Connect with us

    SJM ಪಾಲಿಟೆಕ್ನಿಕ್ ಕಾಲೇಜಿನಲ್ಲಿ POLY FEST-2024 ಉತ್ಸವ | ಡಾ.ಬಸವಕುಮಾರ ಸ್ವಾಮೀಜಿ ಭಾಗೀ

    SJM ಪಾಲಿಟೆಕ್ನಿಕ್ ಕಾಲೇಜಿನಲ್ಲಿ POLY FEST-2024 ಉತ್ಸವ

    ಮುಖ್ಯ ಸುದ್ದಿ

    SJM ಪಾಲಿಟೆಕ್ನಿಕ್ ಕಾಲೇಜಿನಲ್ಲಿ POLY FEST-2024 ಉತ್ಸವ | ಡಾ.ಬಸವಕುಮಾರ ಸ್ವಾಮೀಜಿ ಭಾಗೀ

    SJM ಪಾಲಿಟೆಕ್ನಿಕ್ ಕಾಲೇಜಿನಲ್ಲಿ POLY FEST-2024 ಉತ್ಸವ | ಡಾ.ಬಸವಕುಮಾರ ಸ್ವಾಮೀಜಿ ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 OCTOBER 2024

    ಚಿತ್ರದುರ್ಗ: ಎಸ್. ಜೆ. ಎಂ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಪಾಲಿಫೆಸ್ಟ್ (POLY FEST) ಉತ್ಸವ- 2024ರ ಅಂಗವಾಗಿ ನಗರದ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಏರ್ಪಡಿಸಿರುವ ಎರಡು ದಿನಗಳ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಎಸ್‍ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಭಾಗವಹಿಸಿದ್ದರು.

    ಕ್ಲಿಕ್ ಮಾಡಿ ಓದಿ: Member; ಜಲ ಶಕ್ತಿ ಸಂಸದೀಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಗೋವಿಂದ ಕಾರಜೋಳ ನೇಮಕ

    ನಂತರ ಮಾತನಾಡಿದ ಅವರು, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರೇರಕವಾಗಿರುತ್ತವೆ. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಲೆ, ಕ್ರೀಡೆ , ಸಾಂಸ್ಕೃತಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ಅತಿ ಮುಖ್ಯ ಎಂದರು.

    ಹಲವರಲ್ಲಿ ಹಲವಾರು ವಿಧದ ಅಭಿರುಚಿ ಹವ್ಯಾಸಗಳಿರುತ್ತವೆ. ಅವುಗಳನ್ನು ವಿದ್ಯಾರ್ಥಿಗಳಲ್ಲಿ ಹೊರತೆಗೆಯುವ ಪ್ರಯತ್ನ ಶಿಕ್ಷಣ ಸಂಸ್ಥೆಗಳಿಂದ ಆದಾಗ ಅಲ್ಲಿ ಅನೇಕ ಪ್ರತಿಭೆಗಳು ಹೊರ ಹೊಮ್ಮುಲು ಸಾಧ್ಯವಾಗುತ್ತದೆ.

    ಅದಕ್ಕೆ ಪೂರಕ ವಾತಾವರಣ ಅಗತ್ಯ. ಓದಿನ ಜೊತೆ ಜೊತೆಗೆ ಇತರ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳು ಘನ ವ್ಯಕ್ತಿತ್ವವನ್ನು ರೂಪಿಸಲಿಕ್ಕೆ ಸಹಕಾರಿಯಾಗುತ್ತವೆ ಎಂದು ಕಿವಿಮಾತು ಹೇಳಿದರು.

    ಕ್ಲಿಕ್ ಮಾಡಿ ಓದಿ: Power Cut: ಚಿತ್ರದುರ್ಗ ನಗರ, ಗ್ರಾಮಾಂತರ ಭಾಗದಲ್ಲಿ ನಾಳೆ ವಿದ್ಯುತ್ ವ್ಯತ್ಯಯ

    ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಭರತ್, ಫಾರ್ಮಸಿಯ ಪ್ರಾಚಾರ್ಯ ನಾಗರಾಜ್, ಪ್ರಾಚಾರ್ಯರದ ಎಸ್ .ವಿ .ರವಿಶಂಕರ್, ದೈಹಿಕ ನಿರ್ದೇಶಕ ಕುಮಾರ ಸ್ವಾಮಿ, ಪಾಲಿಟೆಕ್ನಿಕ್ ನ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಪಿ.ಬಿ ರಾಜೇಶ್, ನಳಿನಾಕ್ಷಿ, ಎಸ್.ಮೋಹನ್ ಕುಮಾರ್, ಪಿ.ಎ.ರಘು ಸೇರಿದಂತೆ ಪಾಲಿಟೆಕ್ನಿಕ್‍ನ ಬೋಧಕರು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top