ಅಡಕೆ ಧಾರಣೆ
ನಕಲಿ ಗುಟ್ಖಾ ತಯಾರಿ | ಚಳ್ಳಕೆರೆಯ ಡೈರಕ್ಟರ್ ಗ್ಲೋಬಲ್ ಇಂಡಸ್ಟ್ರೀಸ್ ಕಂಪನಿ ಮೇಲೆ ಪೊಲೀಸರ ದಾಳಿ
ಚಿತ್ರದುರ್ಗ ನ್ಯೂಸ್.ಕಾಂ: ಚಳ್ಳಕೆರೆ ಪಟ್ಟಣದ ಜಗಲೂರಜ್ಜನ ಗುಡಿ ರಸ್ತೆಯಲ್ಲಿರುವ ಡೈರಕ್ಟರ್ ಗ್ಲೋಬಲ್ ಇಂಡಸ್ಟ್ರೀಸ್ ಕಂಪನಿ ಮೇಲೆ ಚಳ್ಳಕೆರೆ ನಗರ ಪೊಲೀಸರು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಪಾನ್ ಮಸಾಲ ಹಾಗೂ ಗುಟ್ಖಾ ಪಾಕೇಟ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋವಾ ನಂ.1 ಹೆಸರಿನಲ್ಲಿ ಅಕ್ರಮವಾಗಿ ನಕಲಿ ಗುಟ್ಖಾ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಈ ದಾಳಿ ನಡೆದಿದೆ.
ಮುಂಬೈ ಮೂಲದ ಅಡ್ವೆಂಚರಿಂಗ್ ಮತ್ತು ಜೆಎಂಜೆ ಮಾರ್ಕೆಟಿಂಗ್ ಪ್ರೈವೇಟ್ ಕಂಪನಿ ಹೆಸರಿನಲ್ಲಿ ಗೋವಾ ನಂ.1 ಹೆಸರಿನಲ್ಲಿ ಅಡಕೆ ಮತ್ತು ಅದರ ಇತರೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಅನುಮತಿ ಹೊಂದಲಾಗಿದೆ.
ಇದನ್ನೂ ಓದಿ: ಖಾಸಗಿ ಸಾರಿಗೆ ಸಿಬ್ಬಂದಿಗೆ ಗುಡ್‍ನ್ಯೂಸ್
ಈ ಕಂಪನಿಯ ಪಾಕೇಟ್‍ಗಳ ಮೇಲೆ ಜೆ.ಎಂ.ಜೋಶಿ ಭಾವಚಿತ್ರ ಹಾಕಿ ಟ್ರೇಡ್ ಮಾರ್ಕ್ ಮಾಡಲಾಗಿದೆ. ಈ ಕಂಪನಿಯ ಟ್ರೇಡ್ ಮಾರ್ಕ್ ಹಾಗೂ ಹೆಸರನ್ನು ಬಳಸಿಕೊಂಡು ಚಳ್ಳಕೆರೆಯ ಡೈಕರ್ಟರ್ ಗ್ಲೋಬಲ್ ಇಂಡಸ್ಟ್ರೀಸ್ ಕಂಪನಿಯವರು ಹಾಗೂ ವಿತರಕರು ಸೇರಿ ಮೇಲ್ಕಂಡ ಪಾನ್ ಮಸಾಲ ವಸ್ತುಗಳನ್ನು ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಜೆಎಂಜೆ ಕಂಪನಿಯ ಎಂ.ಡಿ. ಅಜಯ್‍ಕುಮಾರ್ ಜೈನ್ ದೂರು ದಾಖಲಿಸಿದ್ದರು.
ನಮ್ಮ ಕಂಪನಿಯ ಉತ್ಪನ್ನಗಳನ್ನು ನಕಲು ಮಾಡಿ ಮಾರಾಟ ಮಾಡುವುದಲ್ಲದೆ ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಆಗುವ ಸಾಧ್ಯತೆಗಳೂ ಇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಚಳ್ಳಕೆರೆ ಪೊಲೀಸರು ಡೈಕಕ್ಟರ್ ಗ್ಲೋಬಲ್ ಇಂಡಸ್ಟ್ರೀಸ್ ಕಂಪನಿ ಮೇಲೆ ಶುಕ್ರವಾರ ದಾಳಿ ನಡೆಸಿ ಅಪಾರ ಪ್ರಮಾಣದ ಅಡಕೆ, ಗುಟ್ಖಾ, ಪಾನ್ ಮಸಾಲ ಪೊಟ್ಟಣಗಳನ್ನು ವಶಪಡಿಸಿಕೊಂಡಿದ್ದಾರೆ.