ಮುಖ್ಯ ಸುದ್ದಿ
ಮಕ್ಕಳ ಆರೈಕೆಗೆ ‘ಕೂಸಿನ ಮನೆ’ ಉದ್ಘಾಟಿಸಿದ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ)
CHITRADURGA NEWS | 26 JANUARY 2024
ಚಿತ್ರದುರ್ಗ: ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಗ್ರಾಮೀಣ ಪ್ರದೇಶದ ಮಹಿಳೆಯರ ಮೂರು ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ತಾಲ್ಲೂಕಿನ ಗೊಡಬನಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಡರಹಳ್ಳಿ ಗ್ರಾಮದಲ್ಲಿ ಸಿದ್ಧಗೊಳಿಸಲಾದ ‘ಕೂಸಿನ ಮನೆ’ ಯನ್ನು ಶಾಸಕ ವೀರೇಂದ್ರ ಪಪ್ಪಿ ಅವರು ಶುಕ್ರವಾರ ಉದ್ಘಾಟಿಸಿದರು.
ಶುಕ್ರವಾರ ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಗೊಡಬನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಡರಹಳ್ಳಿ ಗ್ರಾಮದಲ್ಲಿ ಸಿದ್ದಗೊಂಡಿದ್ದ ಕೂಸಿನ ಮನೆಯನ್ನು ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಉದ್ಘಾಟಿಸಿದರು.
ಇದನ್ನೂ ಓದಿ: ಫೆಬ್ರವರಿ 2-3 ರಂದು ಸಾಣೇಹಳ್ಳಿಯಲ್ಲಿ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕೂಸಿನ ಮನೆಗೆ ಸೇರಿರುವ/ನೊಂದಾಯಿತ 02 ವರ್ಷದ ಮಗುವಿಗೆ ಪೌಷ್ಟಿಕ ಹಾಲು ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಸರ್ಕಾರವು ಬಹುತೇಕ ಮಹಿಳೆಯರ ಅದರಲ್ಲೂ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಒತ್ತುಕೊಟ್ಟು ಯೋಜನೆಗಳನ್ನು ರೂಪಿಸುತ್ತಿದೆ, 06 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿದಲ್ಲಿ, ಸದೃಢ ಸಮಾಜ ನಿರ್ಮಾಣ ಮಾಡಬಹುದು ಎನ್ನುವುದೆ ಸರ್ಕಾರದ ಆಶಯವಾಗಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ನರೇಗಾದಡಿ ಕೆಲಸ ಕೊಟ್ಟು ಕುಟುಂಬದ ಆರ್ಥಿಕತೆ ಸರಿದೂಗಿಸುವ ಮತ್ತು ಕೆಲಸದ ಸಮಯದಲ್ಲಿ ಅವರ 3 ವರ್ಷದ ಒಳಗಿನ ಮಕ್ಕಳ ಆರೈಕೆಗೂ ಸನ್ನದ್ಧವಾಗಿದೆ “ಕೂಸಿನ ಮನೆ” ಯೋಜನೆ ಎಂದರು.
ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ದಿವ್ಯಪ್ರಭು ಜಿ.ಆರ್.ಜೆ
ಸಂಬಂಧಿಸಿದ ಆರೈಕೆದಾರರು ಮತ್ತು ಅಧಿಕಾರಿಗಳಿಗೆ ಸಣ್ಣ ಮಕ್ಕಳ ಆರೈಕೆ ದೊಡ್ಡ ಜವಾಬ್ದಾರಿ ಆಗಿದ್ದು ಎಚ್ಚರ ವಹಿಸುವಂತೆ ಸೂಚಿಸಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಮಾಹಿತಿ ನೀಡಿ, ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತುಕೊಡುವ ಹಲವು ಯೋಜನೆಗಳಲ್ಲಿ *”ಕೂಸಿನ ಮನೆ”* ಯೂ ಪ್ರಮುಖಗಳಲ್ಲಿ ಒಂದಾಗಿದೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಗ್ರಾಮೀಣ ಭಾಗದ ಮಹಿಳೆಯರ ಮೂರು ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೂಸಿನ ಮನೆ ಅನುμÁ್ಟನಗೊಳಿಸಲಾಗುತ್ತಿದೆ.
ಇದನ್ನೂ ಓದಿ: 9 ತಿಂಗಳಲ್ಲಿ ಜಿಲ್ಲೆಗೆ ಭದ್ರಾ ನೀರು | ಸಚಿವ ಡಿ.ಸುಧಾಕರ್
ಸದ್ಯ ತಾಲ್ಲೂಕಿನಲ್ಲಿ 26 ಕೂಸಿನ ಮನೆಗಳ ನಿರ್ಮಾಣದ ಗುರಿ ಇದ್ದು, ಭರದಿಂದ ಸಿದ್ದಗೊಳ್ಳುತ್ತಿವೆ. ಇಂತಹ ಕೂಸಿನ ಮನೆಗಳ ನಿರ್ವಹಿಸಲು ರೊಟೇಷನ್ ಆಧಾರದ ಮೇಲೆ 8 ಆರೈಕೆದಾರರನ್ನು ಗುರುತಿಸಿ ಸದ್ಯ 5 ಜನರಿಗೆ 7 ದಿನ ಮಕ್ಕಳ ನಿರ್ವಹಣೆ ಬಗ್ಗೆ ಪಂಚಾಯತ್ ರಾಜ್ ಮತ್ತು ಎಸ್ ಐ ಆರ್ ಡಿ ಸಂಸ್ಥೆಯ ನುರಿತವರಿಂದ ವೈಜ್ಞಾನಿಕವಾಗಿ ತರಬೇತಿ ನೀಡಲಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಮೂರು ವರ್ಷದೊಳಗಿನ ಮಕ್ಕಳ ಸಮೀಕ್ಷೆ ಮತ್ತು ಪ್ರಚಾರ ಕಾರ್ಯ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಧು ರಮೇಶ್, ಸಹಾಯಕ ನಿರ್ದೇಶಕ ಎರ್ರಿಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳ ಮತ್ತು ಸಿಬ್ಬಂದಿ, ಐಇಸಿ ಸತ್ಯನಾರಾಯಣ, ಪಿಡಿಒ ಭವಾನಿ, ಗ್ರಾ.ಪಂ ಸಿಬ್ಬಂದಿ, ಅಂಗವಾಡಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.