ಮುಖ್ಯ ಸುದ್ದಿ
ಆಸ್ತಿ ತೆರಿಗೆ ಪಾವತಿ | ಶೇ.5ರಷ್ಟು ರಿಯಾಯಿತಿ
CHITRADURGA NEWS | 06 APRIL 2025
ಚಿತ್ರದುರ್ಗ: ನಗರಸಭೆ ಅಧ್ಯಕ್ಷರ ನೇತೃತ್ವದ ಕೌನ್ಸಿಲ್ ಸಭೆ 2025-26ನೇ ಸಾಲಿನ ಮೂಲ ಆಸ್ತಿ ತೆರಿಗೆ ಮೇಲೆ ವಾಸಯೋಗ್ಯ ಮತ್ತು ಖಾಲಿ ನಿವೇಶನಗಳಿಗೆ ಶೇ.3 ರಷ್ಟು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಶೇ.4 ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಅನುಮೋದನೆ ನೀಡಿದೆ.
Also Read: ಏ.15 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ | ಯಾವ ಯಾವ ಕ್ರೀಡೆಗಳಲ್ಲಿ ಭಾಗವಹಿಸಬಹುದು? ಇಲ್ಲಿದೆ ಮಾಹಿತಿ
ಈ ತೆರಿಗೆಯನ್ನು ಏಪ್ರಿಲ್ 1 ರಿಂದ ಜಾರಿ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಸಾರ್ವಜನಿಕರು ಏಪ್ರಿಲ್ 30ರ ಒಳಗೆ ಆಸ್ತಿ ತೆರಿಗೆ ಪಾವತಿಸಿದರೆ, ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5 ರಷ್ಟು ರಿಯಾಯಿತಿ ದೊರೆಯಲಿದೆ.
ಈ ಅವಕಾಶವನ್ನು ಬಳಿಸಿಕೊಂಡು ಆಸ್ತಿ ತೆರಿಗೆ ಪಾವತಿಸಿ, ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಪೌರಾಯುಕ್ತರು ಕೋರಿದ್ದಾರೆ.
Also Read: ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್, ಮೋಹನ್ ಭಾಗವತ್ ಹೆಸರಿಗೆ ತಕರಾರು