ಮುಖ್ಯ ಸುದ್ದಿ
Sports: ಪೊಲೀಸರ ವಾರ್ಷಿಕ ಕ್ರೀಡಾಕೂಟ | ನ್ಯಾ.ರೋಣ ವಾಸುದೇವ ಚಾಲನೆ
CHITRADURGA NEWS | 22 NOVEMBER 2024
ಚಿತ್ರದುರ್ಗ: ಪೊಲೀಸರ(police) ಶಿಸ್ತಿನ ಕರ್ತವ್ಯ ನಿರ್ವಹಣೆಯ ಹಿಂದಿರುವ ಅವರ ಕುಟುಂಬ ಸದಸ್ಯರ ಸಹಕಾರವನ್ನು ಕಡೆಗಣಿಸುವಂತಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಹೇಳಿದರು.
ಕ್ಲಿಕ್ ಮಾಡಿ ಓದಿ: ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನ | ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ನಗರದ ಡಿಎಆರ್ ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ 3 ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ(Sports)ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದರೆ ಜನರ ನಿರೀಕ್ಷೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಗೌರವ ತರುವಂತಾಗಲಿ ಎಂದು ಆಶಿಸಿದರು.
ಡಾ.ಬಿ.ಆರ್.ಅಂಬೇಡ್ಕರರು ನೀಡಿರುವ ವಿಶೇಷವಾದ ಸಂವಿಧಾನದ ಕಾರಣಕ್ಕಾಗಿ ಒಂದು ಪುಟ್ಟ ಜಗತ್ತಿನಂತಿರುವ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾದ್ಯವಾಗುತ್ತಿದೆ. ಇಂದು ಎಲ್ಲೆಲ್ಲೂ ಒತ್ತಡ ಹೆಚ್ಚಾಗುತ್ತಿದ್ದು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಸಹಜವಾಗಿ ಒತ್ತಡ ಹೆಚ್ಚಾಗಿದೆ. ಈ ನಡುವೆಯೂ ಜನರ ಆಶೋತ್ಥರಗಳಿಗೆ ಸ್ಪಂದಿಸಲು ಉತ್ತಮ ಆರೋಗ್ಯ ಮುಖ್ಯ ಎಂದರು.
ಕ್ಲಿಕ್ ಮಾಡಿ ಓದಿ: ಕನ್ನಡ ಉಪನ್ಯಾಸಕಿ ಗುರುಪಾದಮ್ಮಗೆ Phd ಪದವಿ
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ದೈಹಿಕ ಸದೃಢತೆ ಹಾಗೂ ಕಸರತ್ತಿನಿಂದ ಏಕಾಗ್ರತೆ ವೃದ್ಧಿಯಾಗಲಿದೆ. ಈ ಕಾರಣಕ್ಕೆ ಗಂಟೆಗಟ್ಟಲೇ ಕರ್ತವ್ಯದಲ್ಲಿದ್ದರೂ ಅನೇಕ ಪೊಲೀಸರು ಹಸನ್ಮುಖಿಗಳಾಗಿರುತ್ತಾರೆ ಎಂದು ಶ್ಲಾಘಿಸಿದರು.
ನಮ್ಮ ರಾಜ್ಯದ ಪೊಲೀಸರು ಶಿಸ್ತಿಗೆ ಹೆಸರಾಗಿದ್ದಾರೆ. ಒತ್ತಡದ ಬದುಕು, ವೇಗವಾಗಿ ಓಡುತ್ತಿರುವ ಜನಜೀವನದ ನಡುವೆ ಎಲ್ಲರೂ ಆರೋಗ್ಯದ ಕಡೆ ಗಮನ ಕೊಡುವುದು ಅನಿವಾರ್ಯ. ವಿಶೇಷವಾಗಿ ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಕ್ಲಿಕ್ ಮಾಡಿ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸ್ವಾಗತಿಸಿದರು. ಡಿಎಆರ್ ಡಿವೈಎಸ್‌ಪಿ ಗಣೇಶ್ ವಂದಿಸಿದರು.
ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟವನ್ನು ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ ಉದ್ಘಾಟಿಸಿದರು.