ಮುಖ್ಯ ಸುದ್ದಿ
Police; ತಡರಾತ್ರಿ ಪೊಲೀಸರ ಆಪರೇಷನ್ ಹೇಗಿತ್ತು | ಕಳ್ಳರನ್ನು ಚೇಸಿಂಗ್ ಮಾಡಿದ್ದೇಗೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ
CHITRADURGA NEWS | 21 JULY 2024
ಚಿತ್ರದುರ್ಗ: ಶನಿವಾರ ತಡರಾತ್ರಿ 1 ಗಂಟೆ ವೇಳೆಗೆ 6-8 ಜನರ ಗ್ಯಾಂಗ್ ಪೊಲೀಸರ ಮೇಲೆ ಕಲ್ಲು ತೂರಿ ತಪ್ಪಿಸಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ನಾಯಕನಹಟ್ಟಿ ಪೊಲೀಸರು ನೈಟ್ ಬೀಟ್ ಮಾಡುತ್ತಿದ್ದಾಗ 6-8 ಜನರ ಗ್ಯಾಂಗ್ ಬೊಲೆರೋ ಪಿಕಪ್‍ನಲ್ಲಿ ಅನುಮಾನಸ್ಪದವಾಗಿ ಓಡಾಡುವುದನ್ನು ಗಮನಿಸಿದ್ದಾರೆ.
ಇದನ್ನೂ ಓದಿ: ಕಲ್ಲು ತೂರಿದ ಕಳ್ಳರ ಗ್ಯಾಂಗ್ | ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು | ಸ್ಥಳಕ್ಕೆ SP ಭೇಟಿ
ತಕ್ಷಣ ರಾತ್ರಿ ಗಸ್ತಿನಲ್ಲಿದ್ದ ನಾಯಕನಹಟ್ಟಿ ಪೊಲೀಸ್ ಠಾಣೆ ಸಿಬ್ಬಂದಿಗಳು ಶ್ರೀಹರಿ ಹಾಗೂ ಸಂತೋಷ್, ಪಿಎಸ್‍ಐ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮೂರು ಜನ ಪೊಲೀಸರು, ಹೋಂ ಗಾಡ್ರ್ಸ್ ಸಹಾಯದೊಂದಿಗೆ ಕಳ್ಳರ ಗ್ಯಾಂಗಿನ ಬೆನ್ನತ್ತಿದ್ದಾರೆ. ಈ ವೇಳೆ ಹಳ್ಳಿಯ ದಾರಿಯಲ್ಲಿ ತಪ್ಪಿಸಿಕೊಳ್ಳುತ್ತಾರೆ. ಆನಂತರ ಪೊಲೀಸರು ಕುದಾಪುರ ಬಳಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತರು ಬರ್ತಾರೆ | ದೂರುಗಳಿದ್ರೆ ಸಲ್ಲಿಸಿ
ಕುದಾಪುರ ಬಳಿ ಬೊಲೆರೋ ಪಿಕಪ್ ಪತ್ತೆ ಮಾಡಿದಾಗ ಕಳ್ಳರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಜೀಪ್‍ನ ವೈಪರ್ ಹಾಗೂ ಗ್ಲಾಸ್ ಹಾನಿಗೊಳಗಾಗಿವೆ.
ಪಿಎಸ್‍ಐ ಶಿವಕುಮಾರ್
ತಕ್ಷಣ ಜೀವ ರಕ್ಷಣೆಗಾಗಿ ಪಿಎಸ್‍ಐ ಶಿವಕುಮಾರ್ ತಮ್ಮ ಬಳಿಯಿದ್ದ ರಿವಾಲ್ವರ್‍ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಬಗ್ಗೆದೆ ತಪ್ಪಿಸಿಕೊಂಡ ಗ್ಯಾಂಗ್ ಬೆನ್ನತ್ತಿದ ಪೊಲೀಸರು ರಾತ್ರಿ ವೇಳೆಯಲ್ಲೇ ಸುಮಾರು 25 ಕಿ.ಮೀ ಚೇಸ್ ಮಾಡಿದ್ದಾರೆ. ಈ ವೇಳೆ ಬೊಲೆರೋ ಪಿಕಪ್ ಟೈಯರ್‍ಗೆ ಮೂರು ಸುತ್ತು ಶೂಟ್ ಮಾಡಲು ಶಿವಕುಮಾರ್ ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: 2027ರ ವರ್ಷಾಂತ್ಯಕ್ಕೆ ನೇರ ರೈಲ್ವೆ ಕಾಮಗಾರಿ ಪೂರ್ಣ | ಸಚಿವ ವಿ.ಸೋಮಣ್ಣ
ಆದರೆ, ಕಳ್ಳರು ಕುದಾಪುರ, ನೇರ್ಲಗುಂಟೆ, ದೇವನಹಳ್ಳಿ, ಗಜ್ಜುಗಾನಹಳ್ಳಿ, ರಾಮಸಾಗರ, ಹಿರೇಹಳ್ಳಿ ಅಂಡರ್‍ಪಾಸ್ ಮೂಲಕ ಗೌರಸಮುದ್ರದವರೆಗೆ ಬೆನ್ನಟ್ಟಿದ್ದಾರೆ. ಆನಂತರ, ಕಳ್ಳರು ಹಳ್ಳಿಗಳ ಮೂಲಕ ಆಂಧ್ರಪ್ರದೇಶ ಪ್ರವೇಶಿಸಿದ್ದಾರೆ.
ಈ ಬಗ್ಗೆ ಚಳ್ಳಕೆರೆ ಡಿವೈಎಸ್ಪಿ ಅವರಿಗೂ ಮಾಹಿತಿ ನೀಡಿದ್ದು, ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೂ ರಾತ್ರಿ ಅಲರ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಕೋಟೆನಾಡಿನಲ್ಲಿ ಚುರುಕಾಯ್ತು ಮಳೆ | ಶೀತಗಾಳಿಗೆ ಜನ ಹೈರಾಣು
ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಿಕೊಂಡು, ಲಭ್ಯವಾಗಿರುವ ಮಾಹಿತಿ ಆಧರಿಸಿ ಗ್ಯಾಂಗ್ ಪತ್ತೆ ಮಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.