ಮುಖ್ಯ ಸುದ್ದಿ
ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ..!!?

CHITRADURGA NEWS | 15 MARCH 2025
ಚಿತ್ರದುರ್ಗ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂಬ ಫ್ಲೆಕ್ಸ್ ಎಲ್ಲೆಲ್ಲೂ ರಾರಾಜಿಸುತ್ತಿವೆ.
Also Read: PSI ಗಾದಿಲಿಂಗಪ್ಪ – ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೇ ಪ್ರಕರಣ | ಪಿಎಸ್ಐ ವಿರುದ್ಧ FIR ದಾಖಲಿಸಲು ಪಟ್ಟು
ಹೌದು, ನಾಳೆ ನಡೆಯಲಿರುವ ಮಧ್ಯ ಕರ್ನಾಟಕದ ಅತೀ ದೊಡ್ಡ ಜಾತ್ರೆ, ಲಕ್ಷಾಂತರ ಜನ ಸೇರುವ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಶುಭ ಕೋರುವ ಫ್ಲೆಕ್ಸ್ ಗಳಲ್ಲಿ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಮುದ್ರಿಸಲಾಗಿದೆ.
ಸತೀಶ ಜಾರಕಿಹೊಳಿಯವರ ಅಭಿಮಾನಿ ಬಳಗದಿಂದ ಈ ಫ್ಲೆಕ್ಸ್ ಅಳವಡಿಸಿದ್ದು ಅದರಲ್ಲಿ ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಎನ್ನುವ ಸಾಲುಗಳು ಚರ್ಚೆಗೆ ಗ್ರಾಸವಾಗಿವೆ.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್ ಎಷ್ಟಿದೆ?
ಜಾತ್ರೆಗೆ ಬರುವ ಯಾತ್ರಿಗಳಿಗೆ ಉಚಿತ ಮಜ್ಜಿಗೆ ಹಂಚುವುದರ ಜೊತೆಗೆ ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಚಿತ್ರ ಹೊಂದಿದ ಟೀ ಶರ್ಟ್ ಧರಿಸಿ ಭಾವಚಿತ್ರವನ್ನು ಪ್ರದರ್ಶಿಸುವುದು ವಿಶೇಷವಾಗಿದೆ.
