Connect with us

ADGP ಚಂದ್ರಶೇಖರ್‍ ಅಮಾನತುಗೊಳಿಸಿ ಸೂಕ್ತ ತನಿಖೆಗೆ ಜೆಡಿಎಸ್ ಆಗ್ರಹ 

ADGP ಚಂದ್ರಶೇಖರ್‍ ಅಮಾನತುಗೊಳಿಸಿ ಸೂಕ್ತ ತನಿಖೆಗೆ ಜೆಡಿಎಸ್ ಆಗ್ರಹ 

ಮುಖ್ಯ ಸುದ್ದಿ

ADGP ಚಂದ್ರಶೇಖರ್‍ ಅಮಾನತುಗೊಳಿಸಿ ಸೂಕ್ತ ತನಿಖೆಗೆ ಜೆಡಿಎಸ್ ಆಗ್ರಹ 

CHITRADURGA NEWS | 01 OCTOBER 2024

ಚಿತ್ರದುರ್ಗ: ಭ್ರಷ್ಠಾಚಾರ, ದುರ್ನಡತೆ, ಕ್ರಿಮಿನಲ್ ಕೇಸ್‍ನಲ್ಲಿ ಭಾಗಿಯಾಗಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾದಳದ ಮುಖ್ಯಸ್ಥ ADGP ಎಂ.ಚಂದ್ರಶೇಖರ್‍ ಅವರನ್ನು ಕೂಡಲೆ ಭಾರತೀಯ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಜೆಡಿಎಸ್(JDS) ಅಗ್ರಹಿಸಿತು.

ಕ್ಲಿಕ್ ಮಾಡಿ ಓದಿ: Jayadeva Guru: ಜಯದೇವ ಶ್ರೀಗಳ ಬೆಳ್ಳಿ ಪ್ರತಿಮೆ | ಅ.5 ರಂದು ಲೋಕಾರ್ಪಣೆ

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಫಾರಸ್ಸಿನೊಂದಿಗೆ ಕಳಿಸಿಕೊಡುವಂತೆ ಕಚೇರಿ ಸಹಾಯಕರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಹಗರುವಾಗಿ ಮಾತನಾಡಿರುವ ಎಂ.ಚಂದ್ರಶೇಖರ್ ಹಂದಿಗಳ ಜೊತೆ ಗುದ್ದಾಡಿದರೆ ಮೈಯೆಲ್ಲಾ ಕೊಚ್ಚೆಯಾಗುತ್ತದೆಂಬ ಕೀಳು ಪದಗಳನ್ನು ಬಳಸಿದ್ದಾರೆ.

ಅಧಿಕಾರದ ದರ್ಪದಿಂದ ಮೆರೆಯುತ್ತಿರುವ ಹಿಮಾಚಲಪ್ರದೇಶ ಐ.ಪಿ.ಎಸ್. ಕೇಡರ್‍ಗೆ ಸೇರಿದ ಎಂ.ಚಂದ್ರಶೇಖರ್ ಪತ್ನಿಗೆ ಅನಾರೋಗ್ಯ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜಕೀಯ ಪ್ರಭಾವ ಬೀರಿ ಕರ್ನಾಟಕಕ್ಕೆ ವರ್ಗಾವಣೆಗೊಂಡು ಪ್ರಮುಖ ಆಯಕಟ್ಟಿನಲ್ಲಿ ಕೆಲಸ ಮಾಡಿರುವುದಲ್ಲದೆ ಭೂಗಳ್ಳರು, ಸಮಾಜಘಾತುಕರೊಡನೆ ಕೈಜೋಡಿಸಿ ನೂರಾರು ಪ್ರಕರಣಗಳನ್ನು ತನಿಖೆ ನಡೆಸದಿರುವುದು ದುರಂತ ಎಂದು ಪ್ರತಿಭಟನಾನಿರತರು ಆಪಾದಿಸಿದರು.

ಕ್ಲಿಕ್ ಮಾಡಿ ಓದಿ: internal reservation: ಹಿರಿಯೂರಿನಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ | ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹ

ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಕಳೆದ ತಿಂಗಳ 28 ರಂದು ರಾಜಧಾನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ರಾಜ್ಯಪಾಲರನ್ನು ಮಾಹಿತಿ ಕೇಳಿದ್ದನ್ನು ಮನದಲ್ಲಿಟ್ಟುಕೊಂಡು ದುರಹಂಕಾರದ ಮಾತುಗಳನ್ನು ಆಡಿರುವ ಎ.ಡಿ.ಜಿ.ಪಿ. ಎಂ.ಚಂದ್ರಶೇಖರ್‍ರವರನ್ನು ತಕ್ಷಣವೇ ಸೇವೆಯಿಂದ ಅಮಾನತ್ತುಪಡಿಸಿ ತನಿಖೆ ನಡೆಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ದಾವಣಗೆರೆ ಜಿಲ್ಲಾ ಉಸ್ತುವಾರಿ ಡಿ.ಯಶೋಧರ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿನಾಯಕ, ಉಪಾಧ್ಯಕ್ಷ ಮಠದಟ್ಟಿ ವೀರಣ್ಣ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version