Connect with us

    ಗಣಿತ ಕಲಿಕೆ ಈಗ ಇನ್ನೂ ಸುಲಭ

    ನಗರದ ಡಯಟ್ ನಲ್ಲಿ ಬಿಲ್ಡಿಂಗ್ ಬ್ಲಾಕ್ಸ್ಆಪ್ ಬಗ್ಗೆ ಮಾಹಿತಿ

    ಮುಖ್ಯ ಸುದ್ದಿ

    ಗಣಿತ ಕಲಿಕೆ ಈಗ ಇನ್ನೂ ಸುಲಭ

    CHITRADURGA NEWS | 29 APRIL 2024

    ಚಿತ್ರದುರ್ಗ: 1 ರಿಂದ 8 ತರಗತಿವರೆಗಿನ ಮಕ್ಕಳು ಬಿಲ್ಡಿಂಗ್ ಬ್ಲಾಕ್ಸ್ಆಪ್ ಮೂಲಕ ಸುಲಭವಾಗಿ ಗಣಿತ ಕಲಿಯಬಹುದು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ತಿಳಿಸಿದರು.

    ಇದನ್ನೂ ಓದಿ : ಚಿತ್ರದುರ್ಗದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಚಿಂತನಾ ಬೈಠಕ್

    ನಗರದ ಡಯಟ್ ನಲ್ಲಿ ಬಿಲ್ಡಿಂಗ್ ಬ್ಲಾಕ್ಸ್ಆಪ್ ಬಗ್ಗೆ ಮಾಹಿತಿ ನೀಡಿದ ಅವರು, ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಗಣಿತದ ಮೂಲಕ ಕ್ರಿಯೆಗಳನ್ನು ಆಟದ ಮೂಲಕ ತಿಳಿಯಲು ಅಕ್ಷರ ಫೌಂಡೇಶನ್ ಅವರು ತಯಾರಿಸಿರುವ ಬಿಲ್ಡಿಂಗ್ ಬ್ಲಾಕ್ಸ್ಆಪ್ ಸಹಕಾರಿಯಾಗಲಿದೆ.

    ಮಕ್ಕಳಿಗಾಗಿಯೇ ತಂದಿರುವ ಈ ಪ್ರಯೋಗಾತ್ಮಕ ಆಪ್ ಎಲ್ಲಾ ಆಂಡ್ರಾಯ್ಡ್ ಫೋನ್ ಗಳನ್ನು ಲಭ್ಯವಿದೆ, ಪಠ್ಯಾಧಾರಿತ 1 ರಿಂದ 5 ನೇ ಮತ್ತು 6 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಗಣಿತ ಕಲಿಕೆಗೆ ಎರಡು ವಿಭಾಗದಲ್ಲಿ ಅವಕಾಶ ನೀಡಲಾಗಿದ್ದು ಚಟುವಟಿಕೆ ಆಧಾರಿತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

    ಇದನ್ನೂ ಓದಿ : ಭೀಕರ ಬರಗಾಲದಲ್ಲಿ ಕೋಡಿಬಿದ್ದ ಚಿತ್ರದುರ್ಗ ಜಿಲ್ಲೆಯ ಕೆರೆ | ನೀರಿನಿಂದ ಬಂದು ಅಂತಿರಾ ಈ ಸುದ್ದಿ ನೋಡಿ…

    ಆಟದ ಮೂಲಕ ಅಭ್ಯಾಸ ಮಾಡುವುದರಿಂದ ಶಾಶ್ವತ ಕಲಿಕೆ ಉಂಟಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಕಲಿಕೆಯಲ್ಲಿ ಅಭಿವೃದ್ದಿ ಹೊಂದಬೇಕೆಂದು ತಿಳಿಸಿದರು.

    ನೋಡಲ್ ಅಧಿಕಾರಿ ಬಿ.ಎಸ್.ನಿತ್ಯಾನಂದ ಮಾತನಾಡಿ, ಮಕ್ಕಳಿಗೆ ಗಣಿತದಲ್ಲಿ ಪರಿಣಿತಿ ಪಡೆಯಲು ಬೇಕಾದ ಕೌಶಲ್ಯ ಮತ್ತು ಆತ್ಮಸ್ಥೈರ್ಯ ಮೂಡಿಸಲು ಸಾಂಪ್ರದಾಯಿಕ ಕಲಿಕೆಗೆ ವಿಭಿನ್ನವಾಗಿ ಸಿದ್ಧಪಡಿಸಲಾಗಿದೆ.

    ಈತಂತ ಅಂಶ ಉಚಿತವಾಗಿದ್ದು ಪ್ಲೇ ಸ್ಟೋರ್ ಮತ್ತು ದೀಕ್ಷಾ ಆ್ಯಪ್ ನಲ್ಲೂ ಲಭ್ಯವಿದೆ . ಶಾಲಾ ಕಲಿಕೆಗೆ ಹೊಂದಿಕೊಂಡ ಪಠ್ಯಕ್ರಮ ಮತ್ತು ಬಳಕೆದಾರ ಸ್ನೇಹಿ ಫ್ಯೂಚರ್ ಗಳೊಂದಿಗೆ ಬಿಲ್ಡಿಂಗ್ ಬ್ಲಾಕ್ಸ್ಆಪ್ ಹ್ಯಾಪ್ ವಿದ್ಯಾರ್ಥಿಗಳನ್ನು ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಗಣಿತದ ಕಲಿಕೆಯನ್ನು ಎಲ್ಲ ಮಕ್ಕಳಿಗೂ ದೊರೆಯುವಂತೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದರು.

    ಇದನ್ನೂ ಓದಿ : ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬೀಜದುಂಡೆ ಬಿತ್ತೋತ್ಸವ

    ಅಕ್ಷರ ಫೌಂಡೇಶನ್ ವ್ಯವಸ್ಥಾಪಕ ಹನುಮಂತರಾಯ ಕಣ್ಣಿ ಮಾತನಾಡಿ, ಅಕ್ಷರ ಫೌಂಡೇಶನ್ ಶಿಕ್ಷಣ ಇಲಾಖೆ ಜೊತೆಯ ಸಹಭಾಗಿತ್ವದಲ್ಲಿ ಮಕ್ಕಳ ಕಲಿಕೆಯ ಚಟುವಟಿಕೆಯಲ್ಲಿ ಪೂರಕವಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದೆ. ಶಾಲಾ ಪಠ್ಯಕ್ರಮದ ಜೊತೆಗೆ ಗಣಿತದ ಪ್ರಮುಖ ಪರಿಕಲ್ಪನೆಗಳನ್ನು ಮಕ್ಕಳ ಅಭಿವೃದ್ಧಿಗೆ ತಕ್ಕಂತೆ ಕಲಿಕೆಯನ್ನು ಆಸಕ್ತಿದಾಯಕವಾಗಿ ಹಾಗೂ ಮೋಜಿನಿಂದ ಕೂಡಿರುವಂತೆ ಈ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ.

    400ಕ್ಕೂ ಹೆಚ್ಚು ಸಂವಾದಾತ್ಮಕ ಆಟಗಳನ್ನು ಒಳಗೊಂಡಿದ್ದು ಎಲ್ಲಾ ಆಟಗಳನ್ನು ಎನ್.ಸಿ.ಇ.ಆರ್.ಟಿ.ಸಿ ಪಠ್ಯಕ್ರಮಕ್ಕೆ ಮ್ಯಾಪ್ ಮಾಡಲಾಗಿದೆ.

    ಇದನ್ನೂ ಓದಿ : ಈ ವರ್ಷ ಬಹಳ ಬಿಸಿಲು ಸ್ವಾಮೀಜಿ | ಕನ್ನಡ ಚಕ್ರವರ್ತಿ ಡಾ. ಶಿವರಾಜಕುಮಾರ್

    ಈ ವೇಳೆ ಉಪನ್ಯಾಸಕರಾದ ಎಸ್. ಬಸವರಾಜು, ಕೆ. ಜಿ. ಪ್ರಶಾಂತ್, ತಾಂತ್ರಿಕ ಸಹಾಯಕ ಕೆ. ಆರ್. ಲೋಕೇಶ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top