ಮುಖ್ಯ ಸುದ್ದಿ
Shobhayatre: ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಪೊಲೀಸ್ ಸರ್ಪಗಾವಲು
CHITRADURGA NEWS | 26 SEPTEMBER 2024
ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಶನಿವಾರ (ಸೆ.28) ನಡೆಯಲಿರುವ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ (Shobhayatre) ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಸುಮಾರು 5 ಲಕ್ಷ ಜನ ಸೇರುವ ಅಂದಾಜು ಇದ್ದು, ಪೊಲೀಸರು ಭಾರೀ ತಯಾರಿ ಮಾಡಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಈ ಬಗ್ಗೆ ಮಾಹಿತಿ ನೀಡಿದ್ದು, ಶಾಂತಿಯುತ ಮೆರವಣಿಗೆಗಾಗಿ ಬೆಂಗಳೂರು ಕೇಂದ್ರ ಹಾಗೂ ದಾವಣಗೆರೆ ವಲಯಗಳಿಂದ ಹೆಚ್ಚುವರಿ ಪೊಲೀಸರನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಅಂಗವಾಗಿ ಭರ್ಜರಿ ಬೈಕ್ ರ್ಯಾಲಿ
ಭದ್ರತೆಗಾಗಿ ಒಬ್ಬರು SP, 6 ASP, 353 DySP, 50 CPI, PSI, ASI ಸಹಿತ 3500ಕ್ಕೂ ಹೆಚ್ಚು ಅಧಿಕಾರಿ, ಪೊಲೀಸ್ ಹಾಗೂ ಗೃಹರಕ್ಷಕದಳ ಸಿಬ್ಬಂದಿ, 10 KSRP, 12 DAR ಹಾಗೂ 4 QRT ತಂಡಗಳನ್ನು ಬಂದೋಬಸ್ತ್ ಕರ್ತವ್ಯ ನಿರ್ವಹಿಸಲಿದ್ದಾರೆ.
ಮಹಿಳಾ ಕಲಾವಿದರು, ಮಹಿಳೆಯ ರಕ್ಷಣೆಗೆ ಮಹಿಳಾ ಪೊಲೀಸ್ ಅಧಿಕಾರಿ,ಸಿಬ್ಬಂದಿ ವಿಶೇಷ ತಂಡಗಳಿರುತ್ತವೆ. ಮಹಿಳೆಯರು ಚಿನ್ನಾಭರಣ ಧರಿಸದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಸರಗಳ್ಳತನ, ಮೊಬೈಲ್ ಕಳ್ಳತನ, ಪಿಕ್‍ಪಾಕೆಟ್ ತಡೆಗೆ ವಿವಿಧ ಜಿಲ್ಲೆಗಳ ಕ್ರೈಮ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಕಳ್ಳರು | ಚಿನ್ನದ ಸರ ಕದ್ದು ಎಸ್ಕೇಪ್