Connect with us

    ಚಿತ್ರದುರ್ಗದ ಸಂಸದ, ನಾಡಿನ ಮುಖ್ಯಮಂತ್ರಿಯೇ ಆದರು

    ಲೋಕಸಮರ 2024

    ಚಿತ್ರದುರ್ಗದ ಸಂಸದ, ನಾಡಿನ ಮುಖ್ಯಮಂತ್ರಿಯೇ ಆದರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 16 APRIL 2024

    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ವ್ಯಕ್ತಿಯೊಬ್ಬರು ಈ ನಾಡಿನ ಮುಖ್ಯಮಂತ್ರಿಯೇ ಆಗಿದ್ದರು. ಇಂಥದ್ದೊಂದು ಹೆಗ್ಗಳಿಕೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಗಿರುವುದು ಹೆಮ್ಮೆಯ ವಿಚಾರವಾಗಿದೆ.

    ಹೌದು, 1952ರಲ್ಲಿ ಅಂದರೆ ಇಂದಿಗೆ 72 ವರ್ಷಗಳ ಹಿಂದೆ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದು ರಾಜಕೀಯ ಪ್ರವೇಶ ಮಾಡಿದ ಆ ಮಹನೀಯರು, ಕನ್ನಡ ನಾಡಿನ ಮುಖ್ಯಮಂತ್ರಿ ಆಗಿದ್ದರು.

    ಇದನ್ನೂ ಓದಿ: 50 ಸಾವಿರ ದಾಟಿದ ರಾಶಿ ಅಡಿಕೆ ಬೆಲೆ | ಚನ್ನಗಿರಿ ಮಾರುಕಟ್ಟೆಯಲ್ಲಿ ಸೋಮವಾರದ ಧಾರಣೆ 50539

    ರಾಷ್ಟ್ರನಾಯಕ ಎಂದೇ ಖ್ಯಾತರಾಗಿರುವ ಎಸ್.ನಿಜಲಿಂಗಪ್ಪ, ದುರ್ಗದ ಜನರ ಪಾಲಿನ ಎಸ್ಸೆನ್ ರಾಜ್ಯದ ಮೊದಲ ಮುಖ್ಯಮಂತ್ರಿ ಮಾತ್ರವಲ್ಲ. ಚಿತ್ರದುರ್ಗದ ಮೊದಲ ಸಂಸದರೂ ಹೌದು.

    ಈಗಿನ ದಾವಣಗೆರೆ ಹಾಗೂ ಚಿತ್ರದುರ್ಗ ಹಿಂದೆ ಅಖಂಡ ಜಿಲ್ಲೆಯಾಗಿತ್ತು. ಆಗ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿಯಿಂದ ಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕೆ ಬಂದಿದ್ದ ಎಸ್.ನಿಜಲಿಂಗಪ್ಪ, ಚಿತ್ರದುರ್ಗ ನ್ಯಾಯಾಲಯದಲ್ಲಿ ವಕೀಲಿಕೆ ಮಾಡಿಕೊಂಡು, ಜನರ ಜೊತೆಗೆ ಉತ್ತಮ ಒಡನಾಟ ಹೊಂದಿರುತ್ತಾರೆ.

    ಇದನ್ನೂ ಓದಿ: ನಾನು ಈಗ ಯಾವುದೇ ಪಕ್ಷದಲ್ಲಿ ಇಲ್ಲ | ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್

    ಇದೇ ವೇಳೆಗೆ ರಾಜಕೀಯ ಧುರೀಣರು, ನಿಜಲಿಂಗಪ್ಪ ಅವರನ್ನು ಸಂಪರ್ಕಿಸಿ ಚುನಾವಣಾ ರಾಜಕೀಯಕ್ಕೆ ಆಹ್ವಾನ ಮಾಡುತ್ತಾರೆ, ಆದರೆ, ಎಸ್ಸೆನ್ ಇದಕ್ಕೆ ಒಪ್ಪುವುದಿಲ್ಲ. ಆದರೆ, ಪಟ್ಟು ಬಿಡದೇ ಅವರ ಹಿಂದೆ ಬಿದ್ದ ಅಂದಿನ ನಾಯಕರು ಕಡೆಗೂ ಯುವಕರಾಗಿದ್ದ ನಿಜಲಿಂಗಪ್ಪ ಅವರನ್ನು ರಾಜಕಾರಣಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾರೆ.

    ಆಗ ಅವರು ಮೊದಲು ಸ್ಪರ್ಧೆ ಮಾಡುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲೇ ಭರ್ಜರಿ ಮತ ಗಳಿಸುವ ಮೂಲಕ ಈ ಜಿಲ್ಲೆಯ ಮೊದಲ ಸಂಸದರಾಗಿ ಆಯ್ಕೆಯಾಗುತ್ತಾರೆ. ಈ ಚುನಾವಣೆಯಲ್ಲಿ ಎಸ್.ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ.

    ಇದನ್ನೂ ಓದಿ: ಬಬ್ಬೂರು ಫಾರ್ಮ್‌ ಕಾಮಗಾರಿ | ಎಇಇ, ಲೆಕ್ಕ ಸಹಾಯಕ ಲೋಕಾಯುಕ್ತ ಬಲೆಗೆ

    ಇಲ್ಲಿ ನಿಜಲಿಂಗಪ್ಪ 1,26,584 ಮತಗಳನ್ನು ಪಡೆಯುತ್ತಾರೆ. ಎಸ್ಸೆನ್ ಎದುರಾಳಿಗಳಾಗಿ ಕೆ.ಎಂ.ಪಿ.ಪಿ ಪಕ್ಷದ ಜಿ.ಮರುಳಪ್ಪ 47,432 ಮತಗಳನ್ನು ಪಡೆದರೆ, ಮತ್ತೋರ್ವ ಎದುರಾಳಿ ಪಕ್ಷೇತರ ಅಭ್ಯರ್ಥಿ ಎಚ್.ಎಸ್.ವೆಂಕಟಾಚಲಪ್ಪ 44,211 ಮತ ಗಳಿಸುತ್ತಾರೆ. ಈ ಇಬ್ಬರು ಅಭ್ಯರ್ಥಿಗಳ ಮತಗಳನ್ನು ಸೇರಿಸಿದಾಗಲೂ ಎಸ್.ನಿಜಲಿಂಗಪ್ಪ ಅವರ ಗೆಲುವಿನ ಅಂತರ 34,941 ಮತಗಳಷ್ಟಾಗಿರುತ್ತದೆ. ಇಲ್ಲಿ ಎಸ್ಸೆನ್ ಅವರಿಗೆ ಸಮೀಪದ ಪ್ರತಿಸ್ಪರ್ಧಿಯೇ ಇಲ್ಲದೆ ಗೆಲ್ಲುವುದು ವಿಶೇಷವಾಗಿದೆ.

    ಮುಂದೆ ಅವರು ಈ ರಾಜ್ಯಕ್ಕೆ ಎರಡು ಅವಧಿಗೆ ಮುಖ್ಯಮಂತ್ರಿಯಾಗುವ ಮೂಲಕ, ಶಾಶ್ವತವಾಗಿ ಸ್ಮರಿಸುವಂತಹ, ಜನರಿಗೆ ಅನುಕೂಲವಾಗುವ ನೀರಾವರಿ ಯೋಜನೆ, ವಿದ್ಯುತ್ ಉತ್ಪಾಧನೆಯಂತಹ ಯೋಜನೆಗಳನ್ನು ರೂಪಿಸಿರುವುದು ಶ್ಲಾಘನೀಯ.

    ಇದನ್ನೂ ಓದಿ: ಶ್ರೀರಾಮನ ಕೃಪೆಯಿಂದ ಬದಲಾಗಲಿದೆ ಅದೃಷ್ಟ | ಇನ್ಮುಂದೆ ಈ ರಾಶಿಯವರಿಗೆ ಎಲ್ಲವೂ ಶುಭ

    ನಿಜಲಿಂಗಪ್ಪ ಸಂಸದರಾಗುವ ಮೊದಲು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

    ಆನಂತರ 1957ರಲ್ಲಿ ಎದುರಾಗುವ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆದ್ದು ಬರುತ್ತಾರೆ. ಆನಂತರದ ಅವಧಿಗೆ 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದು ಬೇಸರದ ಸಂಗತಿ.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top