Connect with us

    ಗೋ ಬ್ಯಾಕ್ ಗೋವಿಂದ ಕಾರಜೋಳ | ರಘುಚಂದನ್ ಬೆಂಬಲಿಗರಿಂದ ಪ್ರತಿಭಟನೆ | ಬಿಜೆಪಿ ಕಚೇರಿ ಕಿಟಿಕಿ ಗಾಜು ಪುಡಿ

    ರಘುಚಂದನ್ ಬೆಂಬಲಿಗರಿಂದ ಪ್ರತಿಭಟನೆ

    ಲೋಕಸಮರ 2024

    ಗೋ ಬ್ಯಾಕ್ ಗೋವಿಂದ ಕಾರಜೋಳ | ರಘುಚಂದನ್ ಬೆಂಬಲಿಗರಿಂದ ಪ್ರತಿಭಟನೆ | ಬಿಜೆಪಿ ಕಚೇರಿ ಕಿಟಿಕಿ ಗಾಜು ಪುಡಿ

    CHITRADURGA NEWS | 23 MARCH 2024

    ಚಿತ್ರದುರ್ಗ: ಗೋವಿಂದ ಕಾರಜೋಳ ಗೋ ಬ್ಯಾಕ್, ನಾರಾಯಣಸ್ವಾಮಿ ಗೋ ಬ್ಯಾಕ್, ಚಿತ್ರದುರ್ಗಕ್ಕೆ ಸ್ಥಳೀಯ ಸ್ವಾಭಿಮಾನಿ ಅಭ್ಯರ್ಥಿ ಬೇಕು. ಲೋಕಲ್ ಫಾರ್ ವೋಕಲ್, ಎಂಪಿ ಬೇಕಾಗಿರುವುದು ದುರ್ಗಕ್ಕೆ ಮುಧೋಳಕ್ಕಲ್ಲ..…

    ಈ ರೀತಿಯ ಬರಹ, ಘೋಷಣೆ ಕೇಳಿ ಬಂದಿದ್ದು, ಚಿತ್ರದುರ್ಗ ನಗರದ ಅಂಬಾ ಭವಾನಿ ದೇವಸ್ಥಾನದ ಬಳಿ ಇರುವ ಬಿಜೆಪಿ ಕಚೇರಿ ಎದುರು.

    ಇದನ್ನೂ ಓದಿ: ಚಿತ್ರದುರ್ಗ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ನಿಧನ

    ಸ್ಥಳೀಯ ಅಭ್ಯರ್ಥಿಗೆ ಟಿಕೇಟ್ ಕೊಡಬೇಕು. ಯುವ ಮುಖಂಡ ಎಂ.ಸಿ.ರಘುಚಂದನ್‍ಗೆ ಬಿಜೆಪಿ ಟಿಕೇಟ್ ನೀಡಬೇಕು ಎಂದು ನೂರಾರು ಬೆಂಬಲಿಗರು ಶನಿವಾರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

    ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಅಭ್ಯರ್ಥಿ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಯಾವ ಕಾರಣಕ್ಕೂ ಹೊರಗಿನವರಿಗೆ ಟಿಕೇಟ್ ನೀಡಬಾರದು. ಸ್ಥಳೀಯರಿಗೆ ನೀಡಬೇಕು ಎಂದು ಪಟ್ಟು ಹಿಡಿದು ಜಿಲ್ಲಾಧ್ಯಕ್ಷ ಎ.ಮುರುಳಿ ಅವರ ಬಳಿ ಒತ್ತಾಯ ಮಾಡಿದರು. ಕೆಲವರು ಜಿಲ್ಲಾಧ್ಯಕ್ಷರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ಕಟ್ಟಲು, ಹೋರಾಟ ಮಾಡಲು ಸ್ಥಳೀಯ ಶಾಸಕರು, ಮುಖಂಡರು ಬೇಕು. ಚುನಾವಣೆಗೆ ಬೇಡವೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

    ಇದನ್ನೂ ಓದಿ: ಹೊಸದುರ್ಗ, ಹೊಳಲ್ಕೆರೆಯಲ್ಲೂ ಬೋರ್‌ವೆಲ್‌ ಕೊರೆಯಲು ದರ ನಿಗದಿ | ಜಿಎಸ್‌ಟಿ ಬಿಲ್‌ ಕೊಡಲು ತಾಕೀತು

    ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್ ಕಳೆದ ಲೋಕಸಭಾ ಚುನಾವಣೆಯಲ್ಲೇ ಪಕ್ಷದ ಟಿಕೇಟ್ ಕೇಳಿದ್ದರು. ಆದರೆ, ವರಿಷ್ಟರು ಮುಂದಿನ ಸಲ ಕೊಡುವುದಾಗಿ ತಿಳಿಸಿದ್ದರು. ಈಗ ಹೊರಗಿನವರಿಗೆ ಕೊಡುವುದು ಯಾವ ನ್ಯಾಯ ಎಂದು ಅಸಮಧಾನ ವ್ಯಕ್ತಪಡಿಸಿದರು.

    ರಘುಚಂದನ್ ಬೆಂಬಲಿಗರಿಂದ ಪ್ರತಿಭಟನೆ

    ರಘುಚಂದನ್ ಬೆಂಬಲಿಗರಿಂದ ಪ್ರತಿಭಟನೆ

    ಕಳೆದ ಎಲ್ಲಾ ಚುನಾವಣೆಗಳಲ್ಲಿ ಬೇರೆ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳನ್ನು ನಮ್ಮ ಮನೆಯ ಮಕ್ಕಳಂತೆ ಹೋರಾಟ ಮಾಡಿ ಗೆಲ್ಲಿಸಿದ್ದೇವೆ. ಅವರಿಂದ ನಮ್ಮ ಜಿಲ್ಲೆಗೆ ಯಾವುದೇ ಕೊಡುಗೆಯೂ ಇಲ್ಲ, ನಮ್ಮ ಕಾರ್ಯಕರ್ತರಿಗೂ ಬೆಲೆಯೂ ಇಲ್ಲ. ಗೆಲ್ಲುವವರೆಗೂ ಅಷ್ಟೇ ನಮ್ಮನ್ನು ಬಳಸಿಕೊಂಡು ನಂತರ ಜಿಲ್ಲೆಯನ್ನು, ಜಿಲ್ಲೆಯ ಜನರನ್ನು ಕಡೆಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಕಾರ್ಯಕರ್ತರ ಬಗ್ಗೆ ಕಾಳಜಿ ಹೊಂದಿರುವ ಸ್ವಾಭಿಮಾನದ ಅಭ್ಯರ್ಥಿಯಾದ ಎಂ.ಸಿ ರಘುಚಂದನ್ ಅವರಿಗೆ ಬಿಜೆಪಿ ಟಿಕೇಟ್ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಮತದಾರರ ಅಭಿಪ್ರಾಯದ ಕುರಿತ ಸಂದೇಶವನ್ನು ಕಳುಹಿಸುವಂತೆ ಮನವಿ ಮಾಡಲಾಯಿತು.

    ಕ್ಲಿಕ್ ಮಾಡಿ ಓದಿ: ರೈತರ ಗಮನಕ್ಕೆ…ಬೋರ್‌ವೆಲ್‌ ಪ್ರತಿ ಅಡಿಗೆ ರೂ.105ಫಿಕ್ಸ್‌ | ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್‌

    ಐತಿಹಾಸ ಹಿನ್ನಲೆಯುಳ್ಳ ಈ ಜಿಲ್ಲೆಯೂ ಸುತ್ತ ಮುತ್ತಲಿನ ಹೊಸ ಜಿಲ್ಲೆಗಳಿಗಿಂತ ತುಂಬ ಹಿಂದುಳಿದ ಜಿಲ್ಲೆಯಂತಿದೆ. ಕಾರಣ ಈ ಜಿಲ್ಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿರುದ್ಯೋಗದ ಸಮಸ್ಯೆ, ನೀರಾವರಿ ಸಮಸ್ಯೆಯಿದ್ದು, ರೈತರು ಮಳೆ ಮತ್ತು ಬೋರವೆಲ್‍ಗಳನ್ನು ನಂಬಿ ಬೆಳೆ ಬೆಳೆಯುವ ಪರಿಸ್ಥಿತಿ ಇದೆ. ಮಳೆಯ ಅಭಾವದ ಕಾರಣದಿಂದ ರೈತರು ಕೃಷಿಗಾಗಿ ಸಾಲ ಸೂಲ ಮಾಡಿ ಸಂಕಷ್ಟಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದು ಒದಗಿದೆ. ಚಿತ್ರದುರ್ಗ ಜಿಲ್ಲೆಯನ್ನು ಹಲವು ವರ್ಷಗಳಿಂದಲೂ ಹೊರಗಿನವರೂ ಬಂದು ಈ ಜಿಲ್ಲೆಯಲ್ಲಿ ಆಡಳಿತ ಮಾಡುತ್ತಿರುವುದರಿಂದ ಈ ಜಿಲ್ಲೆಯೂ ಅತ್ಯಂತ ಹಿಂದುಳಿಯಲೂ ಕಾರಣವಾಗಿದೆ.

    ಕ್ಲಿಕ್ ಮಾಡಿ ಓದಿ: ಚಳ್ಳಕೆರೆ ATR ನಲ್ಲಿ ಇಸ್ರೋ ಮಹತ್ವದ ಸಾಧನೆ | ಮರುಬಳಕೆಯ ರಾಕೇಟ್ ಪುಷ್ಪಕ್ ಯಶಸ್ವಿ ಲ್ಯಾಂಡಿಂಗ್

    ಆದ್ದರಿಂದ ನಮ್ಮ ಜಿಲ್ಲೆಯ ಸಮಸ್ಯೆಯನ್ನು ಅರ್ಥಮಾಡಿಕೊಂಡು ಆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಪಡುವ ಸ್ಥಳೀಯ ನಾಯಕರಿಗೆ ಟಿಕೇಟ್ ಕೊಟ್ಟು ಸಹಕರಿಸಿದ್ದೆ ಆದರೆ ನಮ್ಮ ಜಿಲ್ಲೆಯೂ ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಒತ್ತಾಯ ಮಾಡಿದರು.

    ಕಿಟಕಿ ಗಾಜು ಪುಡಿ ಪುಡಿ:

    ರಘುಚಂದನ್ ಅವರಿಗೆ ಬಿಜೆಪಿ ಟೀಕೇಟ್ ನೀಡುವಂತೆ ಆಗ್ರಹಿಸಿ ಪ್ರತಿಭಟಿಸುವ ವೇಳೆ ಕೆಲವರು ಪಕ್ಷದ ಕಚೇರಿಯ ಕಿಟಕಿಯ ಗಾಜನ್ನು ಹೊಡೆದರು. ಕಿಟಕಿಯ ಗಾಜು ಪುಡಿ ಪುಡಿಯಾಯಿತು. ಕಚೇರಿಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳನ್ನು ಪೋಲಿಸರ ತಡೆದರು.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top