ಮುಖ್ಯ ಸುದ್ದಿ
Madakari Nayaka; ಅ.13 ರಂದು ವಕೀಲರ ಸಂಘದಿಂದ ಮದಕರಿ ನಾಯಕ ನಾಟಕ ಪ್ರದರ್ಶನ
CHITRADURGA NEWS | 08 OCTOBER 2024
ಚಿತ್ರದುರ್ಗ: ಜಿಲ್ಲಾ ವಕೀಲರ ಸಂಘ ಹಾಗೂ ಸಂಸ್ಕೃತಿಕ ಬಳಗದಿಂದ ಅಕ್ಟೋಬರ್ 13 ರಂದು ನ್ಯಾಯಾಲಯದ ಆವರಣದಲ್ಲಿ ಮದಕರಿ ನಾಯಕ(madakari nayaka) ಜಯಂತಿ ಹಾಗೂ ದಸರಾ ಹಬ್ಬದ ಅಂಗವಾಗಿ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕ ಪ್ರದರ್ಶನ(Drama performance) ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವುಯಾದವ್ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: Apmc: ಮಾರುಕಟ್ಟೆ ಧಾರಣೆ | ಅಕ್ಟೋಬರ್ 08 | ಚಿತ್ರದುರ್ಗದಲ್ಲಿ ಇಂದಿನ ಹತ್ತಿ ರೇಟ್
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸಂಗೀತ ಶಿಕ್ಷಕರಾಗಿ ಜಿ.ಮೂಗಬಸಪ್ಪ, ನಾಟಕ ತರಬೇತುದಾರರಾಗಿ ಎಂ.ಎಚ್ ಮರಿಸ್ವಾಮಿ ಅವರ ನೇತೃತ್ವದಲ್ಲಿ ಅ.13 ರಂದು ಸಂಜೆ 8 ಗಂಟೆಗೆ ತುಮಕೂರಿನ ಶ್ರೀ ಲತಾ ಹೈಡ್ರಾಲಿಕ್ ಆಟೋಮೇಟಕ್ ಎಲ್.ಇ.ಡಿ.ಡ್ರಾಮ ಸೀನರಿಯಲ್ಲಿ ಡಿ.ಟಿ.ಎಸ್ ಧ್ವನಿವರ್ಧಕ ಯಂತ್ರಗಳಿಂದ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ರಂಗ ಸಜ್ಜಿಕೆಯಲ್ಲಿ ವಕೀಲರು ರೋಚಕ ಇತಿಹಾಸದ ನಾಟಕವನ್ನು ಪ್ರಪ್ರಥಮ ಬಾರಿಗೆ ಚಿತ್ರದುರ್ಗದ ವಕೀಲರು ರಂಗಭೂಮಿಯಲ್ಲೂ ಖಡಕ್ ಪ್ರದರ್ಶನ ನೀಡಲು ತಯಾರಾಗಿದ್ದಾರೆ ಎಂದರು.
ಕ್ಲಿಕ್ ಮಾಡಿ ಓದಿ: VV sagara; ವಾಣಿವಿಲಾಸ ಜಲಾಶಯಕ್ಕೆ ಒಂದೇ ವಾರದಲ್ಲಿ ಹರಿದು ಬಂತು ಒಂದು TMC ನೀರು
ಹೈಕೋರ್ಟ್ ನ್ಯಾಯಮೂರ್ತಿಗಳಾದ ವೆಂಕಟೇಶ ನಾಯ್ಕ್ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ನ್ಯಾಯಾದೀಶರಾಧ ರೋಣ್ ವಾಸುದೇವ್, ಹೆಚ್ಚುವರಿ ಜಿಲ್ಲಾ ನ್ಯಾಯಾದೀಶರಾದ ನಿಂಬಣ್ಣಕಲ್ಕಣ, ಗಂಗಾಧರ್ ಹಡಪದ್ ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ನ್ಯಾಯಾವಾದಿಗಳು ಇತರರು ಭಾಗವಹಿಸುವರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಎಸ್. ವಿಜಯಕುಮಾರ್ ಅಧ್ಯಕ್ಷರಾಗಿದ್ದಾಗ ಆಶಾಲತಾ ಎಂಬ ಸಾಮಾಜಿಕ ನಾಟಕ, ನಂತರ ಸಿ. ಶಿವುಯಾದವ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕ ಎರಡು ಬಾರಿ ಅದ್ಭುತವಾಗಿ ಮಾಡಿದ್ದು, ಇದೀಗ ನನ್ನ ಅವಧಿಯಲ್ಲಿ ರಾಜವೀರ ಮದಕರಿನಾಯಕ ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದರು.
ಕ್ಲಿಕ್ ಮಾಡಿ ಓದಿ: Mysuru; ಮುಂದಿನ ವರ್ಷ ಮೈಸೂರಿನಲ್ಲಿ ನರ್ಸಿಂಗ್ ಕಾಲೇಜು ಆರಂಭಕ್ಕೆ ಚಿಂತನೆ | ಎಂ.ಸಿ.ರಘುಚಂದನ್
ಪಾತ್ರವರ್ಗದಲ್ಲಿ ರಾಜವೀರ ಮದಕರಿನಾಯಕರಾಗಿ ಎಸ್.ವಿದ್ಯಾಧರ, ದೊಡ್ಡ ಮದಕರಿನಾಯಕರಾಗಿ ಎನ್. ಶರಣಪ್ಪ, ಶಾಂತವೀರ ಮುರುಘಾ ಸ್ವಾಮಿಜಿಯಾಗಿ ಜಿ.ಸಿ.ದಯಾನಂದ, ಸಿದ್ದಪುರುಷರಾಗಿ ಟಿ. ಶಿವಾರಾಧ್ಯ, ಪರಶುರಾಮ ನಾಯಕರಾಗಿ ಎಂ.ಮೂರ್ತಿ, ಭರಮಣ್ಣ ನಾಯಕರಾಗಿ ಟಿ.ಭೋಸಯ್ಯ, ಹೈದರಾಲಿಖಾನ್ ಪಾತ್ರದಲ್ಲಿ ಶಿವುಯಾದವ್, ಕೃಷ್ಣಪ್ಪ ನಾಯಕರಾಗಿ ಎಂ.ಕೆ.ಲೋಕೇಶ್, ನಿಡುಗಲ್ ದೊರೆ ಕಾಮರಾಜರಾಗಿ ಟಿ.ರವಿ ಸಿದ್ದಾರ್ಥ, ಸೋಮಶೇಖರ್ ನಾಯಕರಾಗಿ ಸೋಮಶೇಖರ್ ರೆಡ್ಡಿ, ದಿವಾನ್ ಪೂರ್ಣಯ್ಯರಾಗಿ ಮಾಲತೇಶ್ ಅರಸ್, ಲಾವಣ ಲಿಂಗಯ್ಯರಾಗಿ ಡಾ.ಎಂ.ಸಿ.ನರಹರಿ, ಶಕುನಿ ಶಂಕರಯ್ಯನಾಗಿ ಜೆ.ಕಿರಣ್ ಜೈನ್, ಧನ್ ಸಿಂಗ್ ಪಾತ್ರದಲ್ಲಿ ಕೆ.ಚಂದ್ರಶೇಖರಪ್ಪ, ರಾಜಮಾತೆ ಓಬವ್ವ ನಾಗತಿಯಾಗಿ ಲಕ್ಷ್ಮಿ ಶ್ರೀಧರ್, ಪದ್ಮಾಂಬಿಕೆಯಾಗಿ ಚಂದನ, ನೃತ್ಯ ಕಲಾವಿದೆಯಾಗಿ ಮೌನೇಶ್ ಬಡಿಗೇರ ಪಾತ್ರ ನಿರ್ವಹಿಸಲಿದ್ದಾರೆ.
ಕ್ಲಿಕ್ ಮಾಡಿ ಓದಿ: Chitradurga jail: ಜೈಲಿನಲ್ಲಿ ಮುರುಘಾ ಶರಣರು ಓದಿದ ಪುಸ್ತಕಗಳು ಎಷ್ಟು ಗೊತ್ತಾ ?
ಈ ವೇಳೆ ನ್ಯಾಯವಾದಿಗಳಾದ ಆಶೋಕ ಬೆಳಗಟ್ಟ, ಕುಮಾರ್, ವಿಜಯಕುಮಾರ್, ಲೋಕೇಶ್, ವಿದ್ಯಾಧರ, ವೆಂಕಟೇಶ್ ಮೂರ್ತಿ, ಶರಣಪ್ಪ, ಬೋಸಯ್ಯ, ವಿರೇಶ್, ದಯಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.