ಮುಖ್ಯ ಸುದ್ದಿ
ಇಂದಿನಿಂದ ಹೊಸ ವರ್ಷ | ಯುಗಾದಿಯಿಂದ ಹೊಸ ಮನ್ವಂತರ
CHITRADURGA NEWS | 10 APRIL 2024
ಚಿತ್ರದುರ್ಗ: ಯುಗಾದಿಯು ಹಿಂದೂಗಳ ಹೊಸ ವರ್ಷದ ಹಬ್ಬ ಆಗಿದೆ. ಯುಗಾದಿ ಹಬ್ಬವು ನಿನ್ನೆ, ಮೊನ್ನೆಯಿಂದ ಆಚರಿಸಿಕೊಂಡು ಬಂದ ಹಬ್ಬವಲ್ಲ. ಬದಲಾಗಿ ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದ ಹಬ್ಬವಾಗಿದೆ. ಯುಗಾದಿಯು ಕೇವಲ ಹಬ್ಬದ ದಿನವಲ್ಲ. ಬದಲಾಗಿ, ಇದೊಂದು ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ದಿನವಾಗಿದೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಚಿತ್ರದುರ್ಗಕ್ಕೆ ಈ ಬಾರಿ ಎಷ್ಟನೇ ಸ್ಥಾನ ಗೋತ್ತಾ
ಭಾರತದಲ್ಲಿ ಅನೇಕ ಕಡೆ ಈ ಹಬ್ಬವನು ಆಚರಿಸಲಾಗುತ್ತದೆ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಚರಿಸುವ ಮುನ್ನವೇ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು, ಹೊಸ ಬಟ್ಟೆಗಳನ್ನು ಧರಿಸಲು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕರಿಸಲು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹೊಸ ವರ್ಷವನ್ನು ಹೊಸ ದೃಷ್ಟಿಕೋನ ಮತ್ತು ನವೀಕೃತ ಉತ್ಸಾಹದಿಂದ ಪ್ರಾರಂಭಿಸುವ ಆಲೋಚನೆಯನ್ನು ಹೊಂದಿರುತ್ತಾರೆ.
ವಿಶೇಷವಾಗಿ ಕರ್ನಾಟಕದಲ್ಲಿ ಯಾವ ರೀತಿಯಲ್ಲಿ ಆಚರಿಸಲಾಗುತ್ತದೆ: ಯುಗಾದಿ ಎಂದರೆ ಕರ್ನಾಟಕ ಜನರಿಗೆ ವಿಶೇಷವಾದ ದಿನ ಈ ದಿನವನ್ನು ಹೊಸ ವರ್ಷ ದಿನವನ್ನಾಗಿ ಯುಗಾದಿ ಹಬ್ಬವನ್ನು ಸಂಭ್ರಮಿಸುತ್ತಾರೆ.
ಯುಗಾದಿ ಹಬ್ಬಕ್ಕೆ ತಯಾರಿ : ಯುಗಾದಿ ಹಬ್ಬಕ್ಕೆ ಜನರು ಒಂದು ತಿಂಗಳ ಮುಂಚೆಯೇ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ, ಒಂದು ತಿಂಗಳ ಮುಂಚಿತವಾಗಿ ಮನೆಗಳನ್ನು ಬಣ್ಣ ಬಳೆದು ಹೊಸ ಮನೆ ರೂಪಕ್ಕೆ ತರುತ್ತಾರೆ, ನಂತರ ಚಂಡಿಗೆ, ಚಕ್ಲಿ, ಹಪ್ಲ, ತಯಾರಿಸಿ ಕೊಳ್ಳುತ್ತಾರೆ, ಮನೆಯಲ್ಲಿ ಇರುವಂತಹ ಮನೆ ಮಂದಿಗೆಲ್ಲ ಬಟ್ಟೆಗಳನ್ನು ತರುತ್ತಾರೆ.
ಇದನ್ನೂ ಓದಿ: ಮನೆಯಿಂದಲೇ ಮತದಾನಕ್ಕೆ ಡೇಟ್ ಫಿಕ್ಸ್
4 ದಿನಗಳ ಕಾಲ ವಿಶೇಷವಾಗಿ ನಡೆಯುವ ಹಬ್ಬ : ಮೊದಲನೇ ದಿನ ಮನೆ ಮುಂದೆ ಎಲ್ಲಾ ಮಾವಿನಸೊಪ್ಪು, ಬೇವಿನಸೊಪ್ಪು ಇಡುತ್ತಾರೆ. ಪಾಯಸ, ಪಲ್ಯ, ಚಂಡಿಗೆ, ಹಪ್ಲ, ಬೇವು ಬೆಲ್ಲ ತಯಾರಿಸಿಕೊಂಡು ನಂತರ ಸಂಜೆ ವೇಳೆ ಈ ಹಬ್ಬದಲ್ಲಿ ಹಿರಿಯ ಪೂಜೆ ಮಾಡುತ್ತಾರೆ.
ಎರಡನೇ ದಿನ ಮನೆ ಮಂದಿ ಎಲ್ಲಾ ಮೈಹಿಗೆ ಎಣ್ಣೆ ಅಚ್ಚಿಕೊಂಡು ಹೊಸ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ, ಯುವಕರು ಎಣ್ಣೆ ಅಚ್ಚಿಕೊಂಡು ಬೈಕ್ನಲ್ಲಿ ಊರಿನ ಸುತ್ತ ಒಂದು ಎರೆಡು ರೌಂಡ್ ಸುತ್ತಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಇನ್ನೂ ಹಿರಿಯರು ವರ್ಷಕ್ಕೆ ಒಂದೇ ಹಬ್ಬ ಅಂದುಕೊಂಡು ಇಸ್ಪೀಟ್, ಹೆಡ್ ಗಳನ್ನು ಹಾಡಿ ಹಬ್ಬವನ್ನು ಸಂಭ್ರಮಿಸುತ್ತಾರೆ
ಮೂರನೇ ದಿನ ವಿಷೇಶವಾದ ದಿನವಾಗಿರುತ್ತದೆ ಈ ದಿನದಲ್ಲಿ ಹೋಳಿಗೆಯನ್ನು ತಯಾರಿಸಿ ತಮ್ಮ ತಮ್ಮ ದೇವರುಗಳಿಗೆ ಹೋಗಿ ಪೂಜೆ ಸಲ್ಲಿಸಿ ಸಂಜೆ ಚಂದ್ರಿರನ ದರ್ಶನ ಪಡೆದು ಹಬ್ಬವನ್ನು ಆಚರಿಸುತ್ತಾರೆ.
ನಾಲ್ಕನೇ ದಿನ ಹೋಳಿ ಆಟ ಅಥವಾ ನೀರಿನಾಟವನ್ನು ಆಡುತ್ತಾರೆ, ಹಬ್ಬಕ್ಕೆ ಬಂದಂತಹ ಮಾವ, ಅಳಿಯ, ಅತ್ತೆ, ಅವರುಗಳಿಗೆ ನೀರನ್ನು ಹಾಕುವುದು ಹಾಗೂ ಯುವಕ -ಯುವತಿಯರು ತಮ್ಮ ಸಂಬಂಧಿಕರಿಗೆ ನೀರುನ್ನು ಉಗ್ಗೂವುದರ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಇದನ್ನೂ ಓದಿ: ಲಾರಿಗೆ ಖಾಸಗಿ ಬಸ್ ಡಿಕ್ಕಿ | 28 ಜನ ಜಿಲ್ಲಾಸ್ಪತ್ರೆಗೆ ದಾಖಲು
ಯುಗಾದಿ ಹಬ್ಬದಂದ್ದು ಹಿರಿಯ ಪೂಜೆ: ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾಗಿ ದೀಪಾವಳಿ ಹಾಗೂ ಯುಗಾದಿ ಹಬ್ಬದಂದು ಹಿರಿಯರ ಪೂಜೆಯನ್ನು ಮಾಡುತ್ತಾರೆ. ಹಿರಿಯರನ್ನು ಗೌರವಿಸುವ ಸಲುವಾಗಿ ಯುಗಾದಿ ಹಬ್ಬದ ಮೊದಲನೇ ದಿನದಂದು ಎರಡು ಕುಂಭಗಳನ್ನು ಇಟ್ಟು, ಅದಕ್ಕೆ ಅಜ್ಜ ಅಜ್ಜಿ ಎಂದು ನಾಮಕರಣ ಮಾಡಿ, ಅವುಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ, ಅವರ ಮುಂದೆ ತಾವು ಮಾಡಿದಂತಹ ಅಡುಗೆ, ಹಣ್ಣು ಹಂಪಲುಇಟ್ಟು ಅವರು ಸ್ವೀಕರಿಸಲಿ ಎಂದು ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡುವುದರಿಂದ ತಮಗೆ ಹಿರಿಯರಿಂದ ಆರ್ಶಿವಾದ ಸಿಗುತ್ತೆ ಹಾಗೂ ಮುಂದಿನ ದಿನಗಳಲ್ಲಿ ಅವರು ನಮ್ಮನ್ನು ಕಾಪಾಡುತ್ತಾರೆ ಎಂಬ ಮನೋಭಾವದಿಂದ ಪೂಜೆ ಸಲ್ಲಿಸುತ್ತಾರೆ.
ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಬದಲಾವಣೆ: ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಬದಲಾವಣೆಯನ್ನು ಕಾಣಬಹುದು, ಗಿಡ ಮರಗಳು ಹಚ್ಚಹಸಿರಿನಿಂದ ಕೂಡಿರುವುದು, ಮೋಡ ಕವಿದ ವಾತಾವರಣ ಸೃಷ್ಟಿಯಾಗುವಂತದ್ದು, ಚಂದ್ರ ಸೂರ್ಯನಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.
ಬೇವು ಬೆಲ್ಲದ ವಿಶೇಷತೆ: ಬೇವಿನ ಎಲೆ ದುಃಖ, ನೋವನ್ನು ಸೂಚಿಸುತ್ತದೆ, ಯುಗಾದಿ ಎನ್ನುವ ಹಬ್ಬದ ಸಂಕೇತವೇ ಬೇವು-ಬೆಲ್ಲ. ಪವಿತ್ರ ಅರ್ಥ ಹಾಗೂ ಆಚರಣೆಯನ್ನು ಹೊಂದಿರುವ ಈ ಹಬ್ಬದಲ್ಲಿ ಬೇವು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಅತ್ಯಂತ ಆರೋಗ್ಯಕರ ಔಷಧೀಯ ಸಸ್ಯ. ಇದರ ಎಲೆಗಳು ಅನೇಕ ರೋಗಗಳನ್ನು ದೂರ ಇರಿಸುತ್ತದೆ. ಧಾರ್ಮಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಅದ್ಭುತ ಮಾಹಿತಿಯನ್ನು ನೀಡುವುದು. ಮನುಷ್ಯನ ಜೀವನ ಕೇವಲ ಸಂತೋಷದ ಸವಾರಿಯಿಂದ ಕೂಡಿರುವುದಿಲ್ಲ. ದುಃಖ ಹಾಗೂ ನೋವು ಎನ್ನುವುದು ಬೆಸೆದು ಕೊಡಿರುತ್ತದೆ. ಹಾಗಾಗಿ ವ್ಯಕ್ತಿ ತನ್ನ ಸುತ್ತಲಲ್ಲಿ ಇರುವ ನೋವು ಹಾಗೂ ಕಷ್ಟವನ್ನು ಸರಿಯಾಗಿ ಸ್ವೀಕರಿಸಬೇಕು. ಜೀವನದ ಕಹಿಯನ್ನು ಒಪ್ಪಿಕೊಳ್ಳಬೇಕು. ಆಗಲೇ ಅಹಂಕಾರವನ್ನು ಮೆಟ್ಟಿ ನಿಲ್ಲಲು ಸಾಧ್ಯ. ಜೊತೆಗೆ ಜೀವನದ ಪರಿಪೂರ್ಣತೆಯನ್ನು ತಿಳಿದುಕೊಳ್ಳಬಹುದು ಎನ್ನುವ ಭಾವನೆಯನ್ನು ಸೂಚಿಸುತ್ತದೆ.
ಇದನ್ನೂ ಓದಿ: ಯುಗಾದಿಯಲ್ಲಿ 4 ರಾಶಿಗೆ ರಾಜಯೋಗ
ಬೆಲ್ಲ: ಬೆಲ್ಲದ ಸಾಮಾನ್ಯವಾದ ಗುಣ ಹಾಗೂ ಎಲ್ಲರಿಗೂ ಇಷ್ಟವಾಗುವ ಸಂಗತಿ ಸಿಹಿ. ಬೆಲ್ಲದ ಸಿಹಿಯು ಸಂತೋಷ ಅಥವಾ ಆನಂದದ ಭಾವನೆಯನ್ನು ಸೂಚಿಸುವುದು. ಮನುಷ್ಯ ತನ್ನ ಜೀವನದಲ್ಲಿ ಸಿಹಿಯನ್ನು ಪಡೆದುಕೊಳ್ಳಲು ಅಥವಾ ಸಂತೋಷವನ್ನು ಅನುಭವಿಸಲು ಸಾಕಷ್ಟು ಪ್ರಯತ್ನ ಹಾಗೂ ಶ್ರಮವನ್ನು ವಹಿಸುತ್ತಾನೆ. ಯುಗಾದಿ ಹಬ್ಬವು ಸಹ ಬೆಲ್ಲವನ್ನು ನೀಡುವ ಸಂದೇಶವನ್ನು ಸಾರುವುದು. ಜೀವನದಲ್ಲಿ ಹೊಸತನದ ಬದಲಾವಣೆಯನ್ನು ತಂದುಕೊಳ್ಳುವುದರ ಮೂಲಕ ಆನಂದವನ್ನು ಅನುಭವಿಸಲಿ ಎನ್ನುವ ಧಾರ್ಮಿಕ ಒಳಾರ್ಥ ಹಾಗೂ ಭಾವನೆಯನ್ನು ಸೂಚಿಸುವುದು. ಜೀವನದಲ್ಲಿ ಬರುವ ಎಲ್ಲಾ ಸಂಗತಿಗಳನ್ನು ಬೆಲ್ಲದ ರೀತಿಯಲ್ಲಿಯೇ ಸ್ವೀಕರಿಸಿ ಅನುವಿಸಬೇಕು ಎನ್ನುವ ಅರ್ಥವನ್ನು ನೀಡುವುದು.
ಎಲ್ಲರಿಗೂ ಯುಗಾದಿ ಹಬ್ಬವು ಹೊಸತನ ಹೊಸ ಹರುಷ ತರಲಿ, ಜೀವನದಲ್ಲಿ ಸುಖ ದುಃಖ ಎರಡು ಇದ್ದರೆ, ಮುಂದೆ ಬರಲು ಸಾಧ್ಯ, ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.