ಹೊಸದುರ್ಗ
ಅಡಿಕೆ ತೋಟದಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ | ಹತ್ತು ಕುರಿ ಸಾವು

Published on
CHITRADURGA NEWS | 05 MARCH 2025
ಹೊಸದುರ್ಗ: ಅಡಿಕೆ ತೋಟವೊಂದರಲ್ಲಿ ಮಂದೆ ಇದ್ದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿದಿದೆ.
ಹೊಸದುರ್ಗ ತಾಲೂಕು ಮಾಡದಕೆರೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಶೇಖರಪ್ಪ ಎಂಬುವವರ ತೋಟದಲ್ಲಿ ಮಂದೆ ಇದ್ದಾಗ ಚಿರತೆ ದಾಳಿ ಮಾಡಿದೆ.
ಇದನ್ನೂ ಓದಿ: ಲೇಔಟ್‍ನಲ್ಲಿ ಬೆಳ್ಳಂ ಬೆಳಗ್ಗೆ ಕರಡಿಯ ವಾಕಿಂಗ್
ಮಾಡದಕೆರೆಯ ರವಿಕುಮಾರ್ ಎಂಬುವವರಿಗೆ ಸೇರಿದ 10 ಕುರಿ ಮರಿಗಳು ಚಿರತೆ ದಾಳಿಯಿಂದ ಮೃತಪಟ್ಟಿವೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆ ಹಾವಳಿ ಜಾಸ್ತಿಯಾಗಿದ್ದು, ಸೆರೆ ಹಿಡಿದು ರೈತರನ್ನು ಕಾಪಾಡಲು ಆಗ್ರಹ ಮಾಡಿದ್ದಾರೆ.
Continue Reading
Related Topics:Adike Tota, Chitradurga, Chitradurga news, Hosadurga, Leopard Attack, Madadakere, Sheep Death, ಅಡಿಕೆ ತೋಟ, ಕುರಿ ಸಾವು, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿರತೆ ದಾಳಿ, ಮಾಡದಕೆರೆ, ಹೊಸದುರ್ಗ

Click to comment