ಮುಖ್ಯ ಸುದ್ದಿ
ಕೋಟೆನಾಡಲ್ಲಿ ಹೊಸ ವರ್ಷೋತ್ಸವ | ಸಂಭ್ರಮಿಸಿದ ಜನತೆ
ಚಿತ್ರದುರ್ಗ ನ್ಯೂಸ್. ಕಾಂ: ಕೋಟೆನಾಡು ಚಿತ್ರದುರ್ಗದಲ್ಲಿ 2024 ನೂತನ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ನಗರದ ಹಲವು ಖಾಸಗಿ ಜಾಗಗಳ, ಹೋಟೆಲ್, ಡಾಬಾ, ತೋಟದ ಮನೆಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಹೊಸ ವರ್ಷಾಷರಣೆ ಮಾಡಲಾಯಿತು.
ನಗರದ ಐಶ್ವರ್ಯಾ ಫೋರ್ಟ್ ಹೋಟೆಲ್ ನಲ್ಲಿ ಹಲವು ಕುಟುಂಬಗಳು ಸೇರಿ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.
ಇದನ್ನೂ ಓದಿ: ಹೊಸ ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ
ನೂತನ ವರ್ಷ ಸಂಭ್ರಮದಿಂದ ಕೂಡಿರಲಿ. ಬದುಕು ಸಿಹಿಯಾಗಿರಲಿ ಎಂದು ಆಶಿಸಿದರು.
ಇನ್ನೂ ನಗರದ ಮುಖ್ಯ ರಸ್ತೆಗಳಲ್ಲಿ ಯುವಕರು ಬೈಕ್ ಗಳಲ್ಲಿ ರೌಂಡ್ಸ್ ಹಾಕಿದರು.
ಐಶ್ವರ್ಯ ಫೋರ್ಟ್ ನಲ್ಲಿ ಹೊಸ ವರ್ಷಾಚರಣೆ
ಹೊಸ ವರ್ಷದ ಅಂಗವಾಗಿ ನಗರದ ಎಲ್ಲ ಬೇಕರಿಗಳಲ್ಲಿ ಚಿತ್ತಾಕರ್ಷಕ, ಬಾಯಲ್ಲಿ ನೀರೂರಿಸುವ ಕೇಕ್ ತಯಾರಿಸಿ ಮಾರಾಟ ಮಾಡಲಾಯಿತು.
ಐಶ್ವರ್ಯ ಫೋರ್ಟ್ ನಲ್ಲಿ ನಡೆದ ಹೊಸ ವರ್ಷಾಚರಣೆ ವೇಳೆ ನ್ಯಾಯವಾದಿ ಉಮೇಶ್, ನಗರಸಭೆ ಸದಸ್ಯೆ ಮೀನಾಕ್ಷಿ ಸೇರಿದಂತೆ ಹಲವು ಕುಟುಂಬಗಳ ಭಾಗವಹಿಸಿದ್ದವು.
ಹತ್ತು-ಹದಿನೈದು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಹೊಸ ವರ್ಷಾಚರಣೆ ಜೋರಾಗಿರುತ್ತಿತ್ತು. ಬೆಳಗಿನ ಜಾವ ಮೂರು ಗಂಟೆವರೆಗೆ ಊಟ ಕೊಟ್ಟಿದ್ದೇವೆ. ಆದರೆ, ಇತ್ತೀಚಗೆ ಚಿಕ್ಕಮಗಳೂರು ರೆಸಾರ್ಟ್, ಹೋಂ ಸ್ಟೇ, ಬೆಂಗಳೂರು, ಗೋವಾ ಕಡೆಗೆ ತೆರಳಿ ಹೊಸ ವರ್ಷ ಸಂಭ್ರಮಿಸುವ ಪರಿಪಾಠ ಬೆಳೆದಿದೆ.
| ಅರುಣ್ ಕುಮಾರ್, ಐಶ್ವರ್ಯ ಫೋರ್ಟ್ ಮಾಲಿಕರು.
ಹಿಂದುಗಳಿಗೆ ಯುಗಾದಿ ಹೊಸ ವರ್ಷವಾದರೂ, ಈ ಸಂದರ್ಭದಲ್ಲಿ ಕುಟುಂಬಗಳು ಒಂದೆಡೆ ಸೇರಿ ಸಂಭ್ರಮಿಸುವುದು ಒಳ್ಳೆಯ ಬೆಳವಣಿಗೆ. ಈ ವರ್ಷ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ಆಶಯದೊಂದಿಗೆ ಹೊಸ ವರ್ಷ ಸ್ವಾಗತಿಸಿದ್ದೇವೆ.
| ವಿಷ್ಣು, ಗುರುರಾಜ ಫರ್ನಿಚರ್ಸ್ ಮಾಲಿಕರು.