Connect with us

ಫೆಬ್ರವರಿ 2 ಮತ್ತು 3 ರಂದು ಸಾಣೇಹಳ್ಳಿಯಲ್ಲಿ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನ | ಚಿಕ್ಕಮಗಳೂರು-ಚಿತ್ರದುರ್ಗ ಜಿಲ್ಲೆಯ ಮೊದಲ ಸಮ್ಮೇಳನ

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮುಖ್ಯ ಸುದ್ದಿ

ಫೆಬ್ರವರಿ 2 ಮತ್ತು 3 ರಂದು ಸಾಣೇಹಳ್ಳಿಯಲ್ಲಿ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನ | ಚಿಕ್ಕಮಗಳೂರು-ಚಿತ್ರದುರ್ಗ ಜಿಲ್ಲೆಯ ಮೊದಲ ಸಮ್ಮೇಳನ

CHITRADURGA NEWS | 26 JANUARY 2024

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗ-ಚಿಕ್ಕಮಗಳೂರು ಸೇರಿ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಮಠದಲ್ಲಿ ಎರಡು ಜಿಲ್ಲೆಗಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.

ಇದನ್ನೂ ಓದಿ: ಪ್ರಪ್ರಥಮ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಶ್ರೀ

ಫೆಬ್ರವರಿ 2 ಮತ್ತು 3 ರಂದು ಸಾಣೇಹಳ್ಳಿಯಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನಕ್ಕೆ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾರ್ವಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಎರಡು ದಿನದ ಈ ಸಮ್ಮೇಳನದಲ್ಲಿ ಸುಮಾರು ಎರಡು ಜಿಲ್ಲೆಗಳಿಂದ 4 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನೀರೀಕ್ಷೆ ಇದೆ ಎಂದರು.

ಸಮ್ಮೇಳಾನಾಧ್ಯಕ್ಷ ಮೆರವಣಿಯಲ್ಲಿ ಅವರ ರಚನೆ ಮಾಡಿದ ಪುಸ್ತಕಗಳನ್ನು ಸಹಾ ಮೆರವಣಿಗೆ ಮಾಡಲಾಗುವುದು. ಇದರೊಂದಿಗೆ ಉದ್ಘಾಟನಾ ಕಾರ್ಯಕ್ರಮ, ಕವಿಗೋಷ್ಟಿ, ಪುಸ್ತಕ ಪ್ರಕಾಶನದ ಸವಾಲುಗಳು, ಮಹಿಳಾ ಗೋಷ್ಟಿ, ಸಾಂಸ್ಕøತಿಕ ಕಾರ್ಯಕ್ರಮ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ದಿವ್ಯಪ್ರಭು ಜಿ.ಆರ್.ಜೆ

ಸಮ್ಮೇಳನವನ್ನು ಕಸಾಪದ ಮಾಜಿ ಆಧ್ಯಕ್ಷರಾದ ಗೋ.ರು.ಚನ್ನಬಸಪ್ಪ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ, ಸಚಿವ ಸುಧಾಕರ್, ಶಾಸಕರಾದ ಗೋವಿಂದಪ್ಪ, ಶ್ರೀನಿವಾಸ್, ಕೆ.ಸಿ.ವಿರೇಂದ್ರ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ರಾಜುಗೌಡ, ನಯನ ಮೋಟಮ್ಮ, ರಘುಮೂರ್ತಿ, ಗೋಪಾಲಕೃಷ್ಣ, ಭಾಗವಹಿಸಲಿದ್ದಾರೆ.

ಚಿತ್ರದುರ್ಗ ಚಿಕ್ಕಮಗಳೂರು ಜಿಲ್ಲೆಗಳ ಇತಿಹಾಸ ಸಾಹಿತ್ಯ, ಮಠಗಳ ಧಾರ್ಮಿಕ ಸಾಹಿತ್ಯಕ, ಸಾಂಸ್ಕøತಿಕ ಕೂಡುಗೆ, ರಂಗಭೂಮಿ, ಜಾನಪದ ಕಲಾ ಪ್ರಕಾರಗಳ ಪ್ರದರ್ಶನ, ಸಾಂಸ್ಕøತಿಕ ರಾಜಕಾರಣ, ಮಾನವೀಯ ಸಮಾಜ ನಿರ್ಮಾಣ ವಚನ ಸಾಹಿತ್ಯ ಪುಸ್ತಕ ಸಂಸ್ಕøತಿ ಕವಿಗೋಷ್ಟಿ, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಬಹಿರಂಗ ಅಧಿವೇಶನ ಸಮಾರೋಪ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: 9 ತಿಂಗಳಲ್ಲಿ ಜಿಲ್ಲೆಗೆ ಭದ್ರಾ ನೀರು | ಸಚಿವ ಡಿ.ಸುಧಾಕರ್

ಇದೇ ಸಂದರ್ಭದಲ್ಲಿ ಸಾಹಿತ್ಯ ಸಿರಿ ಎಂಬ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಸ.ಗಿರಿಜಾಶಂಕರ್, ಶೃಂಗೇರಿಯ ಶೈಲಜಾ ರಾತ್ನಕಾರ ಹೆಗಡೆ, ಚಿತ್ರದುರ್ಗದ ಹಿರಿಯ ಪತ್ರಕರ್ತ ಸಾಹಿತಿ ಜಿ.ಎಸ್.ಉಜ್ಜನಪ್ಪ, ನಿವೃತ್ತ ಪ್ರಚಾರ್ಯರಾದ ಪ್ರೊ.ಲಿಂಗಪ್ಪ ಅವರಿಗೆ ಪ್ರಧಾನ ಮಾಡಲಾಗುವುದು.

ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ. ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯದ ವಿಶ್ರಾಂತ್ರ ಕುಲಪತಿಗಳಾದ ಡಾ.ಸಬಿಹಾ ಭೂಮಿಗೌಡ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಪ್ಪ, ಕೋಶಾಧ್ಯಕ್ಷ ಆರ್.ಮಲ್ಲಿಕಾರ್ಜನಯ್ಯ, ಶ್ರೀನಿವಾಸ ಮಳಲಿ, ಶಿವಮೂರ್ತಿ, ಧನಂಜಯ, ಪರಮೇಶ್ವರ್, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version