ಮುಖ್ಯ ಸುದ್ದಿ
PDO SUSPEND; ಪಿಡಿಓ ಎಸ್.ಪಾಲಯ್ಯ ಅಮಾನತು | ಜಿಪಂ ಸಿಇಓ ಸೋಮಶೇಖರ್ ಆದೇಶ
CHITRADURGA NEWS | 28 JULY 2024
ಚಿತ್ರದುರ್ಗ: ಹಣ ದುರುಪಯೋಗ ಆರೋಪ ಹಿನ್ನೆಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಪಾಲಯ್ಯ ಅವರನ್ನು ಅಮಾನತು(SUSPEND)ಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಇದನ್ನೂ ಓದಿ: INTERVIEW; ನಿರುದ್ಯೋಗಿಗಳಿಗೆ GOOD NEWS | ಜುಲೈ 30ರಂದು ನೇರ ನೇಮಕಾತಿ ಸಂದರ್ಶನ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ PDO ಎಸ್.ಪಾಲಯ್ಯ ಅಮಾನತು ಆಗಿರುವ ಅಧಿಕಾರಿ.
ಗ್ರಾಮ ಪಂಚಾಯತಿಯ ಸಿಬ್ಬಂದಿ ವೇತನ ಹಾಗೂ 14& 15 ನೇ ಹಣಕಾಸು ಯೋಜನೆಯ ಹಣ ದುರುಪಯೋಗ ಆರೋಪದಡಿಯಲ್ಲಿ ಅಮಾನತುಗೊಳಿಸಲಾಗಿದೆ.
ವೆಂಕಟೇಶ್ವರ ನಗರದ ಕಿವುಡ ಮೂಗರಿಗೆ ಹಂಚಿಕೆಯಾಗಿದ್ದ ಸರ್ವೇ ನಂಬರ್ 128ರ ನಿವೇಶನ ದುರ್ಬಳಕೆ ಮಾಡಿದ್ದು, ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಹಣ ವಂಚಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: TRAINING; ಸೂರ್ಯಕಾಂತಿ ಬೆಳೆ ಚೆನ್ನಾಗಿ ಬೆಳೆಯಲು ತರಬೇತಿ
ನನ್ನಿವಾಳ ಗ್ರಾಮ ಪಂಚಾಯತಿಯ ಆಯಲ್ ಮಿಲ್ & ಕ್ರಷರ್ ವೈಯಕ್ತಿಕವಾಗಿ ಲಾಭ ಪಡೆದುಕೊಂಡು, ಅವೈಜ್ಞಾನಿಕ ಸಣ್ಣ ಮೊತ್ತದ ತೆರಿಗೆ ಸಂಗ್ರಹಿಸಿ, ಗ್ರಾಮ ಪಂಚಾಯತಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಚಳ್ಳಕೆರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಿಂದ ವರದಿ ಪಡೆದು, ನಿಯಮಾನುಸಾರ ಎನ್. ಪಾಲಯ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶದಲ್ಲಿ ತಿಳಿಸಿದ್ದಾರೆ.