ಮುಖ್ಯ ಸುದ್ದಿ
ಜೋಗಿಮಟ್ಟಿ ಮಡಿಲಲ್ಲಿ ಧ್ಯಾನಮಗ್ನ ಮುಕ್ತಿನಾಥ | 31 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆಗೆ ದಿನಗಣನೆ
CHITRADURGA NEWS | 05 MARCH 2024
ಚಿತ್ರದುರ್ಗ: ಜೋಗಿಮಟ್ಟಿ ಗಿರಿಧಾಮದ ಮಡಿಲಿನಲ್ಲಿ ಧ್ಯಾನಮಗ್ನವಾಗಿದ್ದಾನೆ ಮುಕ್ತಿನಾಥ. ಶಿವರಾತ್ರಿ ಸಂಭ್ರಮಕ್ಕೆ ಭಕ್ತರಿಗೆ ದರ್ಶನದ ಭಾಗ್ಯ ಕಲ್ಪಿಸಿದೆ ಶ್ರೀ ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್.
ನಗರದ ಜೋಗಿಮಟ್ಟಿ ರಸ್ತೆಯ ಜಟ್‌ಪಟ್ ನಗರದ ವೃತ್ತದ ಬಳಿಯ ಸ್ವಾಮಿ ವಿವೇಕಾನಂದ ನಗರದಲ್ಲಿ ತಲೆ ಎತ್ತಿದೆ ಬರೋಬ್ಬರಿ 31 ಅಡಿ ಎತ್ತರದ ಧ್ಯಾನಮಗ್ನ ಶಿವನ ಪ್ರತಿಮೆ. ಈ ಪ್ರತಿಮೆಯ ಲೋಕಾರ್ಪಣೆ ಹಾಗೂ 3 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ ಮಾರ್ಚ್ 7 ರಿಂದ 9 ರವರೆಗೆ ನಡೆಯಲಿವೆ.
ಕ್ಲಿಕ್ ಮಾಡಿ ಓದಿ: https://chitradurganews.com/heavy-rain-forecast/
ಮಾರ್ಚ್ 7 ರ ಬೆಳಿಗ್ಗೆ 9 ಗಂಟೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದ ಆವರಣದಿಂದ ಪುಷ್ಪಾಲಂಕೃತ ಬೆಳ್ಳಿ ರಥದಲ್ಲಿ ಶ್ರೀ ಮುಕ್ತಿನಾಥೇಶ್ವರ ಸ್ವಾಮಿ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗಲಿದೆ. ದೇವಸ್ಥಾನದಿಂದ ಗಾಂಧಿ ವೃತ್ತ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಕರುವಿನಕಟ್ಟೆ ವೃತ್ತ, ಜಟ್‌ಪಟ್ ನಗರ ವೃತ್ತದ ಮಾರ್ಗವಾಗಿ ದೇವಸ್ಥಾನ ತಲುಪಲಿದೆ. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಗೊರವ ಕುಣಿತ, ಟ್ರಾಶ್ ವಾದ್ಯ, ಉರುಮೆ ಮತ್ತು ಶಾರದ ಬ್ರಾಸ್ ಬ್ಯಾಂಡ್ ವಾದ್ಯಗಳು ಸಾಗಲಿವೆ.
ಕ್ಲಿಕ್ ಮಾಡಿ ಓದಿ: https://chitradurganews.com/chitradurga-will-be-hit-by-water-shortage/
ಶ್ರೀ ಮುಕ್ತಿನಾಥೇಶ್ವರಸ್ವಾಮಿ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸೇವಾ ಸಮಿತಿ ಟ್ರಸ್ಟ್ :
ಸಮಿತಿಯ ಗೌರವ ಅಧ್ಯಕ್ಷರಾಗಿ ಎಸ್.ವಿ.ಗುರುಮೂರ್ತಿ, ಅಧ್ಯಕ್ಷರಾಗಿ ಈ.ಅಶೋಕ್ ಕುಮಾರ್, ಉಪಾಧ್ಯಕ್ಷರಾಗಿ ಟಿ.ವೆಂಕಟೇಶ್ ಬಾಬು, ಕಾರ್ಯದರ್ಶಿ ಡಿ.ರಾಜು, ಸಹ ಕಾರ್ಯದರ್ಶಿ ಆರ್.ನಾಗರಾಜ್, ಖಜಾಂಚಿ ಎಂ.ಸೋಮಪ್ಪ, ಟ್ರಸ್ಟಿಗಳಾಗಿ ಈ.ದಿನೇಶ್, ಟಿ.ಎಲ್.ಮಂಜುನಾಥ್, ಎಚ್.ಶ್ರೀನಿವಾಸ್, ಎಚ್.ಎನ್.ವಿಜಯಕುಮಾರ್, ಎಲ್.ಮೋಹನ್, ಡಿ.ತಿಮ್ಮಣ್ಣ, ಆರ್.ತಮ್ಮಣ್ಣ ಇದ್ದಾರೆ.