂಕಿನ ಕಾಟಂದೇವರಕೊಟೆ, ಓಬಳಾಪುರ, ಹೆಗ್ಗೆರೆ, ಸಾಣಿಕೆರೆ, ದೇವರಮರುಕುಂಟೆ ಇತರ ಗ್ರಾಮಗಳಲ್ಲಿ 70 ಎಕ್ಕರೆಯಷ್ಟು ಬಾಳೆ ಬೆಳೆ ಹಾನಿ ಒಳಗಾಗಿದೆ. ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಗೊಳಗಾದ ಬೆಳೆ ವಿವರವನ್ನು ಸರ್ಕಾರಕ್ಕೆ ಕಳಿಸುತ್ತೇವೆ ಎಂದರು.

    ಇದನ್ನೂ ಓದಿ: ಈ ವರ್ಷ ಯಾವ ಮಳೆ ಚೆನ್ನಾಗಿದೆ | ಯಾವ ಮಳೆ ಎಷ್ಟು ಸುರಿಯುತ್ತೆ | ಪಂಚಾಂಗದ ಪ್ರಕಾರ ಮಳೆ ಭವಿಷ್ಯ

    ಈ ಸಂದರ್ಭದಲ್ಲಿ ತೋಟಗಾರಿಕೆ ಸಹಾಯಕ ಅಧಿಕಾರಿ ಪ್ರವೀಣ್, ರೈತ ಪ್ರಭಾಕರ್ ರೈತರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಚಳ್ಳಕೆರೆ

    To Top