ಮುಖ್ಯ ಸುದ್ದಿ
ಉಪಹಾರದಲ್ಲಿ ಜಿರಳೆ, ತಡರಾತ್ರಿ ಕವಾಡಿಗರಹಟ್ಟಿ ನಿವಾಸಿಗಳ ಪ್ರತಿಭಟನೆ; ಚಿತ್ರದುರ್ಗ ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಚಿತ್ರದುರ್ಗ: ಕವಾಡಿಗರಹಟ್ಟಿಗೆ ಜಿಲ್ಲಾಡಳಿತದಿಂದ ಮಂಗಳವಾರ ರಾತ್ರಿ ಸರಬರಾಜು ಮಾಡಿದ ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡಿದೆ ಆರೋಪಿಸಿ ಎಂದು ಕವಾಡಿಗರಹಟ್ಟಿ ನಿವಾಸಿಗಳು ರಾತ್ರಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕಲುಷಿತ ನೀರಿನಿಂದ ವಾಂತಿ-ಭೇದಿ ಕಾಣಿಸಿಕೊಂಡು 6 ಜನ ಮೃತಪಟ್ಟು, 250 ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿವಾಸಿಗಳಿಗೆ ಊಟ, ಉಪಹಾರ ಪೂರೈಸುತ್ತಿತ್ತು.
ಮಂಗಳವಾರ ರಾತ್ರಿ ಸರಬರಾಜು ಮಾಡಿದ್ದ ರೈಸ್ ಬಾತ್ ನಲ್ಲಿ ಜಿರಳೆ ಕಾಣಿಸಿಕೊಂಡಿದೆ. ಈ ವಿಷಯ ವಾಟ್ಸಪ್ ಮೂಲಕ ಇಲ್ಲಿನ ಕವಾಡಿಗರಹಟ್ಟಿ ನಿವಾಸಿಗಳಿಗೆ ತಿಳಿದು ತಡರಾತ್ರಿವರೆಗೆ ಪ್ರತಿಭಟನೆ ನಡೆದಿದೆ.
ಜಿಲ್ಲಾಡಳಿತ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದೆ ಎಂದು ಸ್ಥಳೀಯರು, ಆಹಾರ ಸರಬರಾಜು ಮಾಡಿದ ಹೋಟೆಲ್ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಪೆÇಲೀಸರು ಜನರನ್ನು ಸಮಾಧಾನಪಡಿಸಿದ್ದಾರೆ.