Connect with us

    ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯಕ್ರಮ | ಶೀಘ್ರ ಪಠ್ಯಪುಸ್ತಕ ಬಿಡುಗಡೆ

    ಮುಖ್ಯ ಸುದ್ದಿ

    ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯಕ್ರಮ | ಶೀಘ್ರ ಪಠ್ಯಪುಸ್ತಕ ಬಿಡುಗಡೆ

    CHITRADURGA NEWS | 24 MARCH 2024
    ಚಿತ್ರದುರ್ಗ: ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 3ರಿಂದ 6ನೇ ತರಗತಿಯವರೆಗೆ ಹೊಸ ಪಠ್ಯಕ್ರಮವನ್ನು ಪ್ರಕಟಿಸಲಿದೆ.

    2024–25ನೇ ಶೈಕ್ಷಣಿಕ ಸಾಲಿನ ಏಪ್ರಿಲ್‌1ರಿಂದಲೇ ಹೊಸ ಪಠ್ಯಕ್ರಮ ಜಾರಿಯಾಗಲಿದೆ. ಉಳಿದ ತರಗತಿಗಳಿಗೆ ಬದಲಾವಣೆಯಿರುವುದಿಲ್ಲ. ಹೊಸ ಪಠ್ಯಕ್ರಮದ ಪುಸ್ತಕಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಎನ್‌ಸಿಇಆರ್‌ಟಿಯು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ತಿಳಿಸಿದೆ ಎಂದು ಸಿಬಿಎಸ್‌ಇ ಯು ತನ್ನ ಅಧೀನದಲ್ಲಿ ಬರುವ ಶಾಲೆಗಳಿಗೆ ಮಾಹಿತಿ ನೀಡಿದೆ.

    ಕ್ಲಿಕ್ ಮಾಡಿ ಓದಿ: ಗೂಡ್ಸ್‌ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ | ಸ್ಥಳದಲ್ಲೇ ವಾಹನ ಚಾಲಕ ಮೃತ

    18 ವರ್ಷದ ನಂತರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನ (ಎನ್‌ಸಿಎಫ್‌) ಪರಿಷ್ಕರಣೆ ನಡೆಸುವಂತೆ ಶಿಕ್ಷಣ ಸಚಿವಾಲಯವು ಕಳೆದ ವರ್ಷ ಸೂಚಿಸಿತ್ತು. 1975, 1988, 2000 ಹಾಗೂ 2005ರಲ್ಲಿ ಪರಿಷ್ಕರಣೆ ನಡೆದಿತ್ತು. ಹಿಂದಿನ ವರ್ಷ ಪಠ್ಯದಿಂದ ಮೊಘಲ್ ಸಾಮ್ರಾಜ್ಯ, ಮೊಘಲ್‌ ನ್ಯಾಯಾಲಯ, 2022ರ ಗುಜ ರಾತ್ ಗಲಭೆ, ಶೀತರ ಸಮರಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಡಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು. ವಿರೋಧ ಪಕ್ಷಗಳಿಂದ ‘ಇತಿಹಾಸ ಅಳಿಸುವ’ ಪ್ರಕ್ರಿಯೆ ಎಂಬ ಟೀಕೆಯೂ ವ್ಯಕ್ತವಾಗಿತ್ತು.

    ಕ್ಲಿಕ್ ಮಾಡಿ ಓದಿ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ | ಒಳಮಠ, ಹೊರಮಠದಲ್ಲಿ ವಿಶೇಷ ಪೂಜೆ

    ಇದೀಗ ಎನ್‌ಸಿಇಆರ್‌ಟಿ ಪ್ರಕಟಿಸುವ ಹೊಸ ಪಠ್ಯಕ್ರಮವನ್ನೇ ಶಾಲೆಗಳಲ್ಲಿ ಬೋಧಿಸಿ ಎಂದು ಸಿಬಿಎಸ್‌ಇಯ ನಿರ್ದೇಶಕ (ಅಕಾಡೆಮಿಕ್ಸ್‌) ಜೋಸೆಫ್‌ ಇಮ್ಯಾನುಯೆಲ್‌ ಸೂಚಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top