ಮುಖ್ಯ ಸುದ್ದಿ
KVK: ಸಹ್ಯಾದ್ರಿ ದುರ್ಗ | ಬಯಲು ಸೀಮೆಯ ಹೊಸ ಶೇಂಗಾ ತಳಿ ಸಂಶೋಧನೆ | ಬಬ್ಬೂರು ಕೃಷಿ ವಿಜ್ಞಾನಿಗಳ ಸಾಧನೆ
CHITRADURGA NEWS | 16 NOVEMBER 2024
ಚಿತ್ರದುರ್ಗ: ಶೇಂಗಾ ಬೆಳೆಗೆ ಹೆಸರಾಗಿರುವ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವ ಶೇಂಗಾ ತಳಿ ಕಂಡು ಹಿಡಿಯಲಾಗಿದೆ.
ಇಂದು ಬಬ್ಬೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಸಹ್ಯಾದ್ರಿ ದುರ್ಗ ಹೆಸರಿನ ಚಿತ್ರದುರ್ಗ ಮೂಲದ ಹೊಸ ಶೇಂಗಾ ತಳಿ ಅನಾವರಣಗೊಳ್ಳಲಿದೆ.
ಇದನ್ನೂ ಓದಿ: ವಿವಿ ಸಾಗರ ಭರ್ತಿಗೆ 1.20 ಟಿಎಂಸಿ ನೀರಿನ ಅಗತ್ಯ
ಹಿರಿಯೂರಿನ ಹೊರವಲಯದಲ್ಲಿರುವ ಬಬ್ಬೂರು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ (KVK) ಇದೇ ಮೊದಲ ಬಾರಿಗೆ ಇಂಥದ್ದೊಂದು ವಿನೂತನ ಪ್ರಯೋಗ ನಡೆದಿದ್ದು, ಸಂಶೋಧನಾ ಕೇಂದ್ರದ 107 ವರ್ಷಗಳ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು ಎಂದು ಬಣ್ಣಿಲಸಲಾಗಿದೆ.
ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು, ಚಿತ್ರದುರ್ಗ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಶೇಂಗಾ ಬೆಳೆಯುವ ರೈತರಿದ್ದಾರೆ. ಹೊಸದುರ್ಗ, ಹೊಳಲ್ಕೆರೆ ಭಾಗದಲ್ಲೂ ಸಾಂಪ್ರದಾಯಿಕ ಶೇಂಗಾ ಬೆಳೆಗಾರರಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 15 | ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ಇಷ್ಟು ದಿನ ಬೇರೆ ಬೇರೆ ತಳಿಯ ಶೇಂಗಾ ಬಿತ್ತನೆ ಮಾಡಿ ಸಾಕಷ್ಟು ಸಲ ರೈತರು ಕೈ ಸುಟ್ಟುಕೊಂಡಿದ್ದರು. ಆದರೆ, ಸ್ಥಳೀಯ ಹವಾಗುಣಕ್ಕೆ ಹೊಂದಿಕೊಳ್ಳುವ ಸಹ್ಯಾದ್ರಿ ದುರ್ಗ ತಳಿಯಿಂದಾಗಿ ಜಿಲ್ಲೆಯ ರೈತರಲ್ಲಿ ಹೊಸ ಆಶಾಭಾವನೆ ಮೂಡಿದಂತಾಗಲಿದೆ.
ಹೇಗಿದೆ ಸಹ್ಯಾದ್ರಿ ದುರ್ಗ ಶೇಂಗಾ ತಳಿ:
ಈವರೆಗೆ ಜಿಲ್ಲೆಯ ರೈತರು ಹೆಚ್ಚು ಬೆಳೆಯುತ್ತಿದ್ದ ಟಿಎಂವಿ-2 ಹಾಗೂ ಕೆ-6 ತಳಿಗಳ ಹೋಲಿಕೆ ಇರುವ ಕೆಂಪಾದ ಮತ್ತು ದುಂಡನೆಯ ಕಾಳುಗಳಿರುವ ತಳಿ ಅಭಿವೃದ್ಧಿಪಡಿಸಿ ಸಹ್ಯಾದ್ರಿ ದುರ್ಗ ಎಂದು ನಾಮಕರಣ ಮಾಡಲಾಗಿದೆ.
ಇದನ್ನೂ ಓದಿ: ಎಚ್.ಡಿ.ಪುರ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ | ಮಾಜಿ ಸಚಿವ ಆಂಜನೇಯ ಭಾಗೀ
ಇದರಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುವುದಿಲ್ಲ. ಇದರಿಂದ ತಯಾರಾದ ಎಣ್ಣೆಯನ್ನು ಹೆಚ್ಚು ದಿನ ಸಂಗ್ರಹಿಸಿಟ್ಟರೂ ವಾಸನೆ ಬರುವುದಿಲ್ಲ. ತಿನ್ನಲೂ ಸಹ ಈ ಶೇಂಗಾ ತಳಿ ರುಚಿಯಾಗಿದೆ ಎಂದು ತಳಿ ವಿಜ್ಞಾನಿ ಡಾ.ಹರೀಶ್ ಬಾಬು ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲ ಪರೀಕ್ಷೆಗಳಲ್ಲೂ ಪಾಸ್:
ಇನ್ನೂ ಸಹ್ಯಾದ್ರಿ ದುರ್ಗ ಶೇಂಗಾ ತಳಿ ಅಕ್ಟೋಬರ್ 22 ರಂದು ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ತಳಿ ಅನುಮೋದನೆ ಸಮಿತಿಯ ಒಪ್ಪಿಗೆ ದೊರೆತಿದೆ.
ಗುಜರಾತ್‍ನ ಜುನಾಗಡದಲ್ಲಿರುವ ರಾಷ್ಟ್ರೀಯ ಶೇಂಗಾ ಅಭಿವೃದ್ಧಿ ಸಂಶೋಧನಾ ನಿರ್ದೇಶನಾಲಯ ನಡೆಸಿರುವ ಪರೀಕ್ಷೆಯಲ್ಲೂ ಸಹ್ಯಾದ್ರಿ ದುರ್ಗ ಪಾಸ್ ಆಗಿದೆ.