ಅಬಕಾರಿ ಅಕ್ರಮ ತಡೆಗೆ ಪ್ಲೈಯಿಂಗ್‌ ಸ್ಕ್ವಾಡ್‌ | ಗಡಿ ಭಾಗದಲ್ಲಿ ಠಾಣೆ ಓಪನ್

CHITRADURGA NEWS | 18 MARCH 2024
ಚಿತ್ರದುರ್ಗ: ಸಾರ್ವತ್ರಿಕ ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ, ಸಾಗಾಣಿಕೆ, ಮಾರಾಟ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಪಟ್ಟ ಇನ್ನಿತರೆ ವಸ್ತುಗಳ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ 9 ಫ್ಲೈಯಿಂಗ್ ಸ್ಕ್ವಾಡ್‌ ತಂಡ ರಚನೆ ಮಾಡಲಾಗಿದೆ.

ಕ್ಲಿಕ್ ಮಾಡಿ ಓದಿ: https://chitradurganews.com/chitradurga-bjp-ticket-for-narayanaswamy/

ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಅಂತರಾಜ್ಯ ಗಡಿ ಪ್ರದೇಶಗಳಾದ ಹಿರಿಯೂರು ತಾಲ್ಲೂಕು ಮದ್ದಿಹಳ್ಳಿ, ಚಳ್ಳಕೆರೆ ತಾಲ್ಲೂಕಿನ ದೊಡ್ಡಬಾದಿಹಳ್ಳಿ, ಮೊಳಕಾಲ್ಮೂರು ತಾಲ್ಲೂಕಿನ ಎದ್ದಲಬೊಮ್ಮನಹಟ್ಟಿಯಲ್ಲಿ ಅಬಕಾರಿ ತನಿಖಾ ಠಾಣೆ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿದೆ ಎಂದು ಚಿತ್ರದುರ್ಗ ಅಬಕಾರಿ ಉಪ ಆಯುಕ್ತ ಬಿ.ಮಾದೇಶ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಹಾಗೂ ಹಂಚುವುದು ಕಂಡುಬಂದರೆ, ಅಬಕಾರಿ ಉಪ ಅಧೀಕ್ಷಕ ರಾಜೇಂದ್ರ ಐ ಉಗಾರ್ ದೂರವಾಣಿ ಸಂಖ್ಯೆ 9449629510, 08194-230668, ವಲಯ ಅಬಕಾರಿ ನಿರೀಕ್ಷಕ ಶೇಖ್ ಇಮ್ರಾನ್ ದೂರವಾಣಿ ಸಂಖ್ಯೆ 08194-231393, 9482088555, ಹೊಳಲ್ಕೆರೆ ವಲಯ ಅಬಕಾರಿ ನಿರೀಕ್ಷಕಿ ಹೆಚ್.ಸವಿತಾ ದೂರವಾಣಿ ಸಂಖ್ಯೆ 08191-275902, 9663527579.

ಹೊಸದುರ್ಗ ವಲಯ ಅಬಕಾರಿ ಉಪ ನಿರೀಕ್ಷಕ ಎಂ.ಭೂಪತಿ ದೂರವಾಣಿ ಸಂಖ್ಯೆ 08199-200575, 9036645736, ಹಿರಿಯೂರು ಉಪ ವಿಭಾಗ ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ ದೂರವಾಣಿ ಸಂಖ್ಯೆ 08193-271730, 9481178474, ಚಳ್ಳಕೆರೆ ವಲಯ ಅಬಕಾರಿ ನಿರೀಕ್ಷಕ ಸಿ.ನಾಗರಾಜ್ ದೂರವಾಣಿ ಸಂಖ್ಯೆ 08195-251258, 9611976385.

ಕ್ಲಿಕ್ ಮಾಡಿ ಓದಿ: https://chitradurganews.com/he-move-of-the-bjp-congress-leaders-raised-curiosity/

ಹಿರಿಯೂರು ವಲಯ ನಿರೀಕ್ಷಕಿ ಭಾರತಮ್ಮ ದೂರವಾಣಿ ಸಂಖ್ಯೆ 08193-271733, 8660075704, ಮೊಳಕಾಲ್ಮೂರು ವಲಯ ನಿರೀಕ್ಷಕ ಎಸ್.ರಮೇಶ್ ದೂರವಾಣಿ ಸಂಖ್ಯೆ 08198-229750 ಹಾಗೂ ಚಿತ್ರದುರ್ಗ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಎಂ.ಆರ್.ಸೋಮಶೇಖರ್ ಹಾಗೂ ಅಬಕಾರಿ ಉಪ ಆಯಕ್ತ ಬಿ.ಮಾದೇಶ್ ಟೋಲ್ ಫ್ರೀ ನಂಬರ್ 9663397015 ಗೆ ಸಂಪರ್ಕಿಸಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version