Connect with us

Power outage: 15 ದಿ‌ನ ದಿನ ಬಿಟ್ಟು ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ..?

Power outage on May 1

ಮುಖ್ಯ ಸುದ್ದಿ

Power outage: 15 ದಿ‌ನ ದಿನ ಬಿಟ್ಟು ದಿನ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ..?

CHITRADURGA NEWS | 07 DECEMBER 2024

ಚಿತ್ರದುರ್ಗ: ಕೆಪಿಟಿಸಿಎಲ್(kPTCL)ಯಿಂದ ಬೃಹತ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.9 ರಿಂದ 23ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ(Power outage)ವಾಗಲಿದೆ.

ಕ್ಲಿಕ್ ಮಾಡಿ ಓದಿ: ಕುಂಚಿಗನಾಳು ಬಳಿ ಹೊಸ ಕೇಂದ್ರೀಯ ವಿದ್ಯಾಲಯ | ಮೋದಿ ಸರ್ಕಾರದ ಕೊಡುಗೆ | ಎ.ನಾರಾಯಣಸ್ವಾಮಿ ಶ್ರಮ

ಕೆಪಿಟಿಸಿಎಲ್ ಬೃಹತ್ ಕಾಮಗಾರಿ ವತಿಯಿಂದ 66 ಕೆ.ವಿ ದಾವಣಗೆರೆ-ಚಿತ್ರದುರ್ಗ ಲೈನ್-1ರ ಟ್ಯಾಪ್ ಪಾಯಿಂಟ್‍ನಿಂದ 2.196 ಕಿಮೀ ಉದ್ದಕ್ಕೂ ಭರಮಸಾಗರ ವಿ.ವಿ ಕೇಂದ್ರಕ್ಕೆ 2.196 ಕಿಮೀ ದೂರದ ನಿರ್ಮಾಣಕ್ಕೆ ಕೊಯೋಟ್ ಕಂಡಕ್ಟರ್‍ನೊಂದಿಗೆ ಜೋಡಿ ಪ್ರಸರಣ ಮಾರ್ಗದ ಮೇಲಿರುವ ಜೋಡಿ ಮಾರ್ಗದಿಂದ ಒಂಟಿ ಪ್ರಸರಣ ಮಾರ್ಗದ ಮೇಲಿರುವ ಒಂಟಿ ಮಾರ್ಗ ಪರಿವರ್ತಿಸುವ ಮೂಲಕ ಅಸ್ತಿತ್ವದಲ್ಲಿರುವ 66/11 ಕೆವಿ ಭರಮಸಾಗರ ವಿ.ವಿ ಕೇಂದ್ರಕ್ಕೆ ಲೀಲೋ ವ್ಯವಸ್ಥೆ ಒದಗಿಸಲು 1 ಸಂಖ್ಯೆಯ 66 ಕೆವಿ ಟಿ.ಬಿಯನ್ನು 66/11 ಕೆ.ವಿ ಭರಮಸಾಗರ ವಿ.ವಿ ಕೇಂದ್ರದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಇದೇ ಡಿ.09 ರಿಂದ 23 ರವರೆಗೆ (ಪರ್ಯಾಯ ದಿನಗಳಂದು ಡಿ.09, 11, 13, 15, 17, 19, 21 ಮತ್ತು ಡಿ.23ರಂದು) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಭರಮಸಾಗರ ವಿ.ವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 

ಹೆಗ್ಗೆರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೋಳಾಳ್ ಎನ್.ಜೆ.ವೈ, ಹೆಗ್ಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರ್ ಘಟ್ಟ , ಅಡವಿ ಗೊಲ್ಲರಹಳ್ಳಿ, ಭರಮಸಾಗರ , ಪಮೇರಹಳ್ಳಿ, ಕೋಗುಂಡೆ, ಎಸ್.ಕೆ.ಎಮ್ ಕೈಗಾರಿಕಾ ಪ್ರದೇಶ, ಕೋಡಿಹಳ್ಳಿ, ಅರಳಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಕ್ಲಿಕ್ ಮಾಡಿ ಓದಿ: ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ ಕುರಿತು ಎಬಿವಿಪಿ ಪ್ರಬಂಧ ಸ್ಪರ್ಧೆ | ಯಾರು ಭಾಗವಹಿಸಬಹುದು ಕ್ಲಿಕ್ ಮಾಡಿ ನೋಡಿ

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version