ಮುಖ್ಯ ಸುದ್ದಿ
JEE MAINS | SRS ಕಾಲೇಜಿಗೆ ALL INDIA RANK

Published on
CHITRADURGA NEWS | 25 APRIL 2024
ಚಿತ್ರದುರ್ಗ: ನಗರದ SRSಕಾಲೇಜು ವಿದ್ಯಾರ್ಥಿ ಎನ್.ಮದನ್ ಜೆಇಇ ಮೈನ್ಸ್ ಎರಡನೇ ಸ್ಲಾಟ್ ಪರೀಕ್ಷೆಯಲ್ಲಿ ಶೇ.99.12 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ 339ನೇ ರ್ಯಾಂಕ್ ಪಡೆದಿದ್ದಾನೆ.
ಕಾಲೇಜಿನ ಒಟ್ಟು 52 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಪಿ.ಟಿ.ಸೃಜನ್(629), ಜೆ.ರೋಹಿಣಿ(739)ನೇ ರ್ಯಾಂಕ್ ಪಡೆದಿದ್ದಾರೆ.
ಇದನ್ನೂ ಓದಿ: ಮತದಾನಕ್ಕೆ ಕಾರ್ಯಕ್ಕೆ ಕೌಂಟ್‌ಡೌನ್ | ಮತಗಟ್ಟೆಗಳತ್ತ ಸಿಬ್ಬಂದಿ ಹೆಜ್ಜೆ
srsನ 78 ವಿದ್ಯಾರ್ಥಿಗಳು ಜೆಇಇ ಮೈನ್ಸ್ ಎರಡನೇ ಸ್ಲಾಟ್ನಲ್ಲಿ ಅತ್ಯುತ್ತಮ ಅಂಕಗಳಿಸಿ ಜಿಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್.ಅಮೋಘ್, ಆಡಳಿತಾಧಿಕಾರಿ ಡಾ.ರವಿ, ಪ್ರಾಚಾರ್ಯ ಈ.ಗಂಗಾಧರ್, ಉಪಪ್ರಾಚಾರ್ಯ ಬಿ.ಮನೋಹರ ಅಭಿನಂದಿಸಿದ್ದಾರೆ.
Continue Reading
You may also like...
Related Topics:achievement, Chitradurga, JEE Mains, Srs, Students, ಎಸ್ಆರ್ಎಸ್, ಚಿತ್ರದುರ್ಗ, ಜೆಇಇ ಮೈನ್ಸ್, ವಿದ್ಯಾರ್ಥಿಗಳು, ಸಾಧನೆ

Click to comment