Connect with us

Internal Reservation; ಒಳ ಮೀಸಲಾತಿ ಮೊದಲು ಜಾರಿಯಾಗಲಿ | ಕೆನೆಪದರ ಕುತಂತ್ರಕ್ಕೆ ಬಲಿಯಾಗುವುದು ಬೇಡ

ಪಾರ್ಥಸಾರಥಿ ಗೆಳೆಯರ ಬಳಗದಿಂದ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ನಾನು ಕಂಡಂತೆ ಪಾರ್ಥಸಾರಥಿ ನೆನಪಿನ ಕಾರ್ಯಕ್ರಮ

ಮುಖ್ಯ ಸುದ್ದಿ

Internal Reservation; ಒಳ ಮೀಸಲಾತಿ ಮೊದಲು ಜಾರಿಯಾಗಲಿ | ಕೆನೆಪದರ ಕುತಂತ್ರಕ್ಕೆ ಬಲಿಯಾಗುವುದು ಬೇಡ

CHITRADURGA NEWS | 12 AUGUST 2024

ಚಿತ್ರದುರ್ಗ: ಒಳ ಮೀಸಲಾತಿ(Internal Reservation)ಗೆ ಪಂಜಾಬ್, ಹರಿಯಾಣ, ತಮಿಳುನಾಡು, ಕರ್ನಾಟಕ, ಆಂಧ್ರದಲ್ಲಿ ಹೋರಾಟ ತೀವ್ರಗೊಂಡ ಪರಿಣಾಮ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೆನೆ ಪದರ ವಿಚಾರ ಬೇಡ. ಏಕೆಂದರೆ ಸರ್ಕಾರ ಕೆನೆಪದರ ಮುಂದಿಟ್ಟುಕೊಂಡು ಒಳ ಮೀಸಲಾತಿ ಜಾರಿಗೊಳಿಸುವುದನ್ನು ತಡ ಮಾಡುಬಹುದು ಎಂದು ಎಂ.ಆರ್.ಹೆಚ್.ಎಸ್.ರಾಜ್ಯ ಕಾರ್ಯದರ್ಶಿ ರಾಯಚೂರಿನ ಅಂಬಣ್ಣ ಅರೋಲಿಕರ್ ಹೇಳಿದರು.

ಕ್ಲಿಕ್ ಮಾಡಿ ಓದಿ: Sirigere Matha: ಸಿರಿಗೆರೆ ಮಠದ ಟ್ರಸ್ಟ್ ಸಲಹಾ ಸಮಿತಿ ಪಟ್ಟಿ ಬಹಿರಂಗ | 20 ವರ್ಷಗಳ ಹಿಂದಿನ ದಾಖಲೆ ಮಠದ ವೆಬ್‍ಸೈಟ್‍ನಲ್ಲಿ ಪ್ರಕಟ

ಪಾರ್ಥಸಾರಥಿ ಗೆಳೆಯರ ಬಳಗದಿಂದ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ ನಾನು ಕಂಡಂತೆ ಪಾರ್ಥಸಾರಥಿ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಲಿತರಲ್ಲಿ ಒಳ ಮೀಸಲಾತಿ ಕುರಿತು ಜಾಗೃತಿ ಮೂಡಿಸಿದ ಪಾರ್ಥಸಾರಥಿ ಪಕ್ಷ ಬೇಧ ಮರೆತು ಎಲ್ಲರೊಂದಿಗೂ ಸಂಪರ್ಕವಿಟ್ಟುಕೊಂಡು ನಾಡಿನಾದ್ಯಂತ ಸುತ್ತಾಡಿ ಹೋರಾಟಕ್ಕೆ ಚುರುಕು ನೀಡಿದರು.

ಹಿರಿಯ ಐ.ಎ.ಎಸ್.ಅಧಿಕಾರಿಗಳ ಜೊತೆ ಒಳ ಮೀಸಲಾತಿ ವಿಚಾರವಾಗಿ ಚರ್ಚಿಸುತ್ತಿದ್ದರು. ಒಳ ಮೀಸಲಾತಿಯನ್ನು ಪಡೆದೆ ಪಡೆಯುತ್ತೇವೆಂಬ ಗಟ್ಟಿ ನಿರ್ಧಾರ ಅವರದಾಗಿತ್ತು. ದಲಿತರು ಅನುಭವಿಸುತ್ತಿರುವ ಅನ್ಯಾಯವನ್ನು ಎಲ್ಲಿ ಬೇಕಾದರೂ ವಿವರಿಸಿ ಮನವರಿಕೆ ಮಾಡಿಕೊಡುವ ತಾಕತ್ತು ಅವರಲ್ಲಿತ್ತು. ಹೋರಾಟ, ಕಾಲ್ನಡಿಗೆ, ಜಾಥ, ಪಾದಯಾತ್ರೆ ಮೂಲಕ ದಲಿತರಲ್ಲಿ ಸಂಚಲನ ಮೂಡಿಸಿದ ಪಾರ್ಥಸಾರಥಿಯ ಕನಸು ನನಸಾಗುವ ಕಾಲ ಬಂದಿದೆ.

ಆದರೆ ಮೈಮರೆತು ಕುಳಿತುಕೊಳ್ಳುವಂತಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಆದ್ದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: loan facility; ಕಾಡುಗೊಲ್ಲ ಅಭಿವೃದ್ಧಿ ನಿಗಮ | ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೆನೆ ಪದರ ಕುತಂತ್ರಕ್ಕೆ ಬಲಿಯಾಗುವುದು ಬೇಡ. ಒಳ ಮೀಸಲಾತಿಯನ್ನು ತೆಗೆದುಕೊಳ್ಳುವುದಕ್ಕೆ 75 ವರ್ಷ ಬೇಕಾಯಿತಾ? ಸುಪ್ರೀಂಕೋರ್ಟ್ ತೀರ್ಪು ಮಾದಿಗರಿಗೆ ಗೆಲುವು ಸಿಕ್ಕಂತಾಗಿದೆ. ಇದೊಂದು ನ್ಯಾಯಯುತವಾದ ಹೋರಾಟ. ರಾಜ್ಯ ಸರ್ಕಾರ ಜಾರಿಗೊಳಿಸುತ್ತದೆಂಬ ನಂಬಿಕೆಯಿದೆ ಎಂದರು.

ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟದ ನಿರ್ದೇಶಕ ಡಾ.ಶಿವಾನಂದ ಕಳೆಗಿನಮನಿ ಮಾತನಾಡಿ, ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟುಹಾಕಿದ ಪ್ರೊ.ಬಿ.ಕೃಷ್ಣಪ್ಪನವರ ಪೀಠ ಸ್ಥಾನಪನೆಯಾಗಬೇಕೆಂದು ಮೊಟ್ಟ ಮೊದಲು ಧ್ವನಿಯೆತ್ತಿದ ಹೋರಾಟಗಾರ ಪಾರ್ಥಸಾರಥಿಯಲ್ಲಿ ವಿಶಾಲವಾದ ತಿಳುವಳಿಕೆಯಿತ್ತು.

ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಒಳ ಮೀಸಲಾತಿ ಕುರಿತು ಸದಾ ಸಂಪರ್ಕದಲ್ಲಿರುತ್ತಿದ್ದ. ವಿಶ್ವವಿದ್ಯಾನಿಲಯಗಳ ಮೇಷ್ಟ್ರುಗಳಿಗೂ ಇಲ್ಲದಷ್ಟು ಅರಿವು ಆತನಲ್ಲಿತ್ತು. ಕರ್ನಾಟಕದ ಚರಿತ್ರೆಯನ್ನು ತುದಿ ನಾಲಿಗೆಯಲ್ಲಿರಿಸಿಕೊಂಡಿದ್ದ ಎಂದು ಹೋರಾಟದ ಹಾದಿಯನ್ನು ನೆನಪಿಸಿಕೊಂಡರು.

ಸಾಂಸ್ಕøತಿಕ ನಾಯಕರನ್ನು ಬೆಳಕಿಗೆ ತರುವ ಹಂಬಲದಲ್ಲಿದ್ದ ಪಾರ್ಥಸಾರಥಿಯಲ್ಲಿ ಸೂಕ್ಷ್ಮ ಸಂವೇದನೆಯಿತ್ತು. ಸಮಾಜದ ಹಿತಕ್ಕಾಗಿ ಆತನ ಹೋರಾಟ ಪ್ರಾಮಾಣಿಕವಾಗಿತ್ತು ಎಂದು ಹೇಳಿದರು.

ಕ್ಲಿಕ್ ಮಾಡಿ ಓದಿ: Adumalleshwara Zoo: ಆಹಾ ಬನ್ನಿ ಜೋಗಿಮಟ್ಟಿ – ಆಡುಮಲ್ಲೇಶ್ವರದ ಸೊಬಗ ನೋಡಿ | ವೀಡಿಯೋ ಸ್ಟೋರಿ

ಹೋರಾಟಗಾರ ದಲಿತ ಸಂಘರ್ಷ ಸಮಿತಿ ದಾವಣಗೆರೆಯ ಬಿ.ಎಂ.ಹನುಮಂತಪ್ಪ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಟಿ.ತಿಪ್ಪೇಸ್ವಾಮಿ ಇವರುಗಳು ಮಾತನಾಡಿದರು.

ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಚಳ್ಳಕೆರೆ ನಗರಸಭೆ ಮಾಜಿ ಸದಸ್ಯ ಎಂ.ಶಿವಮೂರ್ತಿ, ನ್ಯಾಯವಾದಿಗಳಾದ ಶರಣಪ್ಪ, ಬೀಸ್ನಳ್ಳಿ ಜಯಣ್ಣ, ಸಿ.ಮುನಿಸ್ವಾಮಿ, ಡಾ.ಎಂ.ಶ್ರೀನಿವಾಸ್‍ಮೂರ್ತಿ, ಮಂಡ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ.ಬರಗೂರಪ್ಪ, ಡಾ.ಮಂಜುನಾಥ್, ನಿವೃತ್ತ ಉಪನ್ಯಾಸಕ ಚಂದ್ರಣ್ಣ ಬೆಳ್ಳಿಪಟ್ಲು, ಶಿಕ್ಷಣ ಇಲಾಖೆಯ ಡಾ. ಹಂಪಿಲಿಂಗಯ್ಯ, ಎಂ.ಆರ್.ಹೆಚ್.ಎಸ್.ಜಿಲ್ಲಾಧ್ಯಕ್ಷ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‍ಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version