ಮುಖ್ಯ ಸುದ್ದಿ
ಇಂದು ಸಂಜೆ ಚಿತ್ರದುರ್ಗಕ್ಕೆ ‘ನಂದಿ ರಥಯಾತ್ರೆ’

CHITRADURGA NEWS | 20 FEBRUARY 2025
ಚಿತ್ರದುರ್ಗ: ದೇಸಿ ಗೋವಿನ ಮಹತ್ವ ಸಾರುವುದು, ಗೋ ಆಧಾರಿತ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಲೋಕ ಕಲ್ಯಾಣದ ಉದ್ದೇಶದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ನಂದಿ ರಥಯಾತ್ರೆ’ ಫೆ.20 ಗುರುವಾರ (ಇಂದು) ಸಂಜೆ 4.30ಕ್ಕೆ ಚಿತ್ರದುರ್ಗ ನಗರಕ್ಕೆ ಆಗಮಿಸುತ್ತಿದೆ.
ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಸಹಯೋಗದಲ್ಲಿ 2024 ಡಿಸೆಂಬರ್ 31 ರಿಂದ ಪ್ರಾರಂಭವಾಗಿರುವ ‘ನಂದಿ ರಥಯಾತ್ರೆ’ 2025 ಮಾರ್ಚ್ 29 ರವರೆಗೆ ರಾಜ್ಯಾದ್ಯಂತ ಸಂಚರಿಸಲಿದೆ.

ಇದನ್ನೂ ಓದಿ: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ
ಫೆ.20, ಇಂದು ಸಂಜೆ 4.30ಕ್ಕೆ ನಗರ ಪ್ರವೇಶಿಸುವ ‘ನಂದಿ ರಥಯಾತ್ರೆ’ ಚಳ್ಳಕೆರೆ ಗೇಟ್‍ನಿಂದ ಬಿ.ಡಿ.ರಸ್ತೆ ಮೂಲಕ ಶ್ರೀ ಕಬೀರಾನಂದ ಮಠದವರೆಗೆ ಸಾಗಲಿದೆ.
ಈಗ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಗೋ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
