ಕ್ರೈಂ ಸುದ್ದಿ
ಬೈಕ್ ಲಾರಿ ಡಿಕ್ಕಿ | ಇಬ್ಬರು ಯುವಕರು ಮೃತ

Published on
CHITRADURGA NEWS | 07 FEBRUARY 2025
ಚಿತ್ರದುರ್ಗ: ತಾಲೂಕಿನ ಗುಡ್ಡದರಂಗವ್ವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಮೃತರನ್ನು ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕು ಬಸಪ್ಪನಹಟ್ಟಿ ನಿವಾಸಿಗಾಳದ ಮಧುಸೂದನ್(29) ಹಾಗೂ ಶ್ರೀಕಾಂತ್(20) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: SRS ಕಾಲೇಜಿಗೆ ಮತ್ತೊಂದು ಗರಿ | ಬಿಸಿಎ ವಿದ್ಯಾರ್ಥಿನಿಗೆ 5ನೇ ರ್ಯಾಂಕ್
ಕಲ್ಲೆದೇವರಪುರ ಕಡೆಯಿಂದ ಚಿತ್ರದುರ್ಗ ಕಡೆಗೆ ಬರುವಾಗ ಲಾರಿ ಡಿಕ್ಕಿಯಾಗಿದೆ. ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Continue Reading
You may also like...
Related Topics:accident, Bike Accident, Chitradurga Latest, Chitradurga news, Guddadarangavvanahalli, Kannada News, Lorry Collision, national highway, Police, ಅಪಘಾತ, ಕನ್ನಡ ಸುದ್ದಿ, ಗುಡ್ಡದರಂಗವ್ವನಹಳ್ಳಿ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಪೊಲೀಸ್, ಬೈಕ್ ಅಪಘಾತ, ರಾಷ್ಟ್ರೀಯ ಹೆದ್ದಾರಿ, ಲಾರಿ ಡಿಕ್ಕಿ

Click to comment