Connect with us

    BREAKING NEWS ಮೂರು ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ | ಕರಡಿ ದಾಳಿಯಿಂದ ಬೆಚ್ಚಿಬಿದ್ದ ಜನತೆ

    ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ

    ಮುಖ್ಯ ಸುದ್ದಿ

    BREAKING NEWS ಮೂರು ಕರಡಿಗಳಿಂದ ವೃದ್ಧೆಯ ಮೇಲೆ ದಾಳಿ | ಕರಡಿ ದಾಳಿಯಿಂದ ಬೆಚ್ಚಿಬಿದ್ದ ಜನತೆ

    ಚಿತ್ರದುರ್ಗ ನ್ಯೂಸ್.ಕಾಂ: ಮೂರು ಕರಡಿಗಳು ಸೇರಿ ವೃದ್ಧೆಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಚಳ್ಳಕೆರೆ ತಾಲೂಕಿನಲ್ಲಿ ನಡೆದಿದೆ.

    ದೊಡ್ಡ ಉಳ್ಳಾತಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ 60 ವರ್ಷದ ಮಂಜುಳಮ್ಮ ಎಂಬುವವರ ಮೇಲೆ ಇಂದು ನಸುಕಿನಲ್ಲಿ ಮೂರು ಕರಡಿಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ.

    ಮುಂಜಾನೆಯೇ ಎದ್ದು ಜಮೀನಿನಲ್ಲಿ ಸಾಕಿರುವ ಹಸುವಿನಿಂದ ಹಾಲು ಕರೆಯಲು ವೃದ್ಧೆ ಮಂಜುಳಮ್ಮ ತೆರಳಿದ್ದಾರೆ. ಈ ವೇಳೆ ಜಮೀನಿನಲ್ಲಿದ್ದ ಕರಡಿಗಳು ಏಕಾಏಕಿ ದಾಳಿ ಮಾಡಿವೆ.

    ತಲೆ, ಕೈ, ಕಾಲು ಕಿತ್ತು ಗಾಯಗೊಳಿಸಿವೆ. ರಕ್ತದ ಮಡುವಿನಲ್ಲಿ ಬಿದ್ದು ಕಿರುಚಾಡುತ್ತಿದ್ದ ಮಂಜಮ್ಮನನ್ನು ಅವರ ಪತಿ ಯರ್ರಿಸ್ವಾಮಿ ರಕ್ಷಣೆ ಮಾಡಿದ್ದಾರೆ.

    ಇದನ್ನೂ ಓದಿ: ಮಿಂಚೇರಿಗೆ ಹೊಂಟವು ಸಾಲು ಸಾಲು ಎತ್ತಿನ ಬಂಡಿ

    ಕರಡಿಗಳಿಗೆ ಕಲ್ಲು, ದೊಣ್ಣೆಗಳಿಂದ ಹೊಡೆದು ಯರ್ರಿಸ್ವಾಮಿ ಕರಡಿಗಳನ್ನು ಓಡಿಸಿ, ಗಾಯಗೊಂಡಿದ್ದ ಪತ್ನಿ ಮಂಜಮ್ಮನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನಾ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಳುಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಮೂಡಿದೆ.
    ಕರಡಿ ದಾಳಿಗೆ ಒಳಗಾದ ಮಂಜಮ್ಮಮ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನಾ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಇಲಾಖೆ, ಪೊಲೀಸ್ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

    ಘಟನಾ ಸ್ಥಳಕ್ಕೆ ಚಳ್ಳಕೆರೆ ಅರಣ್ಯ ಇಲಾಖೆ, ಪೊಲೀಸ್ಅ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

    ಬೆಳಗ್ಗೆ 5.45ರ ಸುಮಾರಿಗೆ ಪ್ರತಿ ದಿನ ಹಾಲು ಕರೆಯಲು ಹೋಗುವಂತೆ ಜಮೀನಿಗೆ ಹೋಗಿದ್ದಾಗ ಹೊಲದಲ್ಲಿ ಕರಡಿ ದಾಳಿ ಮಾಡಿವೆ. ಕೂಗಾಟ ಕೇಳಿಸಿದ ತಂದೆ ಹಾಗೂ ಅಲ್ಲಿದ್ದ ಸ್ಥಳೀಯರು ಕೂಗಡಿ, ಕಲ್ಲು ತೂರಾಟ ಮಾಡಿದ್ದಾರೆ. ಬೆಂಕಿ ಹಚ್ಚಿ ಹಿಡಿದುಕೊಂಡಿದ್ದಾರೆ. ಇದೇ ವೇಳೆಗೆ ನಾಯಿಗಳು ಬಂದಿದ್ದು, ಕರಡಿಗಳು ಬಿಟ್ಟು ಓಡಿ ಹೋಗಿವೆ.
    | ಮಂಜುನಾಥ್, ಗಾಯಾಳು ಮಂಜುಳಮ್ಮ ಪುತ್ರ.

    *************

    ಬೆಳಗ್ಗೆ ಹಾಲು ಕರೆಯಲು ಬೆಡ್‍ಶೀಟ್ ಹೊದ್ದುಕೊಂಡು ಜಮೀನಿನ ಬಳಿಗೆ ಹೋಗುತ್ತಿದ್ದೆ ಅಷ್ಟರಲ್ಲಿ ಹೋಗುತ್ತಿದ್ದಂತೆಯೇ ಮೂರು ಕರಡಿಗಳು ಬಂದು ಮೈಮೇಲೆ ಮುಗಿಬಿದ್ದವು. ಓಡಿ ಹೋಗಲು ಸಾಧ್ಯವಾಗಲಿಲ್ಲ.
    | ಮಂಜುಳಮ್ಮ, ಕರಡಿ ದಾಳಿಗೆ ಒಳಗಾದವರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top