Connect with us

    SJM ಡೆಂಟಲ್ ಕಾಲೇಜಿನಲ್ಲಿ ಕನ್ನಡ ಕಲರವ | ಡಾ.ಬಸವಕುಮಾರ ಸ್ವಾಮೀಜಿ ಭಾಗೀ

    SJM ಡೆಂಟಲ್ ಕಾಲೇಜಿನಲ್ಲಿ ಕನ್ನಡ ಕಲರವ

    ಮುಖ್ಯ ಸುದ್ದಿ

    SJM ಡೆಂಟಲ್ ಕಾಲೇಜಿನಲ್ಲಿ ಕನ್ನಡ ಕಲರವ | ಡಾ.ಬಸವಕುಮಾರ ಸ್ವಾಮೀಜಿ ಭಾಗೀ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 NOVEMBER 2024

    ಚಿತ್ರದುರ್ಗ: ಕನ್ನಡ ನಮ್ಮ ಮಾತೃ ಭಾಷೆ. ಇದನ್ನು ನಾವು ಬಳಸದೆ ಬೇರೆಯವರು ಬಳಸುತ್ತಾರಾ, ನಮ್ಮ ಭಾಷೆಗೆ ನಾವೇ ಜೀವ ತುಂಬಬೇಕು ಎಂದು ಎಸ್‌ಜೆಎಂ(SJM) ವಿದ್ಯಾಪೀಠ ಹಾಗೂ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಕ್ಲಿಕ್ ಮಾಡಿ ಓದಿ: ಕೊಲೆಯಾದ ಮಂಜುನಾಥ್ ಜೈಲಿಗೂ ಹೋಗಿ ಬಂದಿದ್ದ | ಬೇರೊಂದಿದೆ ಪ್ರೇಮ್ ಕಹಾನಿ

    ಎಸ್‌ಜೆಎಂ ದಂತ ವೈದ್ಯಕೀಯ ಮಹಾವಿದ್ಯಾಲಯದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ಕಲರವ-2024 ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

    ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಇದೆ. ಸುಮಾರು 900 ವರ್ಷಗಳ ಹಿಂದೆಯೇ ಕನ್ನಡವನ್ನು ವಿವಿಧ ರೀತಿಯ ಶಾಸನಗಳಲ್ಲಿ ಕಾಣಬಹುದಾಗಿದೆ. ಇದಲ್ಲದೆ 12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳನ್ನು ಕನ್ನಡದಲ್ಲಿ ರಚನೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳಸಿದ್ದಾರೆ. ಕನ್ನಡ ಭಾಷೆಗೆ ಹಲವರು ಕೊಡುಗೆ ನೀಡಿದ್ದಾರೆ ಎಂದರು.

    ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ವಿಗಂಡಣೆ ಮಾಡಲಾಯಿತು. ತಮಿಳು ಮಾತನಾಡುವವರಿಗೆ ತಮಿಳುನಾಡು, ಮರಾಠಿ ಮಾತನಾಡುವವರಿಗೆ ಮಹಾರಾಷ್ಟ್ರ, ಕನ್ನಡ ಭಾಷೆಯನ್ನು ಮಾತನಾಡುವವರಿಗೆ ಕರ್ನಾಟಕ ಎಂದು ಹೇಳಲಾಗಿತ್ತು. ಇಲ್ಲಿ ಕರ್ನಾಟಕ ಹಿಂದೆ ನಾಲ್ಕು ಭಾಗವಾಗಿತ್ತು. ಅದನ್ನು ಒಂದು ಮಾಡಿ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು ಎಂದು ಸ್ಮರಿಸಿದರು.

    ಕ್ಲಿಕ್ ಮಾಡಿ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ

    ಇಲ್ಲಿ ನಡೆಯುವ ಕನ್ನಡ ಕಲರವ ಬರೀ ಬಟ್ಟೆಯ ಮೇಲೆ ಆಗಬಾರದು. ಇದು ನಮ್ಮ ಬದುಕಿನಲ್ಲಿ ಇರುವಂತಾಗಬೇಕು. ಕನ್ನಡ ಭಾಷೆಯಲ್ಲಿ ಭಾವ್ಯಕ್ಯತೆ ಮೂಡಿಸುವಂತಹ ವಾತಾವರಣ ಇದೆ. ಅದು ಎಲ್ಲೆಲ್ಲೂ ಪಸರಿಸಬೇಕು ಎಂದರು.

    ಪರಕೀಯರು ನಮ್ಮನ್ನಾಳಿದ್ದರಿಂದ ಇಂದು ನಮ್ಮಲ್ಲಿ ಪರಕೀಯ ಭಾಷೆಯ ಪ್ರಮಾಣ ಹೆಚ್ಚಾಗುತ್ತಿದೆ. ಇದರ ವ್ಯಾಮೋಹ ಬಿಡಬೇಕು. ಮಾತೃ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕಿದೆ. ಕನ್ನಡ ಭಾಷೆಯ ಅಕ್ಷರದಿಂದ ನಮ್ಮ ಬದುಕನ್ನು ಕಟ್ಟುವ ಕೆಲಸವಾಗಬೇಕಿದೆ. ನಮ್ಮಲ್ಲಿ ಹಿಂದೆ ಜೈನ ಧರ್ಮದವರು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಧರ್ಮವನ್ನು ಬೆಳಸಿಕೊಂಡರು ಎಂದರು.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

    ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರುಳಿ ಎಂ ಬಸವರಾಜ್ ಉಪನ್ಯಾಸ ನೀಡಿದರು. ಪ್ರಾಚಾರ್ಯ ಡಾ.ಎಂ.ಹೆಚ್.ರಘುನಾಥ್ ರೆಡ್ಡಿ, ಉಪ ಪ್ರಾಚಾರ್ಯರಾದ ಹರಿಣಿ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top