Connect with us

Degree: ಪದವಿ ಪ್ರಬುದ್ಧತೆಯ ಸಂಕೇತ | ಡಾ.ಬಸವಕುಮಾರ ಸ್ವಾಮೀಜಿ 

ಪದವಿ ಪ್ರಬುದ್ಧತೆಯ ಸಂಕೇತ | ಡಾ.ಬಸವಕುಮಾರ ಸ್ವಾಮೀಜಿ 

ಮುಖ್ಯ ಸುದ್ದಿ

Degree: ಪದವಿ ಪ್ರಬುದ್ಧತೆಯ ಸಂಕೇತ | ಡಾ.ಬಸವಕುಮಾರ ಸ್ವಾಮೀಜಿ 

CHITRADURGA NEWS | 23 NOVEMBER 2024

ಚಿತ್ರದುರ್ಗ: ಪದವಿ(Degree) ಎಂದರೆ ಪ್ರಬುದ್ಧತೆಯ ಸಂಕೇತ. ಬೇರೆ ಬೇರೆ ವಿಷಯಗಳ ಬಗ್ಗೆ ಪ್ರಬುದ್ಧತೆಯನ್ನು ಪಡೆದುಕೊಳ್ಳಬೇಕಿದೆ ಎಂದು ಡಾ.ಬಸವಕುಮಾರ ಸ್ವಾಮಿಗಳು ಹೇಳಿದರು.

ಕ್ಲಿಕ್ ಮಾಡಿ ಓದಿ: ಪೊಲೀಸರ ವಾರ್ಷಿಕ ಕ್ರೀಡಾಕೂಟ | ನ್ಯಾ.ರೋಣ ವಾಸುದೇವ ಚಾಲನೆ

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ, ಕನ್ನಡ ರಾಜ್ಯೋತ್ಸವ, ವಿಶೇಷ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಶ್ರೀಗಳು ಮಾತನಾಡಿದರು.

ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸುವುದು ಆತನ ಅಸ್ತಿತ್ವದಿಂದ. ಕನ್ನಡ ಮಹತ್ವದ್ದು. ನಮ್ಮ ದೇಶದ, ನಾಡಿನ ಪಂಡಿತರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ವಿದೇಶಿಗರು ಕನ್ನಡ ಸಾಹಿತ್ಯವನ್ನು ವಿಭಾಗ ಕ್ರಮ ಮಾಡಿಕೊಟ್ಟರು. ಕನ್ನಡದ ಹೇಳಿಕೆಗಳು ಅವರಿಗೆ ಮೆಚ್ಚುಗೆಯಾದವು. ಹಿಂದೆ ಜ್ಞಾನ ಸಂಪತ್ತಿಗೆ ಹೆಚ್ಚು ಮಹತ್ವ ಇತ್ತು. ಇಂದು ಅಸ್ತಿತ್ವದಿಂದ ವ್ಯಕ್ತಿಯನ್ನು ಗುರುತಿಸುವ ಕೆಲಸವಾಗುತ್ತಿದೆ. ನಾವು ಕನ್ನಡ ಭಾಷೆಯನ್ನು ಹೆಚ್ಚಿಗೆ ಅರ್ಥೈಸಿಕೊಳ್ಳಬೇಕು.

70-80ರ ದಶಕದಲ್ಲಿದ್ದ ಕನ್ನಡದ ಹಾಡುಗಳನ್ನು ಈಗಲೂ ಮೆಲುಕು ಹಾಕುತ್ತಿದ್ದೇವೆ. ಪರಿಶ್ರಮ ಮತ್ತು ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು. ಇನ್ನೊಬ್ಬರ ಪ್ರಶಂಸೆಗಾಗಿ ನಾವು ಬದುಕಬಾರದು. ದೀನ ದಲಿತರಿಗೆ ಆಶಾಕಿರಣ ಅಂದರೆ ಎಸ್.ಜೆ.ಎಂ. ವಿದ್ಯಾಪೀಠ ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: ಬಿಜೆಪಿಯಿಂದ ನಮ್ಮ ಭೂಮಿ ನಮ್ಮ ಹಕ್ಕು ಆಂದೋಲನ | ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಪ್ರತಿಭಾ ಸಿಂಚನ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಓದುವುದು ಯಾವುದು ಎನ್ನುವುದು ಮುಖ್ಯವಲ್ಲ. ಏನನ್ನು ಓದುತ್ತಿದ್ದೇವೆ ಎನ್ನುವುದು ಮುಖ್ಯ. ಕೀಳರಿಮೆ ಇರಬಾರದು.

ಪದವಿ ಎನ್ನುವುದು ಅರ್ಹತೆ. ಅನೇಕರು ಸರ್ಕಾರಿ ಕೆಲಸಕ್ಕೆ ಹೋಗಬೇಕೆಂದಿಲ್ಲ. ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿದೆ. ಸಂಸ್ಕಾರ ಮರೀಚಿಕೆಯಾಗಿದೆ. ಪ್ರತಿಭೆಗಳು ದೂರ ಸಾಗುತ್ತಿದ್ದಾರೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸಹ ಪೋಷಕರನ್ನು ಮರೆಯಬಾರದು.

ಇಂದು ಸಂಬಂಧಗಳು ಗಟ್ಟಿಯಾಗಿ ಉಳಿದಿಲ್ಲ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಮೊಬೈಲ್‌ಗಳಿಂದ ದೂರವಿದ್ದು ಅಧ್ಯಯನಶೀಲರಾಗಿ ಯಶಸ್ಸಿನತ್ತ ಗಮನಹರಿಸಬೇಕು.

ಕ್ಲಿಕ್ ಮಾಡಿ ಓದಿ: ಕನ್ನಡ ಉಪನ್ಯಾಸಕಿ ಗುರುಪಾದಮ್ಮಗೆ Phd ಪದವಿ

ಮೊಬೈಲ್‌ಗಿಂತ ಗ್ರಂಥಾಲಯವನ್ನು ಬಳಸಿಕೊಂಡಾಗ ಜ್ಞಾನಲಹರಿ ವಿಸ್ತಾರವಾಗುತ್ತದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಭಾವನೆ ಮೂಡಿಸಲು ಶಿಕ್ಷಕರು ಪ್ರಯತ್ನ ಮಾಡಬೇಕು. ಕನ್ನಡ ಭಾಷೆಯ ಪ್ರೌಢಿಮೆ ದೊಡ್ಡದು. ಶತಶತಮಾನಗಳ ಇತಿಹಾಸ ಕನ್ನಡದ್ದು. ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬಂಗಾರದಂಥ ಅವಕಾಶವನ್ನು ಒಳ್ಳೇ ರೀತಿಯಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಘುನಾಥರೆಡ್ಡಿ ಮಾತನಾಡಿದರು.

ವಾರ್ಷಿಕ ಸಂಚಿಕೆ ಸಂಪಾದಕರಾದ ಡಾ. ಸಿ.ಸುಧಾರಾಣಿ ಸಂಚಿಕೆ ಕುರಿತು ಮಾತನಾಡಿದರು.

ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕು. ಉಷಾ, ಕರ‍್ಯದರ್ಶಿ ಕು. ರುಚಿತಾ ಎಲ್., ಐಕ್ಯೂಎಸಿ ಸಂಚಾಲಕರಾದ ಪ್ರೊ.ಎಂ.ಎಸ್. ಪರಮೇಶ್, ಪ್ರೊ. ನಾಗರಾಜ್, ಪ್ರೊ. ಎಲ್. ರಾಜಾನಾಯ್ಕ್, ಡಾ.ಬಿ.ವೈ. ಶ್ವೇತ, ಮಿಸ್ಬಾಖಾನುಂ, ರಮ್ಯ, ಸುಜಾತ, ಟಿ.ಎಸ್. ಗಿರೀಶ್, ವಸಂತಕುಮಾರಿ, ಲೋಕೇಶ್, ರಾಘವೇಂದ್ರಉಪಸ್ಥಿತರಿದ್ದರು.

ಕ್ಲಿಕ್ ಮಾಡಿ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರುಚಿತ, ರಂಜಿತಾ ಹಾಗೂ ಜಿಲ್ಲಾ ಉತ್ತಮ ಸಮಾಜ ಸೇವಕ ಪ್ರಶಸ್ತಿಗೆ ಭಾಜನರಾದ ಟಿ.ಪರಶುರಾಮ ಅವರನ್ನು ಸನ್ಮಾನಿಸಲಾಯಿತು.

ಚಿನ್ಮಯಿ ವೀಣಾವಾದನ, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನವೀನ್ ಮಸ್ಕಲ್ ಸ್ವಾಗತಿಸಿದರು. ನಯನ ನಿರೂಪಿಸಿದರು. ಸಿ.ಎಂ. ವಿಶ್ವನಾಥ್ ವಂದಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version