ಮೊಳಕಾಳ್ಮೂರು
Flooded: ಪೊಲೀಸ್ ಠಾಣೆಯನ್ನೇ ವಶಕ್ಕೆ ಪಡೆದ ಮಳೆರಾಯ..!
CHITRADURGA NEWS | 19 OCTOBER 2024
ಚಿತ್ರದುರ್ಗ: ರಾತ್ರಿಯಾದರೆ ಸಾಕು ಅಬ್ಬರಿಸಿ ಬೊಬ್ಬಿರಿಯುವ ಮಳೆರಾಯ, ಕತ್ತಲೆಯಲ್ಲಿ ಎಲ್ಲೆಲ್ಲಿ ಏನೇನು ಅವಾಂತರ ಮಾಡುತ್ತಾನೆ ಎನ್ನುವುದು ಗೊತ್ತಾಗುವುದು ಬೆಳಕು ಹರಿದ ಮೇಲೆಯೇ…!
ಶುಕ್ರವಾರ ರಾತ್ರಿ ಕೂಡಾ ಕತ್ತಲೆಯನ್ನು ಮೈಮೇಲೆ ಎಳೆದುಕೊಂಡು ಬಂದ ಮಳೆರಾಯನಿಗೆ ಕೆರೆ ಯಾವುದು, ಕಟ್ಟೆ ಯಾವುದು, ಹಳ್ಳ ಯಾವುದು, ಶಾಲೆ ಯಾವುದು ಎನ್ನುವ ವ್ಯತ್ಯಾಸವೇ ಗೊತ್ತಾದಂತಿಲ್ಲ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅ.20 ರಂದು ವಿದ್ಯುತ್ ವ್ಯತ್ಯಯ
ಇದೆಲ್ಲಾ ಒಂದು ಕಡೆಗಿರಲಿ, ಪೊಲೀಸ್ ಠಾಣೆ ಎಂಬ ಸಣ್ಣ ಹಿಂಜರಿಕೆಯೂ ಇಲ್ಲದೆ ನುಗ್ಗಿ ಅವಾಂತರ ಸೃಷ್ಟಿಸಿ ಪೊಲೀಸರಿಗೆ ಇಡೀ ದಿನ ಕೆಲಸ ಕೊಟ್ಟಿದ್ದಾನೆ ಈ ಪುಣ್ಯಾತ್ಮ.
ಸಾಕಲ್ಲ ಮಳೆಯ ಬಗ್ಗೆ ಮಾಡಿದ ವರ್ಣನೆ. ಹೌದು, ಶುಕ್ರವಾರ ರಾತ್ರಿ ಭರ್ಜರಿಯಾಗಿ (Flooded) ಮಳೆ ಸುರಿದಿದ್ದು, ಜಿಲ್ಲೆಯ ರೈತರಿಗೆ ಸಂತಸ, ಸಂಕಟ ಎಲ್ಲವನ್ನೂ ತಂದಿಟ್ಟಿದ್ದಾನೆ.
ಇದನ್ನೂ ಓದಿ: ನಾಳೆ ಚಿತ್ರದುರ್ಗದಲ್ಲಿ ಆರೆಸ್ಸೆಸ್ಸ್ ಪಥಸಂಚಲನ
ಕಳೆದ ವರ್ಷದ ಬರದ ನೆನಪೇ ಇಲ್ಲದಷ್ಟು ಮಳೆಯಾಗಿದ್ದು, ರಾತ್ರಿ ಸುರಿದ ಮಳೆಯಿಂದ ನಾಯಕನಹಟ್ಟಿ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತವಾಗಿದೆ.
ಪೊಲೀಸ್ ಠಾಣೆಯಲ್ಲಿನ ಲಾಕಪ್, ಪಿಎಸ್‍ಐ ಕೊಠಡಿ, ಕಂಪ್ಯೂಟರ್ ಕೊಠಡಿಗೆ ನೀರು ನುಗ್ಗಿದ್ದು ಅನೇಕ ವಸ್ತುಗಳು ಹಾಳಾಗಿವೆ.
ಶನಿವಾರ ಇಡೀ ದಿನ ಪೊಲೀಸರು ನೀರು ಹೊರಗೆ ಹಾಕಿ, ಕೆಸರನ್ನು ಸ್ವಚ್ಛಗೊಳಿಸುವುದರಲ್ಲಿ ಹೈರಾಣಾಗಿದ್ದಾರೆ.
ಇದನ್ನೂ ಓದಿ: ತಡರಾತ್ರಿ ಭಾರೀ ಮಳೆ | ತುಂಬಿ ಹರಿದ ಕೆರೆ, ಕಟ್ಟೆ | ತಳುಕು ಶಾಲೆ ಜಲಾವೃತ