Connect with us

ನನಗೆ ಅಧಿಕಾರ ದೊಡ್ಡದಲ್ಲ | ಶಾಸಕ ಡಾ.ಎಂ.ಚಂದ್ರಪ್ಪ

MLA CHANDARAPA

ಮುಖ್ಯ ಸುದ್ದಿ

ನನಗೆ ಅಧಿಕಾರ ದೊಡ್ಡದಲ್ಲ | ಶಾಸಕ ಡಾ.ಎಂ.ಚಂದ್ರಪ್ಪ

CHITRADURGA NEWS | 06 JULY 2024
ಚಿತ್ರದುರ್ಗ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ 2025 ರ ಜನವರಿ 26 ರೊಳಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.

ಹೊಳಲ್ಕೆರೆ ತಾಲ್ಲೂಕಿನ ನವಣೆಕೆರೆ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು. ‘ಕ್ಷೇತ್ರದ ಪ್ರತಿ ಹಳ್ಳಿಯ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮವಹಿಸಲಾಗಿದೆ. 20 ಕೋಟಿ ವೆಚ್ಚದಲ್ಲಿ ಹೈಟೆಕ್‌ ಆಸ್ಪತ್ರೆ, 20 ಕೋಟಿ ರೂ.ಗಳಲ್ಲಿ ತಾಲ್ಲೂಕು ಕಚೇರಿ ನಿರ್ಮಿಸಲಾಗಿದೆ. ಚೆಕ್‌ ಡ್ಯಾಂ, ಕೆರೆಗಳನ್ನು ಕಟ್ಟಿಸಲಾಗಿದೆ’ ಎಂದು ತಿಳಿಸಿದರು.

ಕ್ಲಿಕ್‌ ಮಾಡಿ ಓದಿ: ವಿಎಲ್‌ಟಿ, ಪ್ಯಾನಿಕ್‌ ಬಟನ್ ಅಳವಡಿಕೆ ಕಡ್ಡಾಯ | ನಿರ್ಲಕ್ಷಿಸಿದರೆ ₹ 1000 ದಂಡ ಖಚಿತ

‘ರಾಜ್ಯದಲ್ಲಿ ಎಲ್ಲಿಯೂ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ನಮ್ಮ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಉಚಿತ ಬಸ್‌ ಸಂಚಾರ ಆರಂಭಿಸಲಾಗಿದೆ. ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕ್ಲಿಕ್‌ ಮಾಡಿ ಓದಿ: ಬಸವಣ್ಣ ಪಠ್ಯಕ್ಕೆ ‘ವೀರಶೈವ’ ಪದ ಸೇರಿಸಬೇಡಿ | ಮುಖ್ಯಮಂತ್ರಿಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪತ್ರ

‘ರೈತರಿಗೆ ವಿದ್ಯುತ್‌ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಎನ್‌ಜಿ ಹಳ್ಳಿ ಬಳಿ ವಿದ್ಯುತ್‌ ಸ್ಟೇಷನ್‌ ನಿರ್ಮಾಣ ಮಾಡಲಾಗಿದೆ. ಜೀವನವೇ ಶಾಶ್ವತವಲ್ಲ ಎಂದ ಮೇಲೆ ಅಧಿಕಾರ ದೊಡ್ಡದಲ್ಲ ಎನ್ನುವುದನ್ನು ಅರಿತುಕೊಂಡು ಯಾರಿಂದಲೂ ಏನನ್ನು ಹೇಳಿಸಿಕೊಳ್ಳದೆ ಕ್ಷೇತ್ರದ ಮತದಾರರ ಸಮಸ್ಯೆ ಅರಿತು ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯೆ ವಿಶಾಲಾಕ್ಷಮ್ಮ, ಮುಖಂಡರಾದ ಚಂದ್ರಣ್ಣ, ಮಹಾಲಿಂಗಪ್ಪ, ಮಹೇಶ್ವರಪ್ಪ, ಬಸವರಾಜಪ್ಪ, ರುದ್ರಪ್ಪ, ನಟರಾಜ್‌, ಕೆಆರ್‌ಐಡಿಎಲ್‌ ಸಹಾಯಕ ಎಂಜಿನಿಯರ್‌ ತೇಜಸ್‌ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version