ಮುಖ್ಯ ಸುದ್ದಿ
ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರೊ.ಮಹಾದೇವ ಲಾಲ್ ಶ್ರಾಫ್ ಜನ್ಮ ದಿನಾಚರಣೆ
CHITRADURGA NEWS | 06 MARCH 2025
ಚಿತ್ರದುರ್ಗ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಆದ್ಯಾ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಗುರುವಾರ ಪ್ರೊ.ಮಹಾದೇವ ಲಾಲ್ ಶ್ರಾಫ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.
Also Read: ನಾಯಕನಹಟ್ಟಿ ಜಾತ್ರೆಗೆ 200 KSRTC ಬಸ್
ಈ ವೇಳೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ, ವೈದ್ಯಕೀಯ ಫಾರ್ಮಸಿ ವೃತ್ತಿ ಅತ್ಯಂತ ಪವಿತ್ರವಾದುದು. ಇಡೀ ಜಗತ್ತನ್ನೆ ತತ್ತರಿಸುವಂತೆ ಮಾಡಿದ್ದ ಕೊರೋನಾ ಸಂದರ್ಭದಲ್ಲಿ ವೈದ್ಯರು ಮತ್ತು ಫಾರ್ಮಸಿಸ್ಟ್‍ಗಳ ಸೇವೆ ಅನನ್ಯವಾಗಿತ್ತು ಎಂದು ಗುಣಗಾನ ಮಾಡಿದರು.
ವೈದ್ಯಕೀಯ ಮತ್ತು ಫಾರ್ಮಸಿಸ್ಟ್ ಶಿಕ್ಷಣ ಪಡೆಯುವ ನೀವುಗಳು ವೃತ್ತಿಯನ್ನು ಪ್ರೀತಿಸಿ ಗೌರವಿಸುವುದು ಮುಖ್ಯ. ಹಣ ಗಳಿಕೆಯ ಜೊತೆ ಸಮರ್ಪಣಾ ಗುಣ ಬೆಳೆಸಿಕೊಳ್ಳಿ ಎಂದು ಹೇಳಿದರು.
Also Read: ಜಿಲ್ಲಾಸ್ಪತ್ರೆ ಆವರಣದಲ್ಲಿ ತಂಗುದಾಣ | ಉಜ್ಜೀವನ್ ಬ್ಯಾಂಕ್‍ನಿಂದ ಕೊಡುಗೆ
ಜಗತ್ತಿನಲ್ಲಿ ಪ್ರತಿಯೊಬ್ಬರು ಬದುಕುವುದು ಹಣಕ್ಕಾಗಿಯೇ, ಇದರ ಜೊತೆಯಲ್ಲಿ ಶಿಸ್ತು ಮತ್ತು ತ್ಯಾಗವಿರಬೇಕು ಎಂದು ಹೇಳಿದರು.
ಔಷಧ ನಿಯಂತ್ರಣ ಇಲಾಖೆ ಸಹಾಯಕ ಡ್ರಗ್ ಕಂಟ್ರೋಲರ್ ಸಿ.ಎಚ್.ಗಿರೀಶ್ ಮಾತನಾಡಿ, ಫಾರ್ಮಸಿ ಓದಿದವರ ಮೇಲೆ ಜವಾಬ್ದಾರಿ ಜಾಸ್ತಿಯಿರುತ್ತದೆ. ಔಷಧಗಳ ತಯಾರಿಕೆ ಮತ್ತು ಅದರ ಪರಿಣಾಮ ಏನು ಎನ್ನುವುದು ನಿಮಗೆ ಗೊತ್ತಿರುತ್ತದೆ.
ಫಾರ್ಮಸಿಸ್ಟ್‍ಗಳು ಯಾವುದೇ ಕಾರಣಕ್ಕೂ ಡ್ರಗ್ಸ್ ಚಟಕ್ಕೆ ಬಲಿಯಾಗಬಾರದು. ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಸಮಾಜಕ್ಕೆ ತಿಳಿ ಹೇಳುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹೇಳಿದರು.
Also Read: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ರೈತರು ಮೃತ
ಈ ಸಂದರ್ಭದಲ್ಲಿ ಎಸ್.ಎಲ್.ವಿ. ಬಿ.ಇ.ಡಿ.ಕಾಲೇಜು ಪ್ರಾಂಶುಪಾಲರಾದ ಡಾ.ಬಿ.ಸಿ.ಅನಂತರಾಮು, ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ಶೈಕ್ಷಣಿಕ ಸಂಯೋಜಕ ಡಾ.ಎಂ.ಎನ್.ಪಾಲಾಕ್ಷ, ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ನವಾಜ್, ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಮುತಹಾರ್ ಸೇರಿದಂತೆ ಇತರರು ಇದ್ದರು.