ಮುಖ್ಯ ಸುದ್ದಿ
Award; ಬೇಡ ಜಂಗಮ ಸಮಾಜದಿಂದ ಪ್ರತಿಭಾ ಪುರಸ್ಕಾರ | ಕೆ.ಎಸ್.ನವೀನ್, ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಭಾಗೀ
CHITRADURGA NEWS | 28 JULY 2024
ಚಿತ್ರದುರ್ಗ: ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ಮತ್ತು ತಾಲ್ಲೂಕು ಬೇಡ ಜಂಗಮ ಸಮಾಜ ವತಿಯಿಂದ ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಪ್ರತಿಭಾ ಪುರಸ್ಕಾರ( Talent Award ) ಮತ್ತು ಶಿಷ್ಯ ವೇತನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕ್ಲಿಕ್ ಮಾಡಿ ಓದಿ: Upper Bhadra Project : ಶೀಘ್ರ 8 ಕೆರೆಗಳಿಗೆ ಭದ್ರಾ ನೀರು | ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ
ಕಾರ್ಯಕ್ರಮದಲ್ಲಿ ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮೀಜಿ ಭಾಗವಹಿಸಿ ಮಾತನಾಡಿ, ಬೇಡಜಂಗಮರು ವಿಚಾರವಂತರು, ಜ್ಞಾನದಾಸೋಹಿಗಳು ಇವರ ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಮಠಮಾನ್ಯಗಳ ಪ್ರಸಾದ ನಿಲಯಗಳಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ ಎಂದು ಹೇಳಿದರು.
ಪ್ರತಿಭಾ ಪುರಸ್ಕಾರ ಮಾಡುವವರೂ ಶ್ರೀಮಂತರಲ್ಲ, ತೆಗೆದುಕೊಳ್ಳುವವರೂ ಶ್ರೀಮಂತರಲ್ಲ. ಜಂಗಮತ್ವದ ಸಂಸ್ಕಾರದಿಂದ ಜಂಗಮರನ್ನು ಗುರುಸ್ಥಾನದಲ್ಲಿಟ್ಟ ಕೀರ್ತಿ ಸಮಸ್ತ ಸಮುದಾಯರಿಗೆ ಸಲ್ಲುತ್ತದೆ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುವಿನ ಸ್ಥಾನದಲ್ಲಿರುವ ಸಮಾಜ ಬೇಡಜಂಗಮ ಸಮಾಜ. ವಿದ್ಯೆ ಎಂಬ ಚೈತನ್ಯವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದಿದೆ. ಪ್ರತಿಯೊಬ್ಬರ ಸಾಧನೆಯ ಹಿಂದೆ ಜಂಗಮ ಸಮಾಜದ ಪರಿಶ್ರಮವಿದೆ. ಅಂಕಪಟ್ಟಿ ಪಡೆದ ನಂತರದ ಜೀವನದಲ್ಲಿ ಸಾಧಿಸುವುದು ನಿಜವಾದ ಅಂಕಪಟ್ಟಿಯಾಗಿದೆ. ಜೀವನದ ಅನುಭವದ ಅಂಕಪಟ್ಟಿಯ ಬಗ್ಗೆ ಉತ್ತಮ ನಿರೀಕ್ಷೆ ಕಾಣಬೇಕು ಎಂದರು.
ಕ್ಲಿಕ್ ಮಾಡಿ ಓದಿ: ನಾಳೆ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಜಂಗಮ ಸಂಸ್ಕೃತಿಯನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಮೀಸಲಾತಿ ಹೋರಾಟ ನಿರಂತರವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಮಠಮಾನ್ಯಗಳು ವಿದ್ಯಾದಾನ ಮಾಡುತ್ತಾ ಬಂದಿದೆ.
ದೇಶವಿದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಹಲವಾರು ಅನುದಾನ ಪ್ರೋತ್ಸಾಹದ ಮಾರ್ಗಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂದೆ ತಾಯಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಗುಣಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಜಂಗಮರು ನಿತ್ಯವೂ ಚಲನಶೀಲರು. ವಿದ್ಯೆ, ದಾಸೋಹದ ಪರಿಕಲ್ಪನೆಯನ್ನು ನಾಡಿಗೇ ಕೊಡುಗೆಯಾಗಿ ನೀಡಿದವರು ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ 21, ಪಿಯುಸಿಯಲ್ಲಿ 18, ಪಿಹೆಚ್‌ಡಿ ಪದವಿ ಪಡೆದ 03 ಸಂಶೋಧನಾರ್ಥಿಗಳಿಗೆ ಹಾಗೂ 03 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.
ಕ್ಲಿಕ್ ಮಾಡಿ ಓದಿ: Rain: ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ
ಬೇಡಜಂಗಮ ಸಮಾಜದ ಜಿಲ್ಲಾದ್ಯಕ್ಷ ಸೋಮಶೇಖರ ಮಂಡಿಮಠ, ಕಾರ್ಯಾಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಅಖಿಲ ಭಾರತ ಬೇಡಜಂಗಮ ಸಮಾಜದ ಕಾರ್ಯಧ್ಯಕ್ಷ ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಖಜಾಂಚಿ ಕೆ.ಎಸ್.ಶಿವನಗೌಡ್ರು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ರಂಗಕರ್ಮಿ ಕೆ.ಪಿ.ಎಂ.ಗಣೇಶಯ್ಯ ಸೇರಿದಂತೆ ಬೇಡ ಜಂಗಮ ಸಮಾಜದ ಇತರರು ಭಾಗವಹಿಸಿದ್ದರು.