CHITRADURGA NEWS | 19 MARCH 2024
ಚಿತ್ರದುರ್ಗ: ಅನ್ನದಾತರು ಮನಸ್ಸು ಮಾಡಿದರೆ ಅಸಾಧ್ಯವನ್ನು ಸಾಧ್ಯವಾಗಿಸುತ್ತಾರೆ ಎಂಬುದಕ್ಕೆ ಬಯಲು ಸೀಮೆ ರೈತರ ಕಾರ್ಯ ಸ್ಪಷ್ಟ ನಿದರ್ಶನವಾಗಿದೆ. ತ್ಯಾಜ್ಯ ತುಂಬಿದ್ದ ಕಾಲುವೆಯನ್ನು ಸ್ವಚ್ಛಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಿದ್ದಾರೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ರೈತರು.
ಸತತ 11 ದಿನಗಳ ಶ್ರಮದಾನದಿಂದ ನಾರಾಯಣಪುರ ಬಲದಂಡೆ ಕಾಲುವೆಗೆ ವಾಣಿ ವಿಲಾಸ ಸಾಗರದ ನೀರು ಹರಿದಿದೆ. ಬರದ ಸಂಕಷ್ಟದಲ್ಲಿ ಕೃಷಿಕ ಸಮುದಾಯದಲ್ಲಿ ಮಂದಹಾಸ ಮೂಡಿದೆ. ಕಾಲುವೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಸುತ್ತಲಿನ ಗ್ರಾಮಗಳ ರೈತರು, ಕೂಲಿ ಕಾರ್ಮಿಕರು ಸೇರಿ ಸ್ವಚ್ಛಗೊಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: https://chitradurganews.com/he-move-of-the-bjp-congress-leaders-raised-curiosity/
ಕ್ಲಿಕ್ ಮಾಡಿ ಓದಿ: https://chitradurganews.com/chitradurga-bjp-ticket-for-narayanaswamy
ಕೂಡಲೇ ತಿಮ್ಮಣ್ಣನಾಯಕನ ಕೋಟೆ, ದೊಡ್ಡಬೀರನಹಳ್ಳಿ, ಓಬಳಾಪುರ, ಗೋಸಿಕೆರೆ, ಹೊನ್ನಯ್ಯನರೊಪ್ಪ ಸೇರಿದಂತೆ ಸುತ್ತಲಿನ ರೈತರು ಸ್ವಯಂ ಪ್ರೇರಿತವಾಗಿ ಕಾಲುವೆಗೆ ಇಳಿದು ಸ್ವಚ್ಛತಾ ಕಾರ್ಯಕ್ಕೆ ಮುನ್ನಡಿ ಬರೆದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number